ಕೆ.ಆರ್.ನಗರ: ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕಂಡ ಕನಸುಗಳು ನನಸಾಗ ಬೇಕಾದರೆ ಎಸ್ಸಿ ಮತ್ತು ಎಸ್ಟಿ ಸಮಾಜದವರು ಪ್ರಸ್ತುತ ಸಮಾಜ
ದಲ್ಲಿ ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ಅತಿ ಅವಶ್ಯಕ ಎಂದು ಹಳಿಯೂರು ಕ್ಷೇತ್ರದ ತಾಪಂ ಸದಸ್ಯೆ ಮಮತಾ ಹೇಳಿದರು.
ತಾಲೂಕಿನ ಹಳೆಯೂರು ಬಡಾವಣೆ ಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ 126 ನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಆದರ್ಶ ಮತ್ತು ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಸರ್ಕಾರ ಎಸ್ಸಿ ಮತ್ತು ಎಸ್ಟಿ ಸಮಾಜದವರಿಗೆ ಇನ್ನಷ್ಟು ಉನ್ನತ ಶಿಕ್ಷಣ ಉಚಿತವಾಗಿ ನೀಡಬೇಕು. ಇದರಿಂದ ಸಮಾಜದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗಲಿದೆ. ಆದ್ದರಿಂದ ಈ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣಕೊಡಿಸಿ ಎಂದರು.
ಎಪಿಎಂಸಿ ಮಾಜಿ ನಿರ್ದೇಶಕ ಶಿವಸ್ವಾಮಿ, ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷ ಜವರಯ್ಯ, ನಿರ್ದೇಶಕ ಹೆಚ್.ಆರ್.ಮಹೇಶ್, ಹಳಿಯೂರು ಗ್ರಾಪಂ ಮಾಜಿ ಅಧ್ಯಕ್ಷೆ ರಿಜ್‌ವಾನ ಮುಸ್ತಾಕ್, ಸದಸ್ಯ ಹೆಚ್.ಆರ್.ಕೃಷ್ಣಮೂರ್ತಿ, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ. ರಮೇಶ್, ಮುಖಂಡರಾದ ಚಿಕ್ಕಕೊಪ್ಪಲು ಸಿ.ಬಿ. ಲೋಕೇಶ್, ಜಯಣ್ಣ,
ಮಹದೇವ ಪಾಟೀಲ್, ಸತೀಶ್, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ನಾಗೇಂದ್ರ, ಹನುಮಂತ, ರಮೇಶ್, ಕೃಷ್ಣ, ಬಾಸ್ಕರ, ಮನುಶಿವರಾಜ್, ಸಂಜು, ಹೇಮಂತ್, ಪೇಪರ್‌ಸ್ವಾಮಿ, ಚಂದನ್, ನವೀನ್, ತೇಜ, ದರ್ಶನ್, ಬಾರ್‌ಆನಂದ್, ರಾಘು, ಸಮಂತ್, ಮಧುಸೂದನ್ ಸೇರಿದಂತೆ ಇನ್ನಿತರರು ಹಾಜರಿದ್ದರು.