Advertisement
ಈ ಅಣೆಕಟ್ಟಿನ ಶೇ. 80ರಷ್ಟು ನೀರನ್ನು ಮೂರು ವರ್ಷಗಳ ಹಿಂದೆ ಡೆವಲಪರ್‌ಗಾಗಿ ಕಾಯ್ದಿರಿಸಲಾಗಿದ್ದರೂ ಡೆವಲಪರ್ ಮಾತ್ರ ನಿರ್ಮಾಣ ಯೋಜನೆಯ ಒಂದು ಇಟ್ಟಿಗೆಯನ್ನೂ ಹಾಕಿಲ್ಲ. ಆದರೆ ಆತನಿಗಾಗಿ ಸರಕಾರ ನೀರು ಕಾಯ್ದಿರಿಸಿದ್ದರಿಂದ ಈ ಭಾಗದ 30 ಗ್ರಾಮಗಳ ಜನರು ದಾಹದಿಂದ ನರಳುತ್ತಿರುವುದು ಕಂಡುಬಂದಿದೆ.
Related Articles
Advertisement
1974ರಲ್ಲಿ ಪನ್ವೇಲ್ ತಾಲೂಕಿನ ಶಿರ್ವಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗರ್ಮಲ್ ಮೋರ್ಬೆ ಅಣೆಕಟ್ಟು ನಿರ್ಮಿಸಲಾಯಿತು. ಈ ಭಾಗದಲ್ಲಿ ರೈತರಿಗೆ ನೀರು ಪೂರೈಸಲು ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಕಾಲಕ್ರಮೇಣ ಕೃಷಿ ಕುಸಿತದಿಂದ ಅಣೆಕಟ್ಟೆಯ ನೀರಿನ ಬಳಕೆಯೂ ಕಡಿಮೆಯಾಗಿದೆ. ಇದರ ಸದುಪಯೋಗ ಪಡೆದುಕೊಂಡು ಅಣೆ ಕಟ್ಟೆಯಿಂದ ನೀರು ಕಾಯ್ದಿರಿಸುವಂತೆ ಗ್ರಾ.ಪಂ.ನಿಂದ ಬೇಡಿಕೆ ಬಂದಿಲ್ಲ ಎಂದು ನೀರಾವರಿ ಇಲಾಖೆಗೆ ತಿಳಿಸಲಾ ಯಿತು. ಡೆವಲಪರ್ಸ್ ಪ್ರಾಜೆಕ್ಟ್ನಿಂದ ನೀರು ಕಾಯ್ದಿರಿಸಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದೂ ತೋರಿಸ ಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಟಿಲವಾದ ಕುಡಿಯುವ ನೀರಿನ ಸಮಸ್ಯೆ :
ಕೃಷಿಗಿಂತ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗ ಜಟಿಲವಾಗುತ್ತಿದೆ. ಈ ಪ್ರದೇಶದಲ್ಲಿ ಅಂತರ್ಜಲ ಕುಸಿದಿದ್ದು, 500 ಅಡಿ ಆಳಕ್ಕೆ ಹೋಗಿ ಕೊಳವೆಬಾವಿಗಳಲ್ಲಿ ನೀರು ಬರುತ್ತಿದೆ. ಅಂತಹ ಸಮಯದಲ್ಲಿ, ಈ ಪ್ರದೇಶದ ಅನೇಕ ಹಳ್ಳಿಗಳು ಅಣೆಕಟ್ಟಿನ ನೀರಿಗಾಗಿ ಮೊರೆ ಹೋಗಿವೆ. ಆದರೆ ಈ ನೀರು ಕಾಯ್ದಿರಿಸಿರುವುದರಿಂದ ಗ್ರಾಮಸ್ಥರಿಗೆ ಅದು ಹೇಗೆ ಸಿಗುತ್ತದೆ ಎಂಬ ಸಂದಿಗ್ಧತೆ ಎದುರಾಗಿದೆ. ಪ್ರಸ್ತುತ ಸೋರಿಕೆ ತಡೆಯಲು ಅಣೆಕಟ್ಟಿನ ದುರಸ್ತಿ ಕಾರ್ಯ ನಡೆಯುತ್ತಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.
ಸರಕಾರದಿಂದ ನಿರ್ಲಕ್ಷ್ಯ ಆರೋಪ :
ಶಿರವಳಿ, ಮಾವು, ವಾಳಪ್, ಚಿಂದ್ರನ್, ಮುಳುಂಗಿ, ಮೋರ್ಬೆ, ಕೊಂಡ್ಲೆ ಮತ್ತು ಶಿರ್ವಾಳಿ ಸಹಿತ ಪನ್ವೇಲ್‌ನ 12 ವಿವಿಧ ಬುಡಕಟ್ಟು ಗ್ರಾಮಗಳಿಗೆ ಈ ಅಣೆಕಟ್ಟಿನ ನೀರನ್ನು ಬಳಸಿಕೊಂಡು ಜಿಲ್ಲಾಡಳಿತ ನೇರವಾಗಿ ಗ್ರಾಮಕ್ಕೆ ನೀರು ಸರಬರಾಜು ಮಾಡಬಹುದು. ಅಣೆಕಟ್ಟಿನ ಈ ನೀರನ್ನು ಓರ್ವ ಡೆವಲಪರ್‌ಗಾಗಿ ನೀಡುವ ಬದಲು ಸುಮಾರು 30 ಹಳ್ಳಿಗಳ ದಾಹ ನೀಗಿಸಬಹುದು. ಸಂಬಂಧಪಟ್ಟ ಡೆವಲಪರ್‌ಗಳು ಯಾವುದೇ ವಸತಿ ಯೋಜನೆಯನ್ನು ಸ್ಥಾಪಿಸದಿರುವಾಗ ಅವರ ಯೋಜನೆಗಳಿಗೆ ನೀರು ನೀಡಲು ನಿರ್ಧರಿಸುವ ಮೊದಲು ಸ್ಥಳೀಯ ಗ್ರಾಮಸ್ಥರ ನೀರಿನ ಸ್ಥಿತಿಯ ಬಗ್ಗೆ ಸರಕಾರ ಏಕೆ ಕೇಳಲಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.