Advertisement
ಹುಣಸೂರು ತಾಲೂಕಿನಲ್ಲಿ ತಂಬಾಕು ಬೆಳೆವ ವಿವಿಧ ಪ್ರದೇಶಗಳಲ್ಲಿ ರೈತರ ಜಮೀನಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ರೈತರಲ್ಲಿ ತಂಬಾಕು ನಿಷೇಧದ ಕುರಿತು ಹಲವು ಅನುಮಾನಗಳಿವೆ. ಆದರೆ ಅಂತಹ ಯಾವುದೇ ಆಲೋಚನೆ ಸರ್ಕಾರದ ಮಟ್ಟದಲ್ಲಿಲ್ಲ. ರೈತರು ಆತಂಕಪಡಬೇಕಿಲ್ಲ. ಆದರೆ ಕೇಂದ್ರ ಸರ್ಕಾರ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಇನ್ನಿತರ ಬೇಡಿಕೆಯುಳ್ಳ ಮತ್ತು ವಾಣಿಜ್ಯ ಬೆಳೆಗಳಾದ ಅಡುಗೆ ಎಣ್ಣೆ, ಮೆಣಸು, ಕ್ಯಾಸ್ಟರ್ ಆಯಿಲ್, ಶುಂಠಿ, ಅರಿಶಿನ ಮುಂತಾದ ಬೆಳೆಗಳ ರಫ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೈತರು ಇಂತಹ ಬೆಳೆಗಳನ್ನು ಬೆಳೆಯಲು ವಿವಿಧ ಯೋಜನೆಗಳ ಮೂಲಕ ಉತ್ತೇಜಿಸುತ್ತಿದೆ ಎಂದರು.
Related Articles
Advertisement
ಮುಂದಿನ ಸಾಲಿಗಾಗಿ ಸಿಟಿಆರ್‌ಐ ಕೇಂದ್ರದಿಂದ ಈ ತಳಿಯ ಬೀಜೋತ್ಪಾದನೆ ಕೊರತೆಯಾಗದಂತೆ ದಾಸ್ತಾನು ಮಾಡಲು ಸೂಚಿಸಲಾಗಿದೆ. ಅಲ್ಲದೇ ರೈತರಿಗೆ ಉತ್ತಮ ಗುಣಮಟ್ಟದ ಹೊಗೆಸೊಪ್ಪು ಮತ್ತು ಹದಗೊಳಿಸುವ (ಕ್ಯೂರಿಂಗ್) ಕುರಿತು ಸತತ ಮಾಹಿತಿ ಒದಗಿಸಲು ಸೂಚಿಸಲಾಗಿದೆ. ಅಲ್ಲದೇ ಸಮಗ್ರ ಬೆಳೆ ಪದ್ಧತಿ ಕುರಿತು ಮಾಹಿತಿ ನೀಡಲಿದ್ದೇವೆ. ಈಗಾಗಲೇ ರೈತರು ತಂಬಾಕಿನ ನಂತರ ಅವರೆ, ತೊಗರಿ ಬೆಳೆಯುತ್ತಿದ್ದಾರೆ. ತಂಬಾಕಿನ ನಡುವೆ ಇತರ ಬೆಳೆ ಬೆಳೆಯುವ ಕುರಿತು ಮಾಹಿತಿ ಒದಗಿಸಲಾಗುವುದು ಎಂದರು.
ಲೂಸ್ ಲೀಫ್ ಬ್ಯಾರನ್ ಸಮಾಧಾನ ತಂದಿಲ್ಲ :
ಹುಣಸೂರಿನಲ್ಲಿ ಐಟಿಸಿ ಕಂಪನಿ ವತಿಯಿಂದ ಇತ್ತೀಚೆಗೆ ಸ್ಥಾಪನೆಯಾಗಿರುವ ನೂತನ ತಂತ್ರಜ್ಞಾನ ಹೊಂದಿರುವ ಬಿಡಿ ಎಲೆ ಬಾರನ್(ಲೂಸ್ ಲೀಫ್ ಬಾರನ್) ಪದ್ಧತಿ ಬಗ್ಗೆ ರೈತರಲ್ಲಿ ಅಂತಹ ಸಮಾಧಾನವೇನು ಇಲ್ಲ. ಕಾರಣ ಬಾರನ್ ನಿರ್ಮಾಣಕ್ಕೆ ಅಗತ್ಯ ಅತಿಯಾದ ಬಂಡವಾಳ. ಈ ಕುರಿತು ಇನ್ನಷ್ಟು ಸಂಶೋಧನೆಗಳಾದಲ್ಲಿ ಕಡಿಮೆ ಖರ್ಚಿನಲ್ಲಿ ಬಾರನ್ ಸ್ಥಾಪಿಸುವಂತಾಗಬೇಕೆಂದು ಅಬಿಪ್ರಾಯಪಟ್ಟರು.
ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ :
ಹುಣಸೂರು ಸಿಟಿಆರ್‌ಐನ ವಿಜ್ಞಾನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸಂಶೋಧಿಸಿರುವ ಎಫ್‌ಸಿಎಚ್ 222 ತಳಿ ಕುರಿತು ರೈತರು ಸಂತಸ ವ್ಯಕ್ತಪಡಿಸಿದ್ದು, ವಿಜ್ಞಾನಿಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಬದಲಾವಣೆಯ ಕಾಲಘಟ್ಟ ಇದಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ರೀತಿನೀತಿಗಳ ಆದಾರದಡಿಯಲ್ಲಿ ಸಿಟಿಆರ್‌ಐ ಕರ್ತವ್ಯ ನಿರ್ವಹಿಸಲಿದೆ ಎಂದರು.
ಭೇಟಿ ವೇಳೆ ಸಿಟಿಆರ್‌ಐ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್, ವಿಜ್ಞಾನಿಗಳಾದ ಡಾ.ರಾಜಪ್ಪ, ಡಾ.ಮಹದೇವಸ್ವಾಮಿ, ಡಾ.ನಂದಾ ಇನ್ನಿತರ ವಿಜ್ಞಾನಿಗಳು ಮತ್ತು ಸಿಬ್ಬಂದಿ ಇದ್ದರು.
ಇದನ್ನೂ ಓದಿ : ಅಂತಾರಾಷ್ಟ್ರೀಯ ಫುಟ್ ಬಾಲ್ ನಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದ ರೊನಾಲ್ಡೊ