Advertisement

ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಬದ್ಧ

10:59 AM Feb 22, 2018 | Team Udayavani |

ಬೆಂಗಳೂರು: ನ್ಯಾ.ಎ.ಜೆ. ಸದಾಶಿವ ಆಯೋಗ ವರದಿಯ ಸಾಧಕ-ಬಾಧಕಗಳ ಪರಿಶೀಲನೆಗಾಗಿ ಉಪಸಮಿತಿ
ರಚಿಸಿದ್ದು, ಈ ಸಮಿತಿ ವರದಿ ನೀಡಿದ ತಕ್ಷಣ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ಭರವಸೆ ನೀಡಿದರು.

Advertisement

ನಗರದ ಮಾಗಡಿ ರಸ್ತೆ ಜಂಕ್ಷನ್‌ ಬಳಿ ನಿರ್ಮಿಸಲು ಉದ್ದೇಶಿಸಿರುವ ಡಾ.ಬಾಬು ಜಗಜೀವನ್‌ ರಾಂ ಭವನ (ಅಧ್ಯಯನ ಮತ್ತು ಸಂಶೋಧನಾ ಕೇಂದ್ರ)ಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಯಾವುದೇ ರೀತಿ ವಿರೋಧ ಇಲ್ಲ. ಆದರೆ, ಎಲ್ಲವೂ ಕಾನೂನಿನ ಚೌಕಟ್ಟಿ
ನಲ್ಲಿ ಆಗಬೇಕಾಗುತ್ತದೆ. ಆದ್ದರಿಂದ ಈ ಸಂಬಂಧದ ಸಾಧಕ- ಬಾಧಕಗಳ ಅಧ್ಯಯನಕ್ಕೆ ಉಪಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ನೀಡಲಿದ್ದು, ಅದನ್ನು ಆಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಬಡ್ತಿ ಮೀಸಲಾತಿ; ಧಮ್ಕಿ ಹಾಕಿದ್ರು : ಬಡ್ತಿ ಮೀಸಲಾತಿ ಜಾರಿಗೊಳಿಸಲು ಶೇ. 82ರಷ್ಟು ಜನರನ್ನು ವಿರೋಧ
ಕಟ್ಟಿಕೊಳ್ಳುತ್ತೀರಾ’ ಎಂದು ಧಮ್ಕಿ ಹಾಕಿದರು. ಆದರೆ, “ಅದಾವುದಕ್ಕೂ ನಾನು ಕ್ಯಾರೆ ಎನ್ನಲಿಲ್ಲ ಎಂದರು.

ಸ್ವಾಭಿಮಾನದ ಬದುಕೂ ಅಭಿವೃದ್ಧಿ: ಇದಕ್ಕೂ ಮುನ್ನ ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಮಾತನಾಡಿ,
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವಂತಹ ವಾತಾವರಣ ಕಲ್ಪಿಸುವುದು
ನಿಜವಾದ ಅಭಿವೃದ್ಧಿ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕೇಂದ್ರ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿದರು. ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಶಾಸಕರಾದ ಮುನಿರತ್ನ, ವಿ.ಎಸ್‌. ಉಗ್ರಪ್ಪ, ಮೇಯರ್‌ ಸಂಪತ್‌ರಾಜ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಹಿರಿಯ ಚಿತ್ರಕಲಾವಿದ ಡಾ.ಚಂದ್ರಶೇಖರ್‌ ಅವರಿಗೆ 5 ಲಕ್ಷದ ಚೆಕ್‌, ಚಿನ್ನದ ಪದಕ ನೀಡಿ ಸನ್ಮಾನಿಸ ಲಾಯಿತು. ವಿವಿಧ ಕಾಮಗಾರಿ ಉದ್ಘಾಟಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next