ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ತಡವಾಗಿ ಎಡಿಜಿಪಿ ಅವರನ್ನು ವರ್ಗಾವಣೆ ಮಾಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆಗೆ 15 ದಿನ ಬೇಕಿತ್ತಾ? ಸರ್ಕಾರ ಹಗರಣವನ್ನ ಒಪ್ಪಿಕೊಂಡಂತಾಗಿದೆ.ಹಗರಣ ನಡೆದಿದೆ. ಅಧಿಕಾರಿಗಳು ಶಾಮೀಲಾಗಿದ್ದಾರೆ ಅಂತ ಈಗ ಸರ್ಕಾರಕ್ಕೆ ಅನಿಸಿರಬಹುದು.ಹೀಗಾಗಿ ಎಡಿಜಿಪಿ ಅವರನ್ನ ವರ್ಗಾವಣೆ ಮಾಡಿದ್ದಾರೆ ಎಂದರು.
ದಿವ್ಯಾ ಹಾಗರಗಿ ಅವರ ಫೋಟೋ ಯಾರ ಜಿತೆಯಾದರೂ ಇರಲಿ, ಅವರು ಬಿಜೆಪಿನೋ, ಕಾಂಗ್ರೆಸ್ ನವರೋ, ಜೆಡಿಎಸ್ ನವರೋ ಅವರೊಬ್ಬ ಆರೋಪಿ, ಮೊದಲು ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿ ಎಂದರು.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ನೇಮಕಾತಿ ಎಡಿಜಿಪಿ ಅಮೃತ್ ಪಾಲ್ ಎತ್ತಂಗಡಿ
ಡಿ.ಕೆ ಶಿವಕುಮಾರ್ ಜತೆ ಇರುವ ಫೋಟೋಗೆ ಪಕ್ಷದ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ.ದಿವ್ಯಾ ಹಾಗರಗಿ ಅವರು ಅವರ ಮಗನ ಮದುವೆ ಆಮಂತ್ರಣ ಕೊಡಲು ನನ್ನ ಮನೆಗೂ ಬಂದಿದ್ದರು.ಅವರ ಜತೆ ನನ್ನ ಫೋಟೋನೂ ಇರಬಹುದು. ಮೋದಿ ಅವರ ಜೊತೆಯೂ ದಿವ್ಯಾ ಹಾಗರಗಿ ಅವರ ಫೋಟೋ ಇರಬಹುದು. ಹಾಗಂತ ವಿಚಾರಣೆ ನಡೆಸಬಾರದಾ. ಬಿಜೆಪಿ ಅವರ ಸಾಮಾಜಿಕ ಜಾಲತಾಣದವರು ಹಾಕುವ ಪೋಸ್ಟ್ ಗಳಿಗೆ ಉತ್ತರ ಕೊಡಲು ಹೋದರೆ ದಿನ ಪೂರ್ತಿ ಅದೇ ಕೆಲಸ ಮಾಡಿಕೊಂಡಿರಬೇಕಾಗುತ್ತದೆ ಎಂದರು.