Advertisement

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ

01:05 PM Feb 14, 2017 | |

ಹರಪನಹಳ್ಳಿ: ಭಾರತ್‌ ಕಮ್ಯೂನಿಷ್ಟ್ ಪಕ್ಷ(ಎಂ) ಕಾರ್ಯಕರ್ತರು ಪಟ್ಟಣದ ಇಜಾರಿ ಶಿರಸಪ್ಪ ಸರ್ಕಲ್‌ನಲ್ಲಿ ಸೋಮವಾರ ನೋಟು ಅಮಾನ್ಯ ಮಾಡಿರುವುದನ್ನು ಖಂಡಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ ಮಾತನಾಡಿ, ಫೆ. 6 ರಿಂದ 14ರ ವರೆಗೆ ಪ್ರಚಾರಾಂದೋಲನ ರಾಜ್ಯಾದ್ಯಂತ ನಡೆಯಲಿದೆ. 

Advertisement

ದೇಶದಲ್ಲಿ ನೋಟು ಬ್ಯಾನ್‌ ಮಾಡಿರುವುದು ಕಪ್ಪು ಹಣದ ವಿರುದ್ಧ ಸಮರವಲ್ಲ, ಜನಸಾಮಾನ್ಯರ ವಿರುದ್ಧ ನಗದು ಸಮರವಾಗಿದೆ. ನೋಟು” ರದ್ದತಿಯಿಂದ ಅತೀ ಹೆಚ್ಚು  ಕಷ್ಟಪಟ್ಟವರು ಜನ ಸಾಮಾನ್ಯರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಳ್ಳವರ ಪರವಾಗಿದೆ ಎಂದು ದೂರಿದರು. ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ.

ಆದರೆ ಕಾಂಗ್ರೆಸ್‌ಸರ್ಕಾರ ಮಾತ್ರ ಕೇಂದ್ರದಿಂದ ಬರ ಪರಿಹಾರ ಹಣ ನೀಡುತ್ತಿಲ್ಲ ಎನ್ನುವ ನೆಪವೊಡ್ಡಿ ಬರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ  ವಿಫಲವಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ದುಪ್ಪಟ್ಟು ಹಣ ಮೀಸಲಿರಿಸಬೇಕು. ರೈತರ ಎಲ್ಲ ಸಾಲಗಳನ್ನು ಕೂಡಲೇ ಮನ್ನಾ ಮಾಡಬೇಕು.

ಎಲ್ಲ  ನೋಂದಾಯಿತರಿಗೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಎಲ್‌. ಭಟ್‌ ಮಾತನಾಡಿ, ಕಪ್ಪುಹಣ, ಭ್ರಷ್ಟಾಚಾರ,  ಭಯೋತ್ಪಾದನೆ ನಿಗ್ರಹ ದೃಷ್ಟಿಯಿಂದ ನೋಟ್‌ ಬ್ಯಾನ್‌ ಮಾಡಿದ ಮೋದಿ ಸರ್ಕಾರದಿಂದ ಜನ ಸಾಮಾನ್ಯರು ಪರಿತಪಿಸುವಂತಾಗಿದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮೂರು  ವರ್ಷ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ನಾಲ್ಕು ಪೂರೈಸುತ್ತಿದೆ. ಎರಡು ಸರ್ಕಾರಗಳು ರೈತ, ಕಾರ್ಮಿಕರು, ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಪಾದಿಸಿದರು. ಮುಖಂಡರಾದ ಹುಲಿಕಟ್ಟೆ ರಹಮತ್‌ವುಲ್ಲಾ, ಕೆ. ರಾಜಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ, ಧರ್ಮಪ್ಪ, ನಾಗರಾಜ್‌, ಹಾಗೂ ಎಲ್‌ಐಸಿ ಸಂಘಟನೆ ಕಾರ್ಯಕರ್ತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next