Advertisement
ಜಿಲ್ಲಾ ಪಂಚಾಯತ್‌ಗೆ ಸೇರಿದ ಈ ರಸ್ತೆ ಪುಂಜಾಲಕಟ್ಟೆಯಿಂದ ವೇಣೂರನ್ನು ಸಂಪರ್ಕಿಸುವ ಅತೀ ಹತ್ತಿರದ ಹಾದಿಯಾಗಿದೆ. ಪುಂಜಾಲ ಕಟ್ಟೆಯಿಂದ ಪುರಿಯ, ಬುಳೆಕ್ಕರ, ಕುಕ್ಕೇಡಿ, ಗೋಳಿಯಂಗಡಿ ಮಾರ್ಗವಾಗಿ ವೇಣೂರು ತಲುಪುವ 10 ಕಿ.ಮೀ.ದೂರದ ಈ ರಸ್ತೆಯಲ್ಲಿ ನಿತ್ಯ ಪ್ರಯಾಣಿಕರಿದ್ದಾರೆ. ಪುಂಜಾಲಕಟ್ಟೆಯಿಂದ ಪುರಿಯ ಕೇವಲ ಎರಡೂವರೆ ಕಿ.ಮೀ.ದೂರವಿದೆ.
ಪ್ರಯಾಸವಾಗಿದೆ. ದ್ವಿಚಕ್ರ ವಾಹನಗಳು ಎದ್ದು ಬಿದ್ದೂ ಹೇಗಾದರೂ ಸಂಚರಿಸುತ್ತವೆ. ಅಟೋ ರಿಕ್ಷಾಗಳೂ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಒಂದು ಸರಕಾರಿ ಬಸ್ ಈ ಮೊದಲು ಸಂಚರಿಸುತ್ತಿದ್ದು ಇದೀಗ ಅದೂ ನಿಂತು ಹೋಗಿದೆ.
Related Articles
Advertisement
ಮಳೆಗಾಲ ಮುನ್ನ ಸಂಘಟನೆಗಳು ಸೇರಿಶ್ರಮದಾನ ನಡೆಸಿ ಗಿಡಗಂಟಿ ತೆಗೆದು ಸ್ವತ್ಛಗೊಳಿಸಿದ್ದರು. ಇದೀಗ ರಸ್ತೆಯುದ್ದಕ್ಕೂ ಹೊಂಡ, ಗುಂಡಿಗಳ ಜತೆ ಪೊದರು, ಕಳೆಗಿಡ ಬೆಳೆದು ರಸ್ತೆಯನ್ನು ಮತ್ತಷ್ಟು ಕಿರಿದಾಗಿಸಿದೆ. ಇದ್ದ ಚರಂಡಿಯೂ ಮುಚ್ಚಿ ಹೋಗಿದೆ.
ಜನಪ್ರತಿನಿಧಿಗಳು, ಇಲಾಖಾಧಿ ಕಾರಿಗಳು ಕೂಡಲೇ ಮುತುವರ್ಜಿವಹಿಸಿ ಯಾವುದಾದರೂ ಯೋಜನೆಯಡಿ ಸೇರಿಸಿ ಮುಂದಕ್ಕೆ ರಸ್ತೆ ಅಭಿವೃದ್ದಿಗೊಳಿಸಬೇಕೆಂದು ಸಾರ್ವಜನಿಕರ ಆಗ್ರಸಿದ್ದಾರೆ.
ಗುದ್ದಲಿಪೂಜೆ ನಡೆನದರೂ ನಡೆಯದ ಕಾಮಗಾರಿ
ಪುಂಜಾಲಕಟ್ಟೆ ಯಿಂದ ಗಂಪದಡ್ಡ ವರೆಗೆ ಸುಮಾರು ಮುಕ್ಕಾಲು ಕಿ.ಮೀ. ರಸ್ತೆ ಭಾಗ ಕುಕ್ಕಳ ಗ್ರಾಮಕ್ಕೆ ಸೇರಿದರೆ, ಉಳಿದ ಭಾಗ ಮಾಲಾಡಿ, ಕುಕ್ಕೇಡಿ ಗ್ರಾಮಗಳಿಗೆ ಸೇರುತ್ತದೆ. ಹಲವಾರು ವಾಹನಗಳು ಸಾಗುತ್ತಿದ್ದರೂ ರಸ್ತೆ ಮಾತ್ರ ತೀರಾ ಕಿರಿದಾಗಿದೆ. 2000 ನೇ ಇಸವಿಯಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ಸೇರ್ಪಡೆಗೊಂಡಿದ್ದರೂ ಕಾರಣಾಂತರಗಳಿಂದ ಅಭಿವೃದ್ಧಿ ಕಾರ್ಯ ಮುಂದುವರೆಯಲಿಲ್ಲ. 2009-10ರಲ್ಲಿ ಮರು ಡಾಮರೀಕರಣಗೊಂಡಿತ್ತು. ಮತೆ 2018ರಲ್ಲಿ ತೇಪೆ ಕಾರ್ಯ ದುರಸ್ತಿ ನಡೆದಿತ್ತು. ಆದರೆ ಸಂಪೂರ್ಣ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿಲ್ಲ. 2023ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿಪೂಜೆಯೂ ನಡೆದಿತ್ತು. ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ.