Advertisement

ಸರ್ಕಾರಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ : ಸಚಿವ ಶಿವರಾಮ ಹೆಬ್ಬಾರ

08:15 PM Sep 12, 2021 | Team Udayavani |

ಮುಂಡಗೋಡ: ಆರೋಗ್ಯ ಮತ್ತು ಶಿಕ್ಷಣ ಎರಡು ಪ್ರಮುಖ ಕ್ಷೇತ್ರಗಲಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರದೇ ಹೋದರೆ ಬಡವರಿಗೆ ತೊಂದರೆ ಆಗುತ್ತದೆ. ಎಲ್ಲವೂ ಸರ್ಕಾರದಿಂದಲೇ ಆಗಬೇಕು ಎಂದರೆ ಸಾಧ್ಯವಿಲ್ಲ ಸಂಘ-ಸಂಸ್ಥೆ ಮತ್ತು ಸಾರ್ವಜನಿಕರ ಸಹಕಾರವೂ ಅಗತ್ಯ  ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

Advertisement

ಅವರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿಯೇ ಬಡತನ, ನಿರಕ್ಷರತೆ ಅತಿ ಹೆಚ್ಚಾಗಿ ಇರುವ ತಾಲೂಕು ಇದು. ತಾಲೂಕಿನಲ್ಲಿ ಒಟ್ಟು ೧೪ ಜನರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿಗೆ ಹೋಗಲು ಅವರಿಗೆ ಹೆಚ್ಚು ವೆಚ್ಚ ತಗಲುತ್ತದೆ. ಡಯಾಲಿಸಿಸ್ ಮಷಿನ್ ಇಲ್ಲದೆ ಬಡವರು ಕಷ್ಟದಲ್ಲಿದ್ದರು ಈಗ ಅವರಿಗೆ ತುಂಬಾ ಅನುಕೂಲವಾಗಿದೆ. ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬಂದ ಬಡವರಿಗೆ ತೊಂದರೆಯಾಗದಂತೆ ಮಾನವೀಯತೆಯಿಂದ ಕಾಣಬೇಕು ಎಂದು ವೈದ್ಯಾಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು ಯಲ್ಲಾಪುರದಲ್ಲಿ ಏನು ಸುಧಾರಣೆ ಮಾಡುತ್ತೇನೋ ಮುಂಡಗೋದಲ್ಲಿಯೂ ಅದನ್ನೇ ಮಾಡುತ್ತೇನೆ. ಚುನಾವಣೆವರೆಗೆ ಮಾತ್ರ ರಾಜಕಾರಣ ಮಾಡುತ್ತೇನೆ. ನಂತರ ಮಾಡುವುದಿಲ್ಲ ಎಂದರು.

ಜಿಲ್ಲೆಯ  ಸರ್ವಾಂಗೀಣ  ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಸುದೀರ್ಘ ಕಾಲದ ನಂತರ ಅಂಕೋಲಾ-ಹುಬ್ಬಳ್ಳಿ ರೈಲು ಯೋಜನೆಗೆ ಚಾಲನೆ ದೊರೆತಿದ್ದು, ವಾಜಪೇಯಿ ಸರ್ಕಾರದಲ್ಲಿ  290 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಆಗಬೇಕಿತ್ತು.ಆದರೆ ಕೆಲ ನಕಲಿ ಪರಿಸರವಾದಿಗಳ ವಿರೋಧದಿಂದಾಗಿ ವಿಳಂಬವಾಗಿದೆ. ಈಗ ಈ 1300 ಕೋಟಿ ವೆಚ್ಚವಾಗುತ್ತಿದೆ.

ಜಿಲ್ಲೆಯ ಜನರು ಪರಿಸರ ವಾದಿಗಳು ಪರಿಸರದೊಂದಿಗೆ ನಮ್ಮ ಬದುಕು ಕೂಡ ಅಷ್ಟೇ ಮುಖ್ಯ. ಅಭಿವೃದ್ಧಿ ಕೆಲಸಗಳಿಗೆ ಪರಿಸರವಾದಿಗಳು ಕೈಜೋಡಿಸಬೇಕು ಎಂದರು.

ಕೆ.ವಿ.ಜಿ.ಬಿ. ಚೇರ್‌ಮನ್ ಪಿ.ಗೋಪಿಕೃಷ್ಣ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ವಿಶೇಷವಾಗಿ ಗ್ರಾಮೀಣ ಭಾಗದ ಬಡ ರೋಗಿಗಳಿಗೆ ವರವಾದ ಡಯಾಲಿಸಿಸ್ ಯಂತ್ರಗಳನ್ನು ಆಸ್ಪತ್ರೆಗೆ ಅಳವಡಿಸಲಾಗಿದೆ. ಇದರಿಂದ ದುಬಾರಿ ವೆಚ್ಚ ಮತ್ತು ದೂರದ ಆಸ್ಪತ್ರೆಗಳಿಗೆ ಅಲೆದಾಟ ತಪ್ಪಿದಂತಾಗಿದೆ ಎಂದರು.

Advertisement

ಮಾಸ್ಟರ್ ಟ್ರೇನರ್ ಸುಧೀರ ಕುಲ್ಕರ್ಣಿ ಮಾತನಾಡಿ, ಸುಮಾರು ೪೦ ವರ್ಷದಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಬ್ಯಾಂಕಿಗ ವಿಚಾರದಲ್ಲಿ ದೇಶದ್ಯಂತ ತರಬೇತಿ ನೀಡಿದ್ದೇವೆ ಎಂದರು. ಸೆಲ್ಕೋ ಸೋಲಾರ ಸಿಇಒ ಮೋಹನ ಹೆಗಡೆ ಮಾತನಾಡಿದರು.

ಮುಂದಿನ ದಿನದಲ್ಲಿ   ನನ್ನ ಕಂಪನಿ ಮತ್ತು ಸೆಲ್ಕೋ ಸೋಲಾರ ವತಿಯಿಂದ ಸುಸುಜ್ಜಿತ ಸೋಲಾರ ಆಧಾರಿತ ಪ್ರಸೂತಿ ಗೃಹವನ್ನು ಸುಮಾರು ೪೫ ಲಕ್ಷದ ವೆಚ್ಚದಲ್ಲಿ ಮುಂಡಗೋಡದಲ್ಲಿ ಆಸ್ಪತ್ರೆ  ನಿರ್ಮಿಸುತ್ತೇವೆ ಎಂದು ಸಚಿವ ಹೆಬ್ಬಾರ ಹೇಳಿದರು. ಇದೆ ವೇಳೆ ಕೆ.ವಿ.ಜಿ.ಬಿ. ಚೇರ್‌ಮನ್ ಪಿ.ಗೋಪಿಕೃಷ್ಣ, ಮಾಸ್ಟರ್ ಟ್ರೇನರ್ ಸುಧೀರ ಕುಲ್ಕರ್ಣಿ, ಸೆಲ್ಕೋ ಸೋಲಾರ ಸಿಇಒ ಮೋಹನ ಹೆಗಡೆ, ಹರಿಪ್ರಕಾಶ ಕೋಣೆಮನೆ, ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ಶರದ ನಾಯಕ ಅವರನ್ನು ಸಚಿವರು ಸನ್ಮಾನಿಸಿದರು.

ನಂತರ ಸಚಿವರು ತಾಲೂಕು ಆಸ್ಪತ್ರೆ ಹಿಂಭಾಗದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಶಂಕು ಸ್ಥಾಪನೆ ನೆರವೇರಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಶರದ ನಾಯಕ, ಡಾ.ಎಚ್.ಎಫ್.ಇಂಗಳೆ, ಹರಿಪ್ರಕಾಶ ಕೋಣೆಮನೆ, ಪ.ಪಂ.ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಸದಸ್ಯೆ ಜಯಸುಧಾ ಭೋವಿವಡ್ಡರ ಮುಖ್ಯಾಧಿಕಾರಿ ಸಂಗನಬಸಯ್ಯ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಶೇಖರ ಲಮಾಣಿ, ತಾಲೂಕು ಆಸ್ಪತ್ರೆ ಸಿಬ್ಬಂದಿ ಮತ್ತಿತರರಿದ್ದರು. ವಿ.ವಿ.ಕುರ್ಡೇಕರ ಪ್ರಾರ್ಥಿಸಿದರು. ಎಸ್.ಎಸ್.ಪಟ್ಟಣಶೆಟ್ಟಿ, ಮಂಜುನಾಥ ಭಾಗ್ವತ ಮತ್ತು ಉಮೇಶ ಪುದಾಳೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next