Advertisement

ಜ್ಞಾನದೊಂದಿಗೆ ಜೀವನ ಮೌಲ್ಯ ಗಳಿಕೆ ಶಿಕ್ಷಣದ ಗುರಿ

06:40 AM Aug 07, 2017 | Team Udayavani |

ಕಾಸರಗೋಡು: ಶಿಕ್ಷಣದ ಗುರಿ ಜ್ಞಾನಗಳಿಸುವುದರೊಂದಿಗೆ ಜೀವನ ಮೌಲ್ಯವನ್ನು ಗಳಿಸುವುದು ಆಗಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಗಣೇಶ್‌ ರಾಜ್‌ ಹೇಳಿದರು.

Advertisement

ಅವರು ನಗರದಲ್ಲಿರುವ ಬಿ.ಇ.ಎಂ. ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾನ್ವಿತರಿಗೆ ಸತತ 10 ವರ್ಷಗಳಿಂದ ತಮ್ಮ ಮಾತೃಶ್ರೀ ದಿವಂಗತ ಕಲ್ಯಾಣಿ ಬಾಯ್‌ ಅವರ ಸ್ಮರಣಾರ್ಥವಾಗಿ ನಗದು ಬಹುಮಾನ ವನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈ ಸಲ ಅವರೇ ಆಗಮಿಸಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದು ಸಭೆಗೆ ಹೆಚ್ಚಿನ ಮೆರುಗನ್ನು ನೀಡಿತು. 

ಅವರು ತಮ್ಮ ಅತಿಥಿ ಭಾಷಣದಲ್ಲಿ ತಾವು ಐದರಿಂದ ಹತ್ತನೇ ತರಗತಿಯವರೆಗ ಈ ಶಾಲೆಯಲ್ಲಿ ಗಳಿಸಿದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರಲ್ಲದೆ ಗುರು ವೃಂದದವರಿಗೆ ನಮನಗಳನ್ನು ಸಲ್ಲಿಸಿದರು. 

ಕಲಿಕೆಯಲ್ಲಿ ಚಿಂತನೆಯಿದ್ದರೆ ಯಶಸ್ಸು
ಯುವ ಶಕ್ತಿಗಳು ದೇಶದ ಬೆನ್ನೆಲುಬು, ಕಲಿಕೆಯಲ್ಲಿ ಚಿಂತನೆ, ಲೆಕ್ಕಾಚಾರ, ಪ್ರಾಯೋಗಿಕತೆ, ಸಂಶೋಧನೆ ಮತ್ತು ಉದ್ದೇಶವಿದ್ದರೆ ಯಶಸ್ಸು ಖಂಡಿತ. ನಾವು ಪಡೆದುದರಿಂದ ಸ್ವಲ್ಪ ಭಾಗ ಸಮಾಜಕ್ಕೆ ನೀಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಅನಂತರ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋ ತ್ತರಗಳನ್ನು ನಡೆಸಿದರು.
ಸಭೆಯಲ್ಲಿ ಗಣೇಶ್‌ರಾಜ್‌ ಅವರನ್ನು ಪಿಟಿಎ ಮತ್ತು ಶಾಲೆಯ ವತಿಯಿಂದ ಶಾಲು ಹೊದೆಸಿ ಸಮ್ಮಾನಿಸ ಲಾಯಿತು.

ಅನಂತರ 2017 ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹತ್ತು ವಿಷಯಗಳಲ್ಲಿ ಎ ಪ್ಲಸ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯಶವಂತ್‌ ವಿಜೇತರ ಹೆಸರನ್ನು ಓದಿದರು. ರಕ್ಷಿತಾ ಕೆ. ಮತ್ತು ವೈಷ್ಣವಿ ಎಸ್‌.ರೈ ಅವರಿಗೆ ಅಶೋಕ್‌ ಕಿಣಿ ತಮ್ಮ ಹೆತ್ತವರಾದ ಶಂಕರ ನಾರಾಯಣ ಕಿಣಿ ಮತ್ತು ಉಮಾ ಕಿಣಿ ಸ್ಮರಣಾರ್ಥ ನೀಡುವ ತಲಾ 10 ಸಾವಿರ ರೂ. ನಗದು ಬಹುಮಾನಗಳನ್ನು ಗಣೇಶ್‌ರಾಜ್‌ ಅವರು ವಿತರಿಸಿದರು.

Advertisement

ಗಣೇಶ್‌ ರಾಜ್‌ ನೀಡುವ ತಲಾ 4 ಸಾವಿರದಂತೆ ಐವರು ವಿದ್ಯಾರ್ಥಿಗಳು,  ಪಿ.ಆರ್‌.ಅನುಶ್ರೀ, ಜೇಷ್ಮ ಮೋಹನ, ನಿರೀಕ್ಷಾ ಆರ್‌.ವಿ., ಸೃಜನ್‌ ಎಸ್‌. ಐಲ್‌, ಅವರಿಗೆ ಕಲ್ಯಾಣಿ ಬಾಯಿ ಪುರಸ್ಕಾರವನ್ನು ವಸಂತ ಕುಮಾರ್‌ ವಿತರಿಸಿ ವಿಜೇತರನ್ನು ಅಭಿನಂದಿಸಿದರು.

ಯಜ್ಞೆàಶ್‌ ಮತ್ತು ಹರಿ ಅವರಿಗೆ ಪಿಟಿಎ ವತಿಯಿಂದ ತಲಾ ನಾಲ್ಕು ಸಾವಿರ ರೂ. ನೀಡಲಾಯಿತು. 2017 ರಲ್ಲಿ 10 ಹಾಗು 9 ವಿಷಯಗಳಲ್ಲಿ ಎ ಪ್ಲಸ್‌ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪಿಟಿಎ ವತಿಯಿಂದ ನಗದು ಬಹುಮಾನವನ್ನು ನೀಡಲಾಯಿತು. 

ರವಿಚಂದ್ರ ಕೇಳುಗುಡ್ಡೆ ವೈಯಕ್ತಿವಾಗಿ ವಿಜೇತರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಪಿಟಿಎ ಉಪಾಧ್ಯಕ್ಷ ಕೃಷ್ಣ ಭಟ್‌ ವಿಜೇತರನ್ನು ಅಭಿನಂದಿಸಿದರು.

ಸಭೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾ ಧ್ಯಾಯ ಕೆ.ಪಿ. ರಾಜೇಶ್ಚಂದ್ರ ಸ್ವಾಗತಿಸಿದರು. ಶರ್ಲಿ ಮೆರೊಸ್‌ ಕಾರ್ಯಕ್ರಮ ನಿರೂಪಿಸಿದರು. ಕನಕರಾಜ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next