Advertisement

ಸ್ವಚ್ಛ ಭಾರತ ಸಾಧನೆಯ ಗುರಿ ದೂರ-ಬಹುದೂರ?

12:45 AM Oct 08, 2017 | |

ಜನರ ಮನೋಭಾವವನ್ನು ಬದಲಿಸುವ ಕೆಲಸವು ಕಬ್ಬಿಣದ ಕಡಲೆಯಿದ್ದಂತೆ. ಅದು ಸುಲಭವಾಗಿದ್ದರೆ ಈಗಾಗಲೇ ದೇಶವು ಸ್ವಚ್ಛ ವಾಗಬೇಕಿತ್ತು. ಬದಲಾವಣೆ ಬಹು ಕಠಿನ. ಸ್ವಚ್ಛತೆಯೂ ಅಭಿವೃದ್ಧಿಯ ಲಕ್ಷಣ. ಸ್ವಚ್ಛ ಅಭಿವೃದ್ಧಿಯೇ ನಿಜವಾದ ಆಭಿವೃದ್ಧಿ. ಸ್ವಚ್ಛತೆಯ ಬಗ್ಗೆ ಪಾಠ ಬಾಲ್ಯದಿಂದಲೇ ಪ್ರಾರಂಭವಾಗಬೇಕು. ನಾವು ಎಚ್ಚೆತ್ತುಕೊಂಡಿದ್ದೇವೆ. ಇನ್ನೂ ಸಾಧಿಸಲೇಬೇಕಾದ ಅನಿವಾರ್ಯತೆ ನಮ್ಮದು. ಇದೆಲ್ಲ ಹೇಳಲಿಕ್ಕೆ ಸುಲಭ, ಅನುಷ್ಠಾನ ಮಾತ್ರ ಕಠಿನ.

Advertisement

ಸ್ವಚ್ಛ ಭಾರತದ ಪರಿಕಲ್ಪನೆಯು ಅನಾವರಣಗೊಂಡು ಸುಮಾರು ಮೂರು ವರುಷಗಳೇ ಸಂದವು. 1980ರ ದಶಕದಲ್ಲಿಯೂ ದೇಶವು ಕಸಕಡ್ಡಿ ಕೊಳಕಿನಿಂದ ಮುಕ್ತಿ ಹೊಂದಬೇಕೆಂಬ ಕೂಗು, ಪ್ರಯತ್ನ ಸಾಗಿತ್ತು. ದೊಡ್ಡ ಮಟ್ಟದಲ್ಲಿ ಮಹತ್ವಾಕಾಂಕ್ಷೆಯ ಆರ್ಥಿಕ ನೀತಿಯಾಗಿ ಹೊರಹೊಮ್ಮಿದ್ದು ಅಕ್ಟೋಬರ್‌ 2, 2014ರಂದು. ಈ ಯೋಜನೆಯಡಿಯಲ್ಲಿ ದೇಶವು 2019ರ ಒಳಗಾಗಿ ಸಂಪೂರ್ಣ ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿ ಮಾಡುವ ದೃಢ ಸಂಕಲ್ಪವನ್ನು ಕೇಂದ್ರ ಸರಕಾರವು ಮಾಡಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಹುಟ್ಟು ಹಬ್ಬವನ್ನು ಆಚರಿಸುವ ವೇಳೆಗೆ ಈ ಕನಸು ನನಸಾಗಬೇಕಾಗಿದೆ ಎಂಬ ಹಠ. ಸುಮಾರು 2 ಲಕ್ಷ ಕೋಟಿ ರೂಪಾಯಿ ವ್ಯಯಿಸಿ ಸುಮಾರು 111 ಮಿಲಿಯ ಶೌಚಾಲಯಗಳನ್ನು ಕಟ್ಟುವ ಗುರಿ. 

ಅಭಿಯಾನ ದಿನೇ ದಿನೆ ಮುಂದೆ ಸಾಗುತ್ತಿದೆ. ಈ ಯೋಜನೆಗೆ ಘಟಾನುಘಟಿಗಳು, ಸಿನಿಮಾ ನಟರು, ಇನ್ನಿತರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ತಿಗಳು ರಾಯಭಾರಿಯಾಗಿ¨ªಾರೆ. ಹಲವಾರು ಸಂಘ ಸಂಸ್ಥೆಗಳೂ ಸರಕಾರದೊಂದಿಗೆ ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಿವೆ. ಈ ಅಭಿಯಾನಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ದೊರೆಯಲಾರಂಭಿಸಿವೆ. ಈಗಾಗಲೇ ಸಿಕ್ಕಿಂ, ಕೇರಳ, ಹಿಮಾಚಲ ಪ್ರದೇಶದಂತಹ ರಾಜ್ಯಗಳು 100% ಬಹಿರ್ದೆಸೆ ಮುಕ್ತ ರಾಜ್ಯಗಳು ಎಂದು ಘೋಷಣೆಯಾಗಿವೆ. ಕಳೆದ ಮೂರು ವರುಷಗಳಲ್ಲಿ ದೇಶದ 186 ಜಿಲ್ಲೆಗಳು ಮತ್ತು 2,31,000 ಹಳ್ಳಿಗಳು (ಒಟ್ಟು 6 ಲಕ್ಷ ಹಳ್ಳಿಗಳಲ್ಲಿ) ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳಾಗಿವೆ. ಶೌಚಾಲಯಗಳ ನಿರ್ಮಾಣವು ಭರದಿಂದ ಸಾಗಿವೆ. ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಕರ್ಯವನ್ನು 0.4 ಮಿಲಿಯನ್‌ (37%)ರಿಂದ 7 ಮಿಲಿಯನ್‌ (91%) ಕ್ಕೆ ಹೆಚ್ಚಿಸಲಾಗಿದೆ. ಸುದ್ದಿ ಮಾಧ್ಯಮಗಳೂ ಸಹ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ಸುಗೊಳಿಸಲು ಪಣ ತೊಟ್ಟಿವೆ. ಇಷ್ಟೆಲ್ಲ ಬೆಳವಣಿಗೆಯ ನಡುವೆ ದೇಶವು ಸ್ವಚ್ಛ ಭಾರತದ ಧ್ಯೇಯವನ್ನು  ನಿಜವಾಗಿಯೂ ಸಾಧಿಸಿದೆಯೇ? ಸಾಧಿಸಬಹುದೇ? ಎಷ್ಟು ವರ್ಷಗಳು ಬೇಕಾಗಬಹುದು? ಸ್ವಾತಂತ್ರಾ ನಂತರದ ವರ್ಷಗಳಲ್ಲಿ ಸಾಧಿಸುವುದು ಸಾಧ್ಯವೇ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ನಿತ್ಯ ಕಾಡುವ ವಿಷಯಗಳು.

ಬೆಳಗ್ಗೆ ಎದ್ದು ಹೊರಗೆ ಹೊರಟೊಡನೆ ಈಗಲೂ ಮೊದಲು ಕಾಣಸಿಗುವುದು ರಸ್ತೆಯ ಅಕ್ಕ ಪಕ್ಕದಲ್ಲಿ ಕಸಗಳ ರಾಶಿ ರಾಶಿ. ಗಬ್ಬು ವಾಸನೆ. ಕಸದ ತೊಟ್ಟಿ ತುಂಬ ಹೊರಗಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಸದ ರಾಶಿ. ಸಿಕ್ಕ ಸಿಕ್ಕಲ್ಲಿ ನೀರಿನ ಬಾಟಲಿಗಳನ್ನು ಎಸೆಯುವುದು, ಕಂಡ ಕಂಡಲ್ಲಿ ಉಗುಳುವುದು ಇವೆಲ್ಲವೂ ಇಂದು ಮಾಮೂಲು ವಿಷಯ. ಇವೆಲ್ಲವನ್ನು ನೋಡುವಾಗ ಅನ್ನಿಸುವುದುಂಟು, ಸ್ವಚ್ಛ ಭಾರತ ಅಭಿಯಾನ ಯಾರಿಗಾಗಿಯೋ? ಅನುಸರಿಸುವವರಿಗೆ ಮಾತ್ರವೇ? ಎಲ್ಲ ಜನರು ಸಂಕಲ್ಪದಲ್ಲಿ ಪಾಲ್ಗೊಳ್ಳದಿದ್ದರೆ ಸಂಕಲ್ಪ ಸಾಧ್ಯವೇ? ಎಂಬೆಲ್ಲ ಹಳೆಯ ಪ್ರಶ್ನೆಗೆ ಹೊಸದೊಂದು ಉತ್ತರ ಹುಡುಕಬೇಕಾದ ಅನಿವಾರ್ಯತೆ ಒದಗಿ ಬಂದಿದೆ.

ಕಾರಣ ಯಾರು?
ನಮ್ಮ ಪರಿಸರ ಕರುಣಾಮಯಿ. ನಮಗೆ ಜೀವಿಸಲು ಬೇಕಾಗುವ ಎಲ್ಲ ಸವಲತ್ತುಗಳನ್ನು ದಯಪಾಲಿಸಿದೆ. ಪರಿಸರ ಯಾವತ್ತೂ ಮುನಿಯುವುದಿಲ್ಲ. ನಾವೇ ಪರಿಸರವನ್ನು ಮುಲಾಜಿಲ್ಲದೆ ಹಾಳುಗೆಡಹುತ್ತಿದ್ದೇವೆ. ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿದ್ದಿದ್ದರೆ ಅದನ್ನು ಸ್ವಚ್ಛಗೊಳಿಸುವುದು ಪರರ ಅಥವಾ ಸರಕಾರದ ಜವಾಬ್ದಾರಿಯೆಂದು ನಾವು ಸುಮ್ಮನಿರುವುದುಂಟು. ನಮಗೆ ಸುಖ, ಲಾಭ ಆಗಬೇಕು. ನಮ್ಮ ಕರ್ತವ್ಯ, ಜವಾಬ್ದಾರಿಯ ಬಗ್ಗೆ ಚಿಂತಿಸುವುದಿಲ್ಲ. ಕಸ ಉತ್ಪಾದಿಸುವುದು ಪರಿಸರವನ್ನು ಹಾಳುಮಾಡುವುದು ನಾವು. ಕಸವನ್ನು ವಿಲೇವಾರಿ ಮಾಡುವುದು ಸರಕಾರದ ಕೆಲಸ! ಕಸವನ್ನು ಸೃಷ್ಟಿಸಿದವರೇ ಸ್ವಚ್ಛಗೊಳಿಸಿದರೆ Clean India, Green India  ಸಂಕಲ್ಪ ಸುಲಭ. ಕಸ ಗುಡಿಸುವುದು ಸರಕಾರದ ಕೆಲಸ ಎಂಬ ಮನೋಭಾವ ಬದಲಾಗಬೇಕಾಗಿದೆ. ಪ್ರಾಯಶಃ ನಮ್ಮ ಕರ್ತವ್ಯವನ್ನು ಅರಿತು ಕೆಲಸ ಮಾಡಿದರೆ ಸ್ವಚ್ಛ ಭಾರತ ಯೋಜನೆಗೆ ಹೂಡಬೇಕಾದ ಕೋಟ್ಯಂತರ ಹಣದ ಆವಶ್ಯಕತೆಯಾದರೂ ಏನು? ನಾವು ಯಾಕೆ ಇನ್ನೂ ಸ್ವಚ್ಛವಾಗಲಿಲ್ಲ. ಇನ್ನೆಷ್ಟು ವರ್ಷ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನಾವೇ. ನಮ್ಮ ಬೇಜವಾಬ್ದಾರಿಯ ಮನೋಭಾವ, ಸ್ಪಂದನೆಯ ಅಭಾವ. ನಮ್ಮ ಊರಿಗೆ, ನಮ್ಮ ಅಂಗಳಕ್ಕೆ ನೆರೆ ಬಂದರೂ ನಮ್ಮ ಕಾಲ ಬುಡಕ್ಕೆ ಬರುವವರೆಗೆ ನಮಗದು ಸಮಸ್ಯೆಯೇ ಅಲ್ಲ.

Advertisement

ಯಾರು ಮಾಡಬೇಕು?
ಸ್ವಚ್ಛತೆ ಯಾವಾಗ ಸಾಧ್ಯ? ಯಾರು ಮಾಡಬೇಕು? ನಮ್ಮ ಪರಿಸರ ನಾವೊಬ್ಬರೇ ಮಾಡಿದರೆ ಸಾಕೇ? ಖಂಡಿತ ಸಾಕು. ನಾವೇ ಮಾಡಬೇಕು. ಬೇರಾರೂ ಅಲ್ಲ. ಎಲ್ಲರೂ ನಮ್ಮ ಮನೆ ಸುತ್ತ ಮುತ್ತ ಶುಚಿಯಾಗಿ ಇಟ್ಟುಕೊಂಡರೆ ಸ್ವಚ್ಛ ಭಾರತ ನಿರ್ಮಾಣ ಸಾಧ್ಯ.

ನಿರಂತರ ಪ್ರಕ್ರಿಯೆ
ಈ ಅಭಿಯಾನ ನಿರಂತರ ಸಾಗಬೇಕಾಗಿದೆ. ಈಗಾಗಲೇ ಸ್ವಚ್ಛ ನಗರಕ್ಕೆ ಸಂಬಂಧಿಸಿದ ಯೋಜನೆಗಳು ಬೇಕಾದಷ್ಟು ಇವೆ. ಪ್ಲಾಸ್ಟಿಕ್‌ ಮುಕ್ತ ನಗರದ ಕನಸು ಬರೀ ನಾಮಫ‌ಲಕಗಳಿಗೆ ಸೀಮಿತವಾಗಿವೆ. ವೇÓr… ಬಿನ್‌ಗಳೇ ವೇÓr… ಎಂಬಂತಿವೆ. ಶೌಚಾಲಯ ಸೌಕರ್ಯವಿದ್ದರೂ ಬಳಸುವರೆಂಬ ಅಥವಾ ಸ್ವತ್ಛ ಭಾರತ ಸಾಧ್ಯವೆನ್ನುವಂತಿಲ್ಲ. ರಿಯಾಯಿತಿ ನೀಡಿ ಶೌಚಾಲಯ ಸೌಲಭ್ಯ ನೀಡಿದರೂ ಫ‌ಲಪ್ರದವಾಗಲಿಕ್ಕಿಲ್ಲ. ಯಾಕೆಂದರೆ ಅದು ಪುಕ್ಕಟೆ ಸಿಕ್ಕಿದ್ದು. ಬದಲಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ, ಜನರನ್ನು ವಿದ್ಯಾವಂತರನ್ನಾಗಿಸುವುದೊಂದೇ ಉಳಿದಿರುವ ಮಾರ್ಗ. ಸ್ವಚ್ಛತೆ ಎಂಬುದು ಸಹಜ ಗುಣವಾಗಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಪರಿಸರದ ಪ್ರಜೆ ಎಂದು ತಿಳಿದುಕೊಂಡು ಪ್ರಜೆಗಳೇ ನೈರ್ಮಲ್ಯದ ರಾಯಭಾರಿಗಳಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಮಂದಿಗೆ ಕಡಿವಾಣ ಹಾಕಬೇಕು. ದಂಡ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಬೇಕು. ಚಿಕ್ಕ ಕಸವಿದ್ದರೂ ಅದನ್ನು ಕಸದ ಬುಟ್ಟಿಗೆ ಎಸೆಯುವವರೆಗೂ ವಿರಮಿಸದಿರುವ ಅಭ್ಯಾಸ ನಮ್ಮದಾಗಬೇಕು. ನಮ್ಮ ಅಭಿವೃದ್ಧಿ ಕಸ ಸೃಷ್ಟಿಸುವ ಅಭಿವೃದ್ಧಿಯಾಗಬಾರದು. ಜನರ ಮನೋಭಾವವನ್ನು ಬದಲಿಸುವ ಕೆಲಸವು ಕಬ್ಬಿಣದ ಕಡಲೆಯಿದ್ದಂತೆ. ಅದು ಸುಲಭವಾಗಿದ್ದರೆ ಈಗಾಗಲೇ ದೇಶವು ಸ್ವತ್ಛವಾಗಬೇಕಿತ್ತು. ಬದಲಾವಣೆ ಬಹು ಕಠಿನ. ಸ್ವಚ್ಛತೆಯೂ ಅಭಿವೃದ್ಧಿಯ ಲಕ್ಷಣ. ಸ್ವಚ್ಛ  ಅಭಿವೃದ್ಧಿಯೇ ನಿಜವಾದ ಆಭಿವೃದ್ಧಿ. ಸ್ವಚ್ಛತೆಯ ಬಗ್ಗೆ ಪಾಠ ಬಾಲ್ಯದಿಂದಲೇ ಪ್ರಾರಂಭವಾಗಬೇಕು. ನಾವು ಎಚ್ಚೆತ್ತುಕೊಂಡಿದ್ದೇವೆ. ಇನ್ನೂ ಸಾಧಿಸಲೇಬೇಕಾದ ಅನಿವಾರ್ಯತೆ ನಮ್ಮದು. ಇದೆಲ್ಲ ಹೇಳಲಿಕ್ಕೆ ಸುಲಭ, ಬರೆಯಲಿಕ್ಕೂ ಸುಲಭ, ಅನುಷ್ಠಾನ ಮಾತ್ರ ಕಠಿನ. ಈ ಅಭಿಯಾನ ದೇಶವಾಸಿಗಳ ಅಭಿಯಾನವಾಗಬೇಕು. 

ಸರಕಾರದ ಅಭಿಯಾನವಾಗಬಾರದು. ನಾವು ಸ್ವಚ್ಛವಾಗುವುದು ಸಣ್ಣ ಕೆಲಸ. ಈ ನಿಟ್ಟಿನಲ್ಲಿ ನಾವು ವ್ಯವಹರಿಸದಿದ್ದರೆ ಸಂಕಲ್ಪದ ಕನಸು ಬಲು ದೂರ. ಕಸವನ್ನು ಅಳಿಸಬೇಕಾದವರು ನಾವೇ. ಸೀಟಿ, ಲಾಠಿ ಹಿಡಿದು ಈ ಅಭಿಯಾನವನ್ನು ಅಳವಡಿಸುವ ಪ್ರಯತ್ನಗಳ ಬಗ್ಗೆ ವರದಿಗಳು ಹೇಳುತ್ತದೆ. ಒಂದು ಹಂತದವರೆಗೆ ನಿಯಂತ್ರಣ ಅಗತ್ಯ. ಪ್ರಪಂಚದ ಬಹುತೇಕ ರಾಷ್ಟ್ರಗಳು ಆಯಾಯ ದೇಶಗಳ ಸ್ವಾತಂತ್ರ್ಯಕ್ಕೋಸ್ಕರ ರಕ್ತ ಹರಿಸಿದ ಇತಿಹಾಸ ನಮ್ಮ ಮುಂದಿವೆ. ಆದರೆ ಭಾರತವು ಅಹಿಂಸಾ ಪರಮ ಶ್ರೇಷ್ಠ ಧರ್ಮ ಎಂಬ ಮೂಲಕವೇ ಸ್ವಾತಂತ್ರ್ಯವನ್ನು ದೇಶಕ್ಕೆ ದೊರಕಿಸಿದ ಹೆಮ್ಮೆ ನಮಗಿದೆ. ಈ ಚಳವಳಿಯಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ದೇಶಕ್ಕೆ ಎರಡನೇ ಸ್ವಾತಂತ್ರ್ಯ ದೊರಕಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶವು ಸ್ವಚ್ಛವಾದರೆ ನ್ಯೂ ಇಂಡಿಯಾ ಪರಿಕಲ್ಪನೆ ಸಾಕಾರಗೊಂಡಂತೆ.

– ರಾಘವೇಂದ್ರ ರಾವ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next