Advertisement

ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಗುರಿ-ಯಶಸ್ಸು ಸಾಧ್ಯ

11:30 AM Aug 14, 2018 | |

ಬಸವನಬಾಗೇವಾಡಿ: ಜಗತ್ತಿನ 82 ಕೋಟಿ ಜೀವರಾಶಿಗಳಲ್ಲಿ ಪ್ರಾಣಿ, ಪಕ್ಷಿಗಳಿಗಿರುವ ಪ್ರಾಮಾಣಿಕತೆ ಮತ್ತು ನಿಷ್ಠೆ ಬೇರೆ ಯಾವ ಜೀವರಾಶಿಗೂ ಇರುವುದಿಲ್ಲ ಎಂದು ಮುಂಡರಿಗಿಯ ಜಗದ್ಗುರು ತೋಂಟದಾರ್ಯ ಹಾಗೂ ಬೈಲೂರಿನ ನಿಷ್ಕಲ್‌ ಮಂಟಪದ ನಿಜಗುಣಾನಂದ ಪ್ರಭುಗಳು ಹೇಳಿದರು.

Advertisement

ಪಟ್ಟಣದ ಬಸವೇಶ್ವರ ದೇವಾಲಯದ ಇಟರ್‌ನ್ಯಾಷನಲ್‌ ಆಂಗ್ಲ ಮಾಧ್ಯಮ ಶಾಲೆ ಆವರಣದ ಮೂಲನಂದೀಶ್ವರ ರಂಗಮಂದಿರದಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಹಾಗೂ ರಾಷ್ಟ್ರೀಯ
ಬಸವಸೈನ್ಯ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಅಕ್ಕನ ದಿವ್ಯ ದರ್ಶನ ಪ್ರವಚ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿರುವ ಪ್ರಾಣಿಗಳನ್ನು ನೋಡಿ ನಾವು ಬದುಕಬೇಕು ಎಂದರು.
 
ಮನುಷ್ಯ ಆಸ್ತಿ, ಆಯುಷ್ಯಕ್ಕೆ ಹೆಚ್ಚು ಮಹತ್ವ ನೀಡುವುದು ಮುಖ್ಯವಲ್ಲ. ಅದರ ಬದಲು ಮನುಷ್ಯ ಸಮಯಕ್ಕೆ ಪ್ರಮುಖವಾಗಿ ಮಹತ್ವ ನೀಡಿದಾಗ ಮಾತ್ರ ಅದಕ್ಕೊಂದು ಅರ್ಥಬರುತ್ತದೆ. ಹಿಂದಿನ ನಮ್ಮ ಶರಣರು, ಸಂತರು, ಸೂಫೀಗಳು ಸಮಯಕ್ಕೆ ಮಹತ್ವ ನೀಡಿರುವುದರಿಂದ ಬದುಕು ಕಟ್ಟಿಕೊಟ್ಟರು ಹೊರತು ಬೇರೆ ಏನು ಕಟ್ಟಲಿಲ್ಲ.ಯಾಕೆಂದರೆ ನಮ್ಮ ಇಡಿ ಸಮಯವೇ ಪ್ರಮುಖವಾಗಿ ಆಸ್ತಿ, ಅಂತಸ್ತು ಸಂಪಾದನೆಗಾಗಿ ಸಮಯ ಮೀಸಲು ಇಡುತ್ತೇವೆ, ಆದರೆ ಅದನ್ನು ಅನುಭವಿಸಲು ಸಮಯ ಇಲ್ಲವಾದಾಗ ಆಸ್ತಿ, ಅಂತಸ್ತು ಗಳಿಸಿದರು ಕೂಡಾ ವ್ಯರ್ಥವಾಗುತ್ತದೆ ಎಂದು ಹೇಳಿದರು. 

ಸೂರ್ಯ, ಚಂದ್ರ ಇರುವವರೆಗೂ ಬಸವನಬಾಗೇವಾಡಿಗೆ ಯಾವುದೇ ಧಕ್ಕೆಯಾಗದು. ಬಸವ ಹುಟ್ಟಿದ ಸ್ಥಳ ಹೀಗಾಗಿ ಇಲ್ಲಿ ಯಾವುದೇ ಧಕ್ಕೆಯಾಗದು. ನನಗೆ ಸ್ವಾಮಿಜೀಯಾಗುವ ಆಸೆಯಿಲ್ಲ, ನನಗೆ ಪುನರ್‌ ಜನ್ಮವಿದ್ದರೆ ಕನ್ನಡ ನಾಡಿನಲ್ಲಿ ಹುಟ್ಟಿಸು, ಬಸವಭಕ್ತನಾಗಿ ಹುಟ್ಟಿಸು ಎಂದು ಕೇಳುತ್ತೇನೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 50 ಲಕ್ಷ ವೆಚ್ಚದಲ್ಲಿ ಬೃಹತ್‌ ರಂಗಮಂದಿರ ನಿರ್ಮಾಣ ಶೀಘ್ರದಲ್ಲೇ ಮಾಡಲಾಗುವುದು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹಾಗೂ ಅವರ ಸಮಕಾಲಿ ಬಸವಾದಿ ಶರಣರು ಸಮಾಜದಲ್ಲಿನ ಮೌಡ್ಯ ಮತ್ತು ಅಂಧಕಾರ ಹೊಡೆದೊಡಿಸಿ ಸಮಾನತೆ ಸಾರಿದರು. ಇಂದು ಕೂಡಾ ಅನೇಕ ಶ್ರೀಗಳು ಅವರ ತತ್ವ ಸಿದ್ದಾಂಥಗಳನ್ನು ಮತ್ತು ಅವರ ಆಚಾರ -ವಿಚಾರಗಳು ಹಾಗೂ ಅವರ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸುವ ಕೆಲಸದಲ್ಲಿ ತೊಡೆಗಿಕೊಂಡು ಸಮಾಜ ಪರಿವರ್ತನೆಯಲ್ಲಿ ತೊಡಗಿದ್ದಾರೆ ಎಂದರು.

ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ, ಶಿವಾನಂದ ಈರಕಾರ ಮುತ್ಯಾ ನೇತೃತ್ವ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಫರಿಜಾನ್‌ ನಿಸಾರ್‌ ಚೌಧರಿ, ಬಿಜೆಪಿ ಬ್ಲಾಕ್‌ ಅಧ್ಯಕ್ಷ ಬಿ.ಕೆ. ಕಲ್ಲೂರ, ಸಹಕಾರಿ ಮಹಾಮಂಡಳಿ ನಿರ್ದೇಶಕ ಶಿವನಗೌಡ ಬಿರಾದಾರ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಲೋಕನಾಥ ಅಗರವಾಲ, ಯಮನಪ್ಪ ನಾಯೊRàಡಿ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಉಮೇಶ
ಹಾರಿವಾಳ, ಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ, ಸುಭಾಷ್‌ ಚಿಕ್ಕೊಂಡ, ಶಂಕರಗೌಡ ಪಾಟೀಲ, ಅನಿಲ ಪವಾರ, ಸಂಗಪ್ಪ ವಾಡೇದ, ಬಸಣ್ಣ ದೇಸಾಯಿ, ಸದಾನಂದ ಯಲಮೇಲಿ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ದೇವಸ್ಥಾನದ ಆಯುಕ್ತ ಬಿ.ಎಸ್‌. ಹಿರೇಮಠ ಇದ್ದರು. ಹಿರಿಯ ಸಾಹಿತಿ ಲ.ರು. ಗೊಳಸಂಗಿ ಪ್ರಾಸ್ತಾವಿಕ
ಮಾತನಾಡಿದರು. ಎಸ್‌.ಬಿ. ಬಾರಿಕಾಯಿ ನಿರೂಪಿಸಿದರು. ರವಿ ರಾಠೊಡ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next