Advertisement

ಗುರಿ ಸಾಧನೆಗೆ ವಿಶ್ವಾಸ ಅಗತ್ಯ

03:18 PM Sep 23, 2018 | |

ವಿಜಯಪುರ: ಪ್ರತಿಯೊಬ್ಬರಿಗೂ ಜೀವನದಲ್ಲಿ ನಿದಿಷ್ಟ ಗುರಿ ಇರಬೇಕು, ಅದರ ಸಾಧನೆಗೆ ದೃಢವಾದ ನಂಬಿಕೆ ಇರಬೇಕು. ಆಗಲೇ ಗುರಿ ಸಾಧನೆ ಮಾಡಿಕೊಳ್ಳಲು ಸಾಧ್ಯ ಎಂದು ಮಿಸ್‌ ಇಂಡಿಯಾ ಸೂಪರ್‌ ಟ್ಯಾಲೆಂಟ್‌ 2018ರ ವಿಜೇತೆ ಐಶ್ವರ್ಯ ಪೋರವಾಲ ಹೇಳಿದರು.

Advertisement

ತಾನು ಶಿಕ್ಷಣ ಪಡೆದ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಆಸಕ್ತಿದಾಯಕ ಕ್ಷೇತ್ರವನ್ನೇ ಆಯ್ದುಕೊಳ್ಳಬೇಕು. ನಿರಂತರ ಪ್ರಯತ್ನ ಮಾಡಬೇಕು ಮತ್ತು ಇದರ ಜೊತೆಗೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು ಅಂದಾಗ ಇಂತಹ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದರು.

ವಿಶ್ವಸುಂದರಿ ಮಾನಸಿ ಚಿಲ್ಲಾರ ಅವರನ್ನು ಸ್ಫೂರ್ತಿ ಹಾಗೂ ಪ್ರೇರಣೆಯಾಗಿಸಿಕೊಂಡ ನಾನು ಎಲ್ಲ ಹೆಣ್ಣು ಮಕ್ಕಳಂತೆ
ಮಾಡ್‌ಲಿಂಗ್‌ ಬಗ್ಗೆ ಕನಸು ಕಂಡಿದ್ದೆ. ಆದರೆ ಮನೆಯಲ್ಲಿ ಒಪ್ಪಿಗೆ ನೀಡಿರಲಿಲ್ಲ. ಮಾಡ್‌ಲಿಂಗ್‌ ಕ್ಷೇತ್ರದ ಮಹತ್ವದ
ಕುರಿತು ಮನವರಿಕೆ ಮಾಡಿಕೊಡುವ ಮೂಲಕ ನಾನು ನನ್ನ ಗುರಿ ಸಾಧನೆ ಮಾಡಿದ್ದೇನೆ ಎಂದರು.

ಡಾ| ಸುರೇಶ ಬಿರಾದಾರ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾರೆ. ಅಂತಹ
ಶಿಕ್ಷಕರು ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳಬಾರದು. ಒಂದು ವೇಳೆ ಹಾಳು ಮಾಡಿಕೊಂಡರೆ ಸಮಾಜಕ್ಕೆ ಬಹಳ
ನಷ್ಟವಾಗುತ್ತದೆ. ನಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಿಕೊಂಡರೆ ಜ್ಞಾನ ಹೆಚ್ಚಾಗುತ್ತದೆ ಎಂದರು.

ಜ್ಞಾನದ ಜೊತೆಗೆ ಕೌಶಲ್ಯ ಇರುವುದು ಬಹಳ ಮುಖ್ಯ. ಕೌಶಲ್ಯ ಇದ್ದರೆ ಮಾತ್ರ ನಮ್ಮ ಜ್ಞಾನವನ್ನು ಸರಿಯಾಗಿ
ಉಪಯೋಗಿಸಿಕೊಂಡಲ್ಲಿ ಒಳ್ಳೆ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬಹುದು ಎಂದರು. ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪ್ರೊ|
ಶೀಲಾ ಬಿರಾದಾರ ಮಾತನಾಡಿದರು. ವಿದ್ಯಾರ್ಥಿನಿಯಾದ ನಮೃತಾ ಬಿರಾದಾರ, ಆಚಲ್‌ ಪಾಟೀಲ, ಆಚಲ್‌ ಜೈನ್‌
ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು.

Advertisement

ಪ್ರಾಚಾರ್ಯ ಪ್ರೊ| ಚಂದನಗೌಡ ಮಾಲಿಪಾಟೀಲ, ಮೊಹ್ಮದ್‌ ಇಲಿಯಾಸ್‌, ಆನಂದ ಕೋರಿಕಂತಿಮಠ, ಪ್ರವೀಣಕುಮಾರ ಗೆಣ್ಣೂರ, ಎ.ಎಚ್‌. ಸಗರ, ಭಾರತಿ ಪಾಟೀಲ, ದೀಪಾ ತಿಳಿಗೂಳ, ಶ್ರೀದೇವಿ ಜೋಳದ, ಮೀನಾಕ್ಷಿ
ಹಿಪ್ಪರಗಿ, ಸುರೇಖಾ ಪಾಟೀಲ, ಅನಿತಾ ದೇಸಾಯಿ, ವಿವೇಕ್‌ ವೈಶಂಪಾಯನ, ರೇಣುಕಾ ಕಡೆಮನಿ, ಕಾಶೀನಾಥ ಅವಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next