Advertisement
ಬ್ಯಾಂಕ್ ಉದ್ಯೋಗಿಯಾದ ಅವರು ಮೂಲತಃ ಮೈಸೂರಿನವರು. ಅವರು ಕಳೆದ 35 ವರ್ಷಗಳಿಂದ ಇಲ್ಲಿ ನೆಲೆಸಿದ್ದು, 5 ವರ್ಷಗಳಿಂದ ತಮ್ಮ ಮನೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ಬೊಂಬೆಗಳು, ವಿಗ್ರಹಗಳ ಅಲಂಕಾರ ಮಾಡುತ್ತಿದ್ದಾರೆ. ಹಳೆ ಮೈಸೂರು ಪ್ರಾಂತದಲ್ಲಿ ವಂಶಪಾರಂಪರ್ಯವಾಗಿ ಅವರ ಮನೆಯಲ್ಲಿ ಈ ವಿಗ್ರಹಗಳನ್ನು ರಚಿಸುತ್ತಾರಂತೆ. ಇಲ್ಲಿ ಕೂಡ ಆ ಸಂಪ್ರದಾಯವನ್ನು ಮುಂದುವರಿಸುವ ಇಚ್ಛೆ ಅವರದ್ದು. ಮೈಸೂರಿನ ಪ್ರತೀ ಮನೆಗಳಲ್ಲೂ ನವರಾತ್ರಿ ಸಮಯದಲ್ಲಿ ಈ ರೀತಿಯ ವಿಗ್ರಹಗಳನ್ನು ಮಾಡಲಾಗುತ್ತದೆ. ಪ್ರಸ್ತುತ ಸಾಂಪ್ರದಾಯಿಕ ಹಾಗೂ ಹಳ್ಳಿ ಎಂಬ ಎರಡು ಶೈಲಿಯಲ್ಲಿ ಮಾಡಲಾಗಿದೆ.
ಭೂಪಾಲ್, ಈಜಿಪ್ಟ್ನ ಸಾಂಪ್ರದಾಯಿಕ ವಿಗ್ರಹ, ಐಫೆಲ್ ಟವರ್, ವಿವಿಧ ಶೈಲಿಯ ದುರ್ಗೆಯರ ಬೊಂಬೆಗಳು, ದೀಪದ್‌ಮಲ್ಲಿ, ರಾಜಾರಾಣಿ ವಿಗ್ರಹ ಹಾಗೂ ಕಂಚಿನ ವಿಗ್ರಹಗಳನ್ನು 5 ಮೆಟ್ಟಲುಗಳನ್ನಾಗಿ ಮಾಡಿ ಇಡಲಾಗಿದೆ. ಪಾಡ್ಯದಂದು ಪ್ರತಿಷ್ಠೆ
ಈ ಎಲ್ಲ ವಿಗ್ರಹಗಳನ್ನು ಪಾಡ್ಯದಂದು ಪ್ರತಿಷ್ಠಾಪನೆ ಮಾಡಲಾಗಿದೆ. ವಿಜಯದಶಮಿ ಯಂದು ತೆಗೆಯಲಾಗುತ್ತದೆ. ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗ ಇಂತಹ ಕಲಾಕೃತಿ, ವಿಗ್ರಹ, ಬೊಂಬೆಗಳನ್ನು ಇವರು ಖರೀದಿಸುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಇದನ್ನು ಅಲಂಕಾರವಾಗಿ ಇಡಲಾಗುತ್ತದೆ. ಈ ಬಾರಿ ಸುಮಾರು 200ರಿಂದ 250ರಷ್ಟು ಬೊಂಬೆ, ವಿಗ್ರಹಗಳನ್ನು ಇಟ್ಟಿದ್ದಾರೆ. ಕಳೆದ ಬಾರಿ ಸಾಂಪ್ರದಾಯಿಕ ಹಾಗೂ ಪ್ರಾಣಿ ಸಂಗ್ರಹಾಲಯ ಮಾದರಿಯಲ್ಲಿ ಮಾಡಿದ್ದರು. ಈ ಎಲ್ಲ ಕಲಾಕೃತಿಗಳನ್ನು ವೀಕ್ಷಿಸಲೆಂದೇ ಹಲವಾರು ಮಂದಿ ಭೇಟಿ ನೀಡುತ್ತಾರೆ ಎಂದು ಹೇಳುತ್ತಾರೆ ರಾಜೇಂದ್ರ.
Related Articles
ಈ ದಂಪತಿಯ ಮನೆಯ ಒಳಗೆ ಸಾಂಪ್ರದಾಯಿಕ ಹಳ್ಳಿಯನ್ನು ನಿರ್ಮಿಸಲಾಗಿದೆ. ಇದರೊಳಗೆ ಬಾವಿ, ರಸ್ತೆ, ಕೆರೆ, ತರಕಾರಿ, ಹಣ್ಣುಹಂಪಲು, ಏತ, ಕಿರಣಿ ಅಂಗಡಿ, ಪ್ರಾಣಿ-ಪಕ್ಷಿಗಳು, ಜನರು, ಹುಲ್ಲಿನ ಮನೆ ಅದರ ಮೇಲೊಂದು ಹಾವು, ದೊಡ್ಡದಾದ ಬೆಟ್ಟ ಅದರ ಮೇಲೆ ಚಾಮುಂಡಿ ವಿಗ್ರಹವನ್ನು ಮಾಡಲಾಗಿದೆ.
Advertisement
ಸಂಪ್ರದಾಯ ಉಳಿಸುವ ಕೆಲಸಮೈಸೂರಿನಲ್ಲಿ ನಮ್ಮ ಹಿರಿತನದಿಂದಲೂ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಉಡುಪಿಗೆ ಬಂದ ಅನಂತರವೂ ಇದನ್ನು ಮುಂದುವರಿಸುವ ಇಚ್ಛೆಯಾಯಿತು. ಅದರಂತೆ ಕಳೆದ 5 ವರ್ಷಗಳಿಂದ ಮನೆಯಲ್ಲಿ ಇದನ್ನು ಆಚರಿಸುತ್ತಿದ್ದೇವೆ. ಆ ಮೂಲಕ ಸಂಪ್ರದಾಯವನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ.
– ರಾಜೇಂದ್ರ