Advertisement

Kundapura: ಗೋಸಾಗಾಟ ತಡೆದ ಸಿಸಿಟಿವಿ ವೀಕ್ಷಣೆ

08:37 PM Jan 05, 2025 | Team Udayavani |

ಕುಂದಾಪುರ: ಬೀಜಾಡಿ ಸಮೀಪ ಅಕ್ರಮ ಗೋಸಾಗಾಟವನ್ನು ಸಿಸಿಟಿವಿ ಲೈವ್‌ ಮಾನಿಟರಿಂಗ್‌ ಮೂಲಕ ತಡೆಯಲಾಗಿದೆ.

Advertisement

ಬೀಜಾಡಿ ಜಂಕ್ಷನ್‌ ನಲ್ಲಿ ಮುಂಜಾವಿನ 3 ಗಂಟೆಗೆ ವಾಹನದಲ್ಲಿ ರಸ್ತೆ ಬದಿ ಇದ್ದ ಜಾನುವಾರನ್ನು ಕಟ್ಟಿ ತುಂಬಿಸಲು ಯತ್ನಿಸುವುದು ಕುಂದಾಪುರದ ಅಂಕದಕಟ್ಟೆಯಲ್ಲಿ ಇರುವ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಸಿಸಿಟಿವಿ ವೀಕ್ಷಿಸುವ ತಂಡದ ಗಮನಕ್ಕೆ ಬಂತು. ಸಾರ್ವಜನಿಕ ಹಿತದೃಷ್ಟಿಯಿಂದ ಅಳವಡಿಸಿದ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದ ಈ ದೃಶ್ಯವನ್ನು ತತ್‌ ಕ್ಷಣ ಸೈನ್‌ ಇನ್‌ ಸಂಸ್ಥೆ ಸಿಬಂದಿ ಪೊಲೀಸರ ಗಮನಕ್ಕೆ ತಂದರು. ಆದರೆ ಪೊಲೀಸರು ಬೇರೆ ರಸ್ತೆಯಲ್ಲಿ ಬೀಟ್‌ ನಿರತರಾಗಿದ್ದ ಕಾರಣ ಆ ಕೂಡಲೇ ಘಟನಾ ಸ್ಥಳ ತಲುಪುವುದು ಕಷ್ಟವಾಗಿತ್ತು.

ಆದರೂ ಅಲ್ಲಿಂದ ಹೊರಟ ಪೊಲೀಸರು ಸ್ಥಳ ತಲುಪುವವರೆಗೆ ಮಾಹಿತಿಗಾಗಿ ಎಂದು ಸೈನ್‌ ಇನ್‌ ಸಂಸ್ಥೆ ಸಿಬಂದಿ ರಾತೋರಾತ್ರಿ ಸ್ಥಳಕ್ಕೆ ತೆರಳಿದರು. ಅವರನ್ನು ನೋಡಿದ ಕಳ್ಳರು ಜಾನುವಾರು ಬಿಟ್ಟು ವಾಹನದಲ್ಲಿ ಪರಾರಿಯಾದರು. ವಾಹನದಲ್ಲಿ ಜಾನುವಾರುಗಳಿದ್ದವೇ, ಎಷ್ಟಿದ್ದವು, ಎಲ್ಲಿಂದ ಕದಿಯಲಾಗಿತ್ತು, ಎಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಇಲ್ಲ. ಈಚಿನ ದಿನಗಳಲ್ಲಿ ಗೋಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ ಎಂಬ ಆರೋಪ ಇದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ ಸೈನ್‌ ಇನ್‌ ಮಾಹಿತಿ ಮೇರೆಗೆ ಪೊಲೀಸರು ಸೊಸೈಟಿ ಕಳ್ಳತನ ಹಾಗೂ ಗೋಕಳ್ಳತನ ತಡೆದಿದ್ದು , ಪತ್ತೆ ಕೂಡಾ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next