Advertisement
ವಸತಿ ನಿಲಯಗಳು ಅದರಲ್ಲಿ ಬಾಲಕಿಯರ ವಸತಿ ನಿಲಯಗಳು ಮೂಲಭೂತ ಸೌಕರ್ಯಗಳೊಂದಿಗೆ ವಸತಿ ನಿಲಯ ವಿದ್ಯಾರ್ಥಿಗಳ ಆರೈಕೆ, ರಕ್ಷಣೆ ನೀಡುವುದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಮತ್ತು ವಸತಿ ನಿಲಯದ ಮೇಲ್ವಿಚಾರ ಕರ್ತವ್ಯ. ವಸತಿ ನಿಲಯದ ಮೇಲ್ವಿಚಾರಕಿ ಆಗೊಮ್ಮೆ ಈಗೊಮ್ಮೆ ಬಂದು ಹೋದರೆ ರಾತ್ರಿ ಕಾವಲುಗಾರತಿ (ನೈಟ್ ವಾಚ್‌ಮನ್) ಸಾಯಂಕಾಲ 6ಕ್ಕೆ ಬರುವ ಬದಲು ರಾತ್ರಿ 9ರ ನಂತರ ವಸತಿ ನಿಲಯಕ್ಕೆ ಬಂದರೇ ವಿದ್ಯಾರ್ಥಿಯರಿಗೆ ರಕ್ಷಣೆ ಮಾಡುವವರಾರು? ಏನಾದರು ಅವಘಡಗಳು ಸಂಭವಿಸಿದರೇ ಉತ್ತರ ನೀಡುವವರಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ವಿದ್ಯಾರ್ಥಿಗಳು ಇರುತ್ತಾರೆ. ಉಳಿದವರು ತಿಂಗಳಿಗೊಮ್ಮೆ ಬಂದು ಕಿಟ್ ಪಡೆದುಕೊಂಡು ಹೋಗುತ್ತಾರೆ. ದಿನಕ್ಕೆ ಬೆಳಗ್ಗೆ 7ಕ್ಕೆ ಚಹಾ, 8:45ರಿಂದ 9:35ರವರೆಗೆ ಊಟ, ಸಂಜೆ 5 ರಿಂದ 5:30ರವರೆಗೆ ಚಹಾ, ಉಪಾಹಾರ ಮತ್ತು ರಾತ್ರಿ 7:30 ರಿಂದ 8:30 ರವರೆಗೆ ಊಟ ನೀಡಬೇಕು. ಅದು ಕೇವಲ ವೇಳಾ ಪಟ್ಟಿಯಲ್ಲಿ ಇದೆ.
Related Articles
Advertisement
ಇಂದಿನ ಕಾಲದಲ್ಲಿ ಅಪ್ರಾಪ್ತ ಬಾಲಕಿಯರನ್ನು ಹೊರಗೆ ಬಿಡುವುದು ಕಷ್ಟವಾಗಿದೆ. ವಸತಿ ನಿಲಯದ ಇಲಾಖೆ ಮತ್ತು ಮೇಲ್ವಿಚಾರಕರನ್ನು ನಂಬಿ ಪಾಲಕರು ತಮ್ಮ ಮಕ್ಕಳನ್ನು ಬಿಟ್ಟಿರುತ್ತಾರೆ. ಇವರಿಗೆ ಮೂಲಭೂತ ಸೌಕರ್ಯ ಒದಗಿಸುವಜೊತೆಗ ಪೌಷ್ಟಿಕ ಆಹಾರ ನೀಡುವ ಜೊತೆಗೆ ರಕ್ಷಣೆ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಶೈಲಜಾ ಸ್ಥಾವರಮಠ, ಮಹಿಳಾ ಜಾಗರಣಾ ವೇದಿಕೆ ಅಧ್ಯಕೆ ವಸತಿ ನಿಲಯದಲ್ಲಿ 50 ವಿದ್ಯಾರ್ಥಿಗಳ ಹಾಜರಾತಿಯಿದೆ. ಅವರಲ್ಲಿ 30-35 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿರುತ್ತಾರೆ. ಇನ್ನುಳಿದವರು ತಿಂಗಳಿಗೆ ಬಂದು ಇಲಾಖೆ ನೀಡುವ ಕಿಟ್ ತಗೆದುಕೊಂಡು ಹೋಗುತ್ತಾರೆ. ವಸತಿ ನಿಲಯದಲ್ಲಿ ಒಬ್ಬ ರಾತ್ರಿ ಕಾವಲುಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರು ಸರಿಯಾಗಿ ಬರುತ್ತಿಲ್ಲ ಎಂದು ತಿಳಿದು ಬಂದಿದ್ದು ಎಚ್ಚರಿಕೆ ನೀಡಲಾಗಿದೆ.
ದಾಜ್ಯೋತಿ ನಾಸಿ, ವಸತಿ ನಿಲಯದ ಮೇಲ್ವಿಚಾರಕಿ ವಸತಿ ನಿಲಯದಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ನೋಡುತ್ತೇನೆ. ಅಲ್ಲಿನ ಅವ್ಯವಸ್ಥೆ ನನಗೆ ತಿಳಿದಿಲ್ಲ. ಈ ಕುರಿತು ಮೇಲ್ವಿಚಾರಕಿಯರನ್ನು ವಿಚಾರ ಮಾಡಲಾಗುವುದು.
ಬಸಯ್ಯ ಗೋಳಮಠ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಸಿಂದಗಿ. ರಮೇಶ ಪೂಜಾರ