Advertisement

ಉದ್ಯಾನಕ್ಕೆ ಪಟೇಲ ಹೆಸರು ನಾಮಕರಣ

06:31 PM Nov 01, 2022 | Team Udayavani |

ಬೀದರ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಬೀದರ ನಗರಾವೃದ್ಧಿ ಪ್ರಾ ಧಿಕಾರದಿಂದ ನಗರದ ಗುರುದ್ವಾರ ಪರಿಸರದಲ್ಲಿ ಖಾಸಗಿ ಬಡಾವಣೆಯ ಉದ್ಯಾನವನಕ್ಕೆ ಸರದಾರ ವಲ್ಲಭಭಾಯಿ ಪಟೇಲರ ಹೆಸರು ನಾಮಕರಣ ಕಾರ್ಯಕ್ರಮ ನಡೆಯಿತು.

Advertisement

ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಪಟೇಲರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ನಗರದ ಹೃದಯ ಭಾಗದಲ್ಲಿ ಅತಿ ದೊಡ್ಡ ಉದ್ಯಾನವನಕ್ಕೆ ಲೋಹ ಪುರುಷ ವಲ್ಲಭಭಾಯಿ ಪಟೇಲರ ಹೆಸರು ಲೋಕಾರ್ಪಣೆ ಮತ್ತು ಈ ಉದ್ಯಾನವನದಲ್ಲಿ ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರ ಹೆಸರನ್ನು ಶಿಲೆಯಲ್ಲಿ ಕೆತ್ತಿ ಅಭಿವೃದ್ಧಿ ಪಡಿಸುವ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಅವರ ದೂರದೃಷ್ಟಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ರಘುನಾಥ ಮಲ್ಕಾಪುರೆ ಮಾತನಾಡಿ, ನಗರದಲ್ಲಿ ಅನೇಕ ಬಡಾವಣೆಗಳ ಉದ್ಯಾನವನಗಳು ಒತ್ತುವರಿಯಾಗುತ್ತಿದ್ದವು. ಆದರೆ, ಬಾಬು ವಾಲಿ ಅವರು ಬಿಡಿಎ ಅಧ್ಯಕ್ಷರಾದ ನಂತರ ಮೊದಲ ಸಭೆಯಲ್ಲೇ ಪ್ರಸ್ತಾವನೆ ಜಾರಿ ಮಾಡಿ ಉದ್ಯಾನವನ ಮತ್ತು ಸಿಎ ಸೈಟ್‌ಗಳು ಪ್ರಾಧಿಕಾರಕ್ಕೆ ಒಪ್ಪಿಸುವ ಕಾರ್ಯ ಕೈಗೊಂಡರು. ಉದ್ಯಾನವನಗಳಿಗೆ ಸ್ವತಂತ್ರ ಸೇನಾನಿ ಹಾಗೂ ವೀರ ಪುರುಷರ ಹೆಸರು ನಾಮಕರಣ ಯುವಕರಿಗೆ ಸ್ಪೂರ್ತಿ ನೀಡುವ ಕೆಲಸವಾಗಿದೆ.

ಬೆಂಗಳೂರಿಗಿಂತಲೂ ಬೀದರನಲ್ಲಿ ಒಂದು ಒಳ್ಳೆಯ ವಾತಾವರಣವಿದ್ದು, ಈ ಉದ್ಯಾನವನದ ಅಭಿವೃದ್ಧಿಗೆ ನನ್ನ ಸಹಕಾರ ಇರಲಿದೆ ಎಂದರು. ಬಿಡಿಎ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಈ ಉದ್ಯಾನ ನಗರದಲ್ಲೇ ಅತಿ ದೊಡ್ಡದಾಗಿದೆ. ಸರದಾರ ಪಟೇಲರ ಹೆಸರಿಡುವುದು ಅಷ್ಟೇ ಅಲ್ಲ, ದೆಹಲಿಯ ಪ್ರೀಡಂ ಪಾರ್ಕ್‌ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯಕ್ಕಾಗಿ ವೀರ ಮರಣ ಹೊಂದಿದ ಮಹಾನ್‌ ಚೇತನರ ಹೆಸರುಗಳನ್ನು ಪ್ರದರ್ಶಿಸಲಾಗುವುದು
ಮತ್ತು ಹೋರಾಟಗಾರರ ಜೀವನ ಬಿಂಬಿಸುವಂಥ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಗುರುನಾನಕ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್‌ ಸಿಂಗ್‌ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರವೂಫುದ್ದೀನ ಕಚೇರಿವಾಲೆ, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಸರ್ಕಾರಿ ನೌಕರರ ಸಂಘದ
ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದೆಗೆ, ಬಿಜೆಪಿ ಮುಖಂಡರಾದ ಈಶ್ವರ ಸಿಂಗ್‌ ಠಾಕೂರ, ಸುಭಾಷ ಮಡಿವಾಳ, ಗಣೇಶ, ರೇವಣಸಿದ್ದಪ್ಪ ಜಲಾದೆ, ಡಾ| ಬಸವರಾಜ ಪಾಟೀಲ ಅಷ್ಟೂರ, ಬಿ.ಜಿ ಶೆಟಕಾರ, ಜಗದೀಶ ಖೂಬಾ, ಸೋಮಶೇಖರ ಪಾಟೀಲ ಗಾದಗಿ, ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ನಾಗಶೆಟ್ಟಿ ಕಪೂರ, ಅನಿಲ ಚಿಂತಾಮಣಿ, ರೋಷನ ವರ್ಮಾ, ನವಿನ್‌ ಚಿಟ್ಟಾ, ಸುನೀಲ ಗೌಳಿ, ನರೇಶ ಗೌಳಿ, ನಿತಿನ ನವಲಕಲೆ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next