ಚಿಕ್ಕಮಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದ ಅಮೃತಮಹೋತ್ಸವ ಆಚರಿಸಲಾಗುತ್ತಿದ್ದು, ಅಮೃತಮಹೋತ್ಸವದ ಸವಿನೆನಪಿಗಾಗಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮಹಾತ್ಮ ಗಾಂ ಧೀಜಿ ಭೇಟಿ ನೀಡಿದನೆನಪಿಗಾಗಿ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಗಾಂಧಿ ಗ್ಯಾಲರಿ ನಿರ್ಮಿಸಲಾಗುತ್ತಿದ್ದು ಅಮೃತಅಂಗಳವಾಗಿ ಮಾರ್ಪಡುಗೊಳ್ಳಲಿದೆ.
ಸ್ವಾತಂತ್ರ್ಯ ಪಡೆದು 75 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ಅಮೃತಮಹೋತ್ಸವವನ್ನು ಅರ್ಥಪೂರ್ಣವಾಗಿಆಚರಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿಧೀಜಿಯವರನೆನಪನ್ನು ಚಿರಸ್ಥಾಯಿಯಾಗಿಸಲು ಗಾಂಧಿ ಗ್ಯಾಲರಿನಿರ್ಮಿಸುತ್ತಿದ್ದು ಗಾಂ ಧಿ ಜಯಂತಿಯಂದು “ಅಮೃತಅಂಗಳ’ ಹೆಸರಿನೊಂದಿಗೆ ಉದ್ಘಾಟನೆಗೊಳ್ಳಲಿದೆ.ಮಹಾತ್ಮ ಗಾಂ ಧೀಜಿಯವರು ಹಾಸನಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಗೆ 1927ಆ.18ರಂದು ಆಗಮಿಸಿದ್ದರು. ಅಂದಿನಪುರ ಸಭಾಧ್ಯಕ್ಷರಾದ ಬಿ.ಕೇಶವಯ್ಯ ಸೇರಿದಂತೆಊರಿನ ಪ್ರಮುಖರು ಸುಂಕದಕಟ್ಟೆ ಬಳಿ ಮಹಾತ್ಮಗಾಂಧಿಧೀಜಿಯವರನ್ನು ಜಿಲ್ಲೆಗೆ ಬರಮಾಡಿಕೊಂಡರು.
ಜಿಲ್ಲೆಗೆ ಭೇಟಿ ನೀಡಿದ ಮಹಾತ್ಮ ಗಾಂಧಿàಜಿಯವರು ಇಂದಿನ ಜಿಲ್ಲಾ ಧಿಕಾರಿ ಕಚೇರಿಆವರಣದಲ್ಲಿ ಸ್ವಾತಂತ್ರÂ ಹೋರಾಟಗಾರರನ್ನುದ್ದೇಶಿಸಿಹಿಂದಿಯಲ್ಲಿ ಭಾಷಣ ಮಾಡಿದರು. ಅಂದಿನ ಅವರಭಾಷಣವನ್ನು ಕರ್ನಾಟಕ ಕೇಸರಿ ಗಂಗಧರರಾವ್‌ದೇಶಪಾಂಡೆ ಅವರು ಕನ್ನಡಕ್ಕೆ ಭಾಷಾಂತರಿಸಿದ್ದರು.ಅಂದು ಮಹಾತ್ಮ ಗಾಂ ಧೀಜಿಯವರು ನಗರದಜಿಲ್ಲಾ ಧಿಕಾರಿ ಕಚೇರಿಗೆ ಭೇಟಿ ನೀಡಿದ ಸವಿನೆನಪಿಗಾಗಿ 2016, ಆ. 8ರಂದು ಮಹಾತ್ಮ ಗಾಂಧೀಜಿಯವರಪುತ್ಥಳಿ ನಿರ್ಮಿಸಿ “ನೆನಪಿನಂಗಳ’ ಎಂದು ನಾಮಕರಣಮಾಡಿ ಪ್ರತಿಷ್ಠಾಪಿಸಲಾಗಿದ್ದು ಮಹಾತ್ಮ ಗಾಂಧೀಜಿಯವರು ಜಿಲ್ಲೆಗೆ ಭೇಟಿ ನೀಡಿದನ್ನು ಇಂದಿಗೂನೆನೆಯಲಾಗುತ್ತಿದೆ. ಸ್ವಾತಂತ್ರ್ಯ ಬಂದು 75ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿದ್ದು, ಗಾಂ ಧೀಜಿಯವರು ಜಿಲ್ಲೆಗೆಭೇಟಿ ನೀಡಿದ ಸವಿನೆನಪಿಗಾಗಿ ನಗರಸಭೆಯ 5ಲಕ್ಷರೂ. ನೆರವಿನೊಂದಿಗೆ ಗಾಂ ಧಿ ಗ್ಯಾಲರಿ ಸ್ಥಾಪಿಸಿ ಅದಕ್ಕೆಅಮೃತ ಅಂಗಳ ಎಂದು ಹೆಸರಿಡಲು ಮುಂದಾಗಿದೆ.ನಗರದ ಜಿಲ್ಲಾ ಧಿಕಾರಿ ಕಚೇರಿ ಒಳಂಗಣದಲ್ಲಿ ಗಾಂಧಿಗ್ಯಾಲರಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು,ಜಿಲ್ಲಾ ಧಿಕಾರಿಗಳ ಕಚೇರಿ ಇನ್ನಷ್ಟು ಮೆರುಗುಪಡೆದುಕೊಳ್ಳಲಿದೆ.ಜಿಲ್ಲಾ ಧಿಕಾರಿಗಳ ಕಚೇರಿ ಕಟ್ಟಡ ಬ್ರಿಟಿಷರ ಕಾಲದಲ್ಲಿನಿರ್ಮಾಣವಾಗಿದ್ದು ಪಾರಂಪರಿಕ ಕಟ್ಟಡ ಇದಾಗಿದೆ.
ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆಉನ್ನತೀಕರಣ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.ಅಮೃತ ಅಂಗಳ ನಿರ್ಮಾಣ ಕಾರ್ಯನಡೆಯುತ್ತಿದ್ದು, ದೆಹಲಿ ಗಾಂ ಧಿ ಭವನದಿಂದಗಾಂ ಧೀಜಿಯವರು ಬಾಲ್ಯದಿಂದ ಹಿಡಿದುಕೊನೆಯ ಕ್ಷಣದವರೆಗೆಗಿನ ಭಾವಚಿತ್ರಗಳನ್ನು ಖರೀದಿಸಿಗಾಂ ಧಿ ಗ್ಯಾಲರಿಯಲ್ಲಿ ಅನಾವರಣಗೊಳಿಸುವಮೂಲಕ ಅವರ ನೆನಪು ಉಳಿಯುವಂತೆ ಮಾಡುವಪ್ರಯತ್ನ ನಡೆದಿದೆ.ಜಿಲ್ಲಾ ಧಿಕಾರಿ ಕಚೇರಿಯಲ್ಲಿರುವ ಕಲ್ಲಿನಕಂಬಗಳಿಗೆ ಈ ಹಿಂದೆ ಬಿಳಿ ಬಣ್ಣ ಬಳಿದಿದ್ದು ಅದನ್ನುತೆಗೆದು ಮೂಲ ಕಲ್ಲನ್ನು ಹಾಗೇ ಉಳಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಒಳಾಂಗಣದಲ್ಲಿ ಸುಣ್ಣ ಬಣ್ಣದಕಾರ್ಯ ನಡೆಯುತ್ತಿದೆ. ಅಮೃತ ಅಂಗಳದಲ್ಲಿಮಹಾತ್ಮ ಗಾಂಧಿಧೀಜಿಯವರ ಭಾವಚಿತ್ರಗಳಿರುವಫಲಕದೊಂದಿಗೆ ಜಿಲ್ಲೆಯ ಇತಿಹಾಸ ತಿಳಿಸುವಫಲಕಗಳನ್ನು ಹಾಕಲಾಗುತ್ತಿದೆ. ಇದರೊಂದಿಗೆಸ್ವಾತಂತ್ರÂ ಮಹೋತ್ಸವವನ್ನು ಜಿಲ್ಲಾಡಳಿತಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ.