Advertisement

ಆಟೋಟಗಳು ಪಠ್ಯದಷ್ಟೇ ಮುಖ್ಯ: ಮತ್ತಿಮಡು

10:52 AM Dec 03, 2018 | |

ಕಲಬುರಗಿ: ಸ್ವಾಮಿ ನಾರಾಯಣ ಗುರುಕುಲ ಇಂಟರನ್ಯಾಷನಲ್‌ ಶಾಲೆಯಲ್ಲಿ ನಡೆದ ಗುರುಕುಲ ಒಲಿಂಪಿಕ್ಸ್‌ -2018 ಕ್ರೀಡಾಕೂಟದ ಚಾಂಪಿಯನ್‌ ಆಗಿ ಸ್ವಾಮಿ ನಾರಾಯಣ ಗುರುಕುಲ ಇಂಟರನ್ಯಾಷನಲ್‌ ಶಾಲೆ ಹೊರ ಹೊಮ್ಮಿತು. ಆದರೆ ಈ ಚಾಂಪಿಯನ್‌ಶಿಪ್‌ ಪಟ್ಟವನ್ನು ಮಳಖೇಡದ ಆದಿತ್ಯ ಬಿರ್ಲಾ ಪಬ್ಲಿಕ್‌ ಶಾಲೆಗೆ ಬಿಟ್ಟು ಕೊಡಲಾಯಿತು.

Advertisement

ರನ್ನರ್‌ ಆಪ್‌ ಪ್ರಶಸ್ತಿಯು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪ ಪಬ್ಲಿಕ್‌ ಶಾಲೆಗೆ ನೀಡಲಾಯಿತು. ಪೂಜ್ಯ ಋಷಿ ಚರಣದಾಸ್‌ ಜಿ. ಸ್ವಾಮೀಜಿ ಹಾಗೂ ಆಡಳಿತ ಮಂಡಳಿ ನಿರ್ಧಾರದಂತೆ ಚಾಂಪಿಯನ್‌ ಕಪ್‌ನ್ನು ಆದಿತ್ಯ ಬಿರ್ಲಾ ಪಬ್ಲಿಕ್‌ ಶಾಲೆಗೆ ಹಾಗೂ ರನ್ನರ್‌ ಕಪ್‌ನ್ನು ಅಪ್ಪ ಪಬ್ಲಿಕ್‌ ಶಾಲೆಗೆ ನೀಡಲಾಯಿತು.

ಗುರುಕುಲ -2018 ಇದನ್ನು ಭಗವಾನ ಶ್ರೀ ಸ್ವಾಮಿ ನಾರಾಯಣ ಸ್ಮರಣೆಯಲ್ಲಿ ಈ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆ ಹಾಗೂ ಮೌಲ್ಯಗಳ ಬೆಳವಣಿಗೆಗಾಗಿ ನೀಡಲಾಗುವುದು ಎಂದು ರವಿವಾರ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿವರಣೆ ನೀಡಲಾಯಿತು.
 
ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ಸುಖವಲ್ಲಭದಾಸ್‌ ಜೀ ಸ್ವಾಮೀಜಿ ವಹಿಸಿದ್ದರು. ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.

ನಂತರ ಮಾತನಾಡಿದ ಅವರು, ದೈಹಿಕ ಪರಿಶ್ರಮ ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನದಷ್ಟೇ ಆಟೋಟಗಳು ಮುಖ್ಯವಾಗಿವೆ ಎಂದರು. ಜಿಲ್ಲಾ  ಪಂಚಾಯತ್‌ ಸದಸ್ಯ ಅಶೋಕ ಸಗರ, ಬಸವರಾಜ ಮಾಲಿಪಾಟೀಲ್‌, ಜಯಶವರೂ, ವಿಧೇಹ ಸ್ವರೂಪ ಸ್ವಾಮೀಜಿ, ಹಾಗರಗಾ ಗ್ರಾಮ ಪಂಚಾಯಿತಿ ಸದಸ್ಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next