ಗದಗ: ಕೋವಿಡ್ 2ನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಿಂದಆರಂಭಗೊಂಡ ವಾರಾಂತ್ಯದ ಕಫೂÂìಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ವರ್ತಕರು ಸ್ವಯಂ ಪ್ರೇರಿತರವಾಗಿ ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಕರ್ಫ್ಯೂಗೆ ಬೆಂಬಲ ಸೂಚಿಸಿದರು.ಜಿಲ್ಲೆಯ ಗದಗ- ಬೆಟಗೇರಿ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಂಡರಗಿ, ನರಗುಂದಹಾಗೂ ಶಿರಹಟ್ಟಿ, ರೋಣ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಎಲ್ಲೆಡೆ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು, ರಸ್ತೆಗಳಲ್ಲಿ ವಾಹನ ಹಾಗೂ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.
ಸ್ತಬ್ಧವಾದ ಮುದ್ರಣ ನಗರಿ: ವಾರಾಂತ್ಯದ ಕಫೂÂì ಹಿನ್ನೆಲೆಯಲ್ಲಿ ಗದಗ-ಬೆಟಗೇರಿಅವಳಿ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆ 10 ಗಂಟೆ ವರೆಗೆ ಅಗತ್ಯ ವಸ್ತುಗಳಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಕಿರಾಣಿ, ತರಕಾರಿ ಹಾಗೂ ಸಲೂನ್‌ಗಳಿಗೆಅನುಮತಿ ನೀಡಲಾಗಿತ್ತು. ಆದರೆ, ಸಲೂನ್‌ಗಳನ್ನು ಹೊರತುಪಡಿಸಿ, ಗದಗ-ಬೆಟಗೇರಿಅವಳಿ ನಗರದ ವಾಣಿಜ್ಯ ಪ್ರದೇಶದಲ್ಲಿರುವ ಯಾವುದೇ ಅಂಗಡಿಗಳು ಬಾಗಿಲುತೆರೆಯಲಿಲ್ಲ.
ಗ್ರೇನ್ ಮಾರುಕಟ್ಟೆ, ನಾಮಜೋಶಿ ರಸ್ತೆ, ಸ್ಟೇಷನ್ ರಸ್ತೆ, ಬ್ಯಾಂಕ್ ರೋಡ್‌ಮತ್ತು ಬೆಟಗೇರಿ ಮಾರುಕಟ್ಟೆ ಸಂಪೂರ್ಣ ಮುಚ್ಚಿದ್ದವು. ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.
ವಾಹನ ಸೀಜ್: ಈ ನಡುವೆ ನಾನ ನೆಪವೊಡ್ಡಿ ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದಸುಮಾರು 30ಕ್ಕೂ ಅಧಿ ಕ ದ್ವಿಚಕ್ರ ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಇಲ್ಲಿನ ಮಹಾತ್ಮಗಾಂ ವೃತ್ತ, ಹಳೇ ಜಿಲ್ಲಾ ಧಿಕಾರಿ ಕಚೇರಿ ವೃತ್ತ ಸೇರಿದಂತೆಇನ್ನಿತರೆ ಸರ್ಕಲ್‌ಗಳಲ್ಲಿ ನಾಕಾ ಬಂ ಹಾಕಿದ್ದ ಪೊಲೀಸರು, ಶಿರಸ್ತ್ರಾಣ ಹಾಗೂ ಅಗತ್ಯದಾಖಲೆಗಳನ್ನು ಹಾಜರುಪಡಿಸದವರಿಗೆ 500 ರೂ. ದಂಡ ವಿ ಧಿಸಿದರು. ಈ ಪೈಕಿವಿನಾಕಾರಣ ಸಂಚರಿಸುವವರ ವಾಹನಗಳನ್ನು ವಶಕ್ಕೆ ಪಡೆದು ಶಾಕ್ ನೀಡಿದರು.ಸಚಿವರಿಂದ
ಕರ್ಫ್ಯೂ ಅವಲೋಕನ: ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಕೋವಿಡ್‌ನಿಯಂತ್ರಣ ಕುರಿತು ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಬಳಿಕಅ ಧಿಕಾರಿಗಳೊಂದಿಗೆ ನಗರದಲ್ಲಿ ಕರ್ಫ್ಯೂ ಅವಲೋಕಿಸಿದರು.
ನಗರದ ಮುಳಗುಂದನಾಕಾ, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಪ್ರಮುಖ ಮಾರುಕಟ್ಟೆ, ಗಾಂದಿ ಸರ್ಕಲ್‌ಸೇರಿದಂತೆ ವಿವಿಧ ಬೀದಿಗಳಲ್ಲಿ ಸಂಚರಿಸಿ ಪರಿಸ್ಥಿತಿ ಅವಲೋಕನ ನಡೆಸಿದರು.ಸಚಿವರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ನಗರಸಭೆಪೌರಾಯುಕ್ತ ರಮೇಶ ಜಾಧವ ಸಾಥ್ ನೀಡಿದರು.