Advertisement

ವಿಡಿಯೋ ಕಾಲ್‌ನಲ್ಲಿ ಅಂತ್ಯಕ್ರಿಯೆ ವೀಕ್ಷಿಸಿದ ಮೃತರ ಬಂಧುಗಳು

07:15 PM May 02, 2021 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಇಲ್ಲಿಯ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುತ್ತಿದ್ದು, ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಸಂಬಂಧಿಕರು ವಿಡಿಯೋ ಕಾಲ್‌ ಮೂಲಕ ಅಂತಿಮದರ್ಶನ ಪಡೆದು ಅಂತ್ಯಕ್ರಿಯೆ ವೀಕ್ಷಿಸಿದರು.

Advertisement

ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಶುಕ್ರವಾರ ಒಂದೇ ದಿನ 17 ಜನರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಶನಿವಾರ ಸಾಮೂಹಿಕವಾಗಿ 9 ಜನರ ಅಂತ್ಯಕ್ರಿಯೆ ನಡೆಸಲಾಯಿತು. ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಂಬಂಧಿಕರಿಗೆ ಅವಕಾಶವಿಲ್ಲ. ಹೀಗಾಗಿ ದೂರದಲ್ಲಿಯೇ ನಿಂತು ಸಂಬಂಧಿ ಕರು ವಿಡಿಯೋ ಕಾಲ್‌ ಮೂಲಕ ಅಂತ್ಯಕ್ರಿಯೆ ವೀಕ್ಷಿಸಿ ಕಣ್ಣೀರು ಸುರಿಸಿದರು. ನಮ್ಮವರೇ ನಮ್ಮಿಂದ ದೂರವಾಗು ತ್ತಿದ್ದಾರೆ ಎಂದು ಶವದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದೇ ಕಣ್ಣೀರು ಸುರಿಸುತ್ತಿರುವ ದೃಶ್ಯ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಕಂಡು ಬಂತು.

ಕೋವಿಡ್‌ ಮರಣ ಮೃದಂಗ ಹೆಚ್ಚುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದೆ. ಶನಿವಾರ ಬೆಳಗ್ಗೆ ಸಾಮೂಹಿಕವಾಗಿ 9 ಜನರ ಅಂತ್ಯಸಂಸ್ಕಾರ ನಡೆಸಲಾಯಿತು. ಆಪ್ತರು ಬಂಧುಗಳನ್ನು ದೂರವಿಟ್ಟು ಕೋವಿಡ್‌ ಸೋಂಕಿತರ ಅಂತ್ಯಸಂಸ್ಕಾರ ನಡೆಸಲಾಯಿತು. ಅಂತ್ಯಸಂಸ್ಕಾರ ವೇಳೆ ದೂರದಲ್ಲಿಯೇ ನಿಂತುಕೊಂಡಿದ್ದ ಬಂಧುಗಳು ಕಣ್ಣೀರು ಸುರಿಸುತ್ತಿದ್ದರು. ಮƒತರನ್ನು ನೆನೆದು ಆಕ್ರಂದನ ಮುಗಿಲು ಮುಟ್ಟಿತ್ತು.

ನಗರದೆಲ್ಲೆಡೆ ಖಾಲಿ ಖಾಲಿ: ನಗರದಲ್ಲಿ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಹುತೇಕ ರಸ್ತೆಗಳು ಶನಿವಾರ ಖಾಲಿ ಖಾಲಿಯಾಗಿ ಕಂಡು ಬಂದವು. ಶನಿವಾರ ಬೆಳಗಾವಿ ನಗರದಲ್ಲಿ ವಾರದ ಸಂತೆ ಇರುತ್ತಿತ್ತು. ಗಿಜಿಗಿಡುತಿದ್ದ ರಸ್ತೆಗಳು ಕರ್ಫ್ಯೂ ಹಿನ್ನೆಲೆಯಲ್ಲಿ ಭಣಗುಡುತ್ತಿದ್ದವು. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಮಾತ್ರ ಅವಕಾಶ ನೀಡಿದ್ದರಿಂದ ಆ ವೇಳೆ ಮಾತ್ರ ಜನರು ಕಂಡು ಬಂದರು. 10 ಗಂಟೆಯ ನಂತರ ಪೊಲೀಸರು ಜನರನ್ನು ಚದುರಿಸಿದರು. ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಹಲವು ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next