Advertisement

ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

06:56 PM Apr 30, 2021 | Team Udayavani |

ಗುಳೇದಗುಡ್ಡ: ಯೋಧ ಆಸಂಗೆಪ್ಪ ಪರಸಪ್ಪ ಮಾದರ (28) ಅವರ ಅಂತ್ಯಕ್ರಿಯೆ ಗುರುವಾರ ಲಾಯದಗುಂದಿ ಗ್ರಾಮದ ಗ್ರಾಪಂ ಆವರಣದಲ್ಲಿ ಸರಕಾರಿ ಗೌರವಗಳೊಂದಿಗೆ ಕೋವಿಡ್‌ ನಿಯಮಾವಳಿಯಂತೆ ನಡೆಯಿತು.

Advertisement

ಬೆಳಿಗ್ಗೆ 11 ಗಂಟೆಗೆ ಗ್ರಾಮಕ್ಕೆ ಆಗಮಿಚಸಿದ ಯೋಧನ ಪಾರ್ಥಿವ ಶರೀರ ನೇರವಾಗಿ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬಂತು. ಅಲ್ಲಿ ಯೋಧನ ಸಂಬಂಧಿ ಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬಳಿಕ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಯೋಧನ 6 ಜನ ಸಂಬಂಧಿಕರು ಪಿಪಿಇ ಕಿಟ್‌ ಧರಿಸಿ ಅಂತಿಮ ಸಂಸ್ಕಾರ ನೆರವೇರಿಸಿದರು.

ತಾಲೂಕು ಆಡಳಿತದಿಂದ ತಹಶೀಲ್ದಾರ್‌ ಜಿ.ಎಂ.ಕುಲಕರ್ಣಿ, ಡಿವೈಎಸ್‌ಪಿ ಚಂದ್ರಶೇಖರ ನಂದರೆಡ್ಡಿ, ಸಿಪಿಆಯ್‌ ರಮೇಶ ಹಾನಾಪುರ ಯೋಧನ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಹೆಚ್ಚಿನ ಜನ ಸೇರದಂತೆ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿರಲಿಲ್ಲ. ಪಂಚಾಯಿತಿ ಸುತ್ತಮುತ್ತ ಇರುವ ಜನರು ತಮ್ಮ ಮನೆ ಮಾಳಿಗೆ ಮೇಲೆ ನಿಂತು ಯೋಧನ ಅಂತ್ಯಸಂಸ್ಕಾರ ವೀಕ್ಷಿಸಿ, ಕಂಬನಿ ಮಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next