Advertisement

ಏಳು ದಿನಗಳ ಪೂಜೆ ಬಳಿಕ ಬೌದ್ಧ ಸನ್ಯಾಸಿ ಲೊಬ್‌ಸಂಗ್ ಪುಂಟ್ಸೊಕ್ ಅಂತ್ಯಕ್ರಿಯೆ

08:16 PM Sep 19, 2021 | Team Udayavani |

ವರದಿ: ಮುನೇಶ ತಳವಾರ

Advertisement

ಮುಂಡಗೋಡ: ಇಲ್ಲಿಯ ಟಿಬೆಟಿಯನ್ ಕಾಲನಿಯ ಲೋಸಲಿಂಗ್ ಮೊನಾಸ್ಟಿಯ ಹಿರಿಯ ಬೌದ್ಧ ಸನ್ಯಾಸಿ ಲೊಬ್‌ಸಂಗ್ ಪುಂಟ್ಸೊಕ್(೧೦೩) ಅವರ ಮೃತದೇಹಕ್ಕೆ ಕಳೆದ ಒಂದು ವಾರದಿಂದ ಪೂಜೆ ಸಲ್ಲಿಸಿ ಶುಕ್ರವಾರ (ಸೆ.17) ಅಂತ್ಯ ಸಂಸ್ಕಾರ ನಡೆಸಲಾಗಿದೆ.

ಇಲ್ಲಿ ಹಿರಿಯ ಬೌದ್ಧ ಸನ್ಯಾಸಿಗಳ ಮೃತದೇಹಗಳನ್ನು ಒಂದು ವಾರ ಅಥವಾ 15-20 ದಿನಗಳವರೆಗೂ ಇಟ್ಟು ಪೂಜಿಸಿ ನಂತರ ಅಂತ್ಯಕ್ರಿಯೆ ಮಾಡುವ ಸಂಪ್ರದಾಯ ಇದೆ. ಕಳೆದ ಒಂದು ವಾರದ ಹಿಂದೆ ಸನ್ಯಾಸಿ ಲೊಬ್‌ಸಂಗ್ ತಮ್ಮ ಮನೆಯಲ್ಲಿ ಧ್ಯಾನ ಮಾಡುತ್ತಲೇ ಪ್ರಾಣ ಬಿಟ್ಟಿದ್ದರು.ಇವರ ಶರೀರಕ್ಕೆ ಬೌದ್ಧ ಸನ್ಯಾಸಿಗಳು 7 ದಿನಗಳ ಕಾಲ ಪೂಜೆ ಮಾಡಿ ನಂತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಏನಿದು ಸಂಪ್ರದಾಯ ?

ಹಿರಿಯ ಬೌದ್ಧ ಸನ್ಯಾಸಿಗಳು ಮರಣ ಹೊಂದಿದ ಬಳಿಕ ಆತ್ಮ ಅವರ ದೇಹವನ್ನು ಬಿಟ್ಟು ಹೋಗಿರುವುದಿಲ್ಲ. ಅವರು ಪುನರ್ಜನ್ಮ ತಾಳುತ್ತಾರೆ ಎನ್ನುವ ನಂಬಿಕೆ ಈ ಜನರಲ್ಲಿದೆ. ಟಿಬೆಟಿಯನ್ ಜನಾಂಗದಲ್ಲಿ ಯಾರು ಉನ್ನತ ಮಟ್ಟದ ಧಾರ್ಮಿಕ ಶಿಕ್ಷಣ ಪಡೆದಿರುತ್ತಾರೋ ಅಂಥವರ ಮರಣದ ನಂತರ ಅವರೊಳಗೆ ಮತ್ತೊಂದು ಆತ್ಮ ಬಂದು ಸೇರಿಕೊಂಡು 5, 10, 15, 20 ಹೀಗೆ ಕೆಲ ದಿನಗಳ ಕಾಲ ಇರುತ್ತದೆ. ಅದು ಮೃತ ದೇಹವನ್ನು ಬಿಟ್ಟು ಹೋಗುವ ವೇಳೆ ಮೂಗಿನಲ್ಲಿ ರಕ್ತ ಸೋರುವಿಕೆ ಅಥವಾ ಮೃತಪಟ್ಟು ಕೆಲ ದಿನಗಳ ನಂತರ ತೆರೆದ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ನಂತರ ಅಂತಿಮ ಸಂಸ್ಕಾರ ಮಾಡಲಾಗುತ್ತದೆ.

Advertisement

ಲಾಕ್ಪಾ ಸಿರಿಂಗ್, ಟಿಬೆಟಿಯನ್ ಆಡಳಿತ ಕಚೇರಿ ಚೇರಮನ್ : ಹಿರಿಯ ಬೌದ್ಧ ಸನ್ಯಾಸಿ ಲೊಬ್‌ಸಂಗ್ 1967ರಲ್ಲಿ ಟಿಬೆಟ್ ಬಿಟ್ಟು ಭಾರತಕ್ಕೆ ಬಂದಿದ್ದರು. ಅವರಿಗೆ ಯಾವುದೇ ರೋಗವಿರಲಿಲ್ಲ. ಪೂಜೆ ಮಾಡುವುದು, ಕಿರಿಯ ಬೌದ್ಧ ಸನ್ಯಾಸಿಗಳಿಗೆ ಧರ್ಮ ಬೋಧನೆ ಮಾಡುವುದಷ್ಟೇ ಅವರ ಕಾಯಕವಾಗಿತ್ತು. ಕಳೆದ ಒಂದು ವಾರದ ಹಿಂದೆ ಅವರು ಮರಣಹೊಂದಿದರು. 7 ದಿವಸ ಅವರ ಮೃತದೇಹವನ್ನು ಯಾವುದೆ ಔಷಧೋಪಚಾರವಿಲ್ಲದೆ, ಮಂಜುಗಡ್ಡೆಯಲ್ಲಿ ಇರಿಸದೆ ನಂತರ ಶುಕ್ರವಾರ ಅಂತ್ಯಕ್ರಿಯೆ ನಡೆಸಲಾಯಿತು.

ಇನ್ನು ಕಳೆದ ನಾಲ್ಕೈದು ವರ್ಷದ ಹಿಂದೆಯೂ ಟಿಬೆಟಿಯನ್ ಕ್ಯಾಂಪಿನ ಗಾಂದೇನ್ ಮೊನಾಸ್ಟಿಯ ಹಿರಿಯ ಬೌದ್ಧ ಸನ್ಯಾಸಿಯೊಬ್ಬರು ಧ್ಯಾನ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಾಣ ತ್ಯಜಿಸಿದ್ದರು. ಅವರ ಮೃತದೇಹಕ್ಕೆ ಹದಿನೈದು ದಿನಗಳ ಕಾಲ ಪೂಜೆ ಸಲ್ಲಿಸಿ ನಂತರ ಅಂತ್ಯಕ್ರಿಯೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next