Advertisement

ಮೂಲಗೇಣಿದಾರರ ಸಮಸ್ಯೆ ಪರಿಹಾರಕ್ಕೆ  ಒತ್ತು : ಕೋಟ

10:19 AM Oct 23, 2017 | Team Udayavani |

ಮಹಾನಗರ: ಮೂಲಗೇಣಿದಾರರ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ರವಿವಾರ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಮಂಗಳೂರು, ಉಡುಪಿ ಮೂಲ ಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಏಳನೇ ಮಹಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆಯೂ ಹಲವು ಬಾರಿ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಸಚಿವರು ಅಧಿಕಾರಿಗಳಿಗೆ ಮನದಟ್ಟು ಮಾಡುವ ಕೆಲಸ ಮಾಡಿ ದ್ದೇನೆ. ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸಮಸ್ಯೆಯ ಗಂಭೀರತೆ ತಿಳಿದಿದೆ ಎಂದರು.

ಕಾನೂನು ಸಲಹೆಗಾರ ಎ.ಪಿ.ಗೌರಿಶಂಕರ ಮಾತನಾಡಿ, 1856ರಲ್ಲಿ ಸಿಪಾಯಿ ದಂಗೆ ಮುಗಿದ ಕೂಡಲೇ ಬ್ರಿಟಿಷರು ಮೂಲಗೇಣಿ ನೀಡಿರುವ ಬಗ್ಗೆ ದಾಖಲೆಗಳಿವೆ. ಆದರೆ ದಾಖಲೆಗಳಲ್ಲಿ ಕೆಲವೊಂದು ಷರತ್ತುಗಳನ್ನು ನಮೂದಿಸಿರುವುದರಿಂದ ಸಂಪೂರ್ಣ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು. ರಕ್ಷಣಾ ವೇದಿಕೆ ಅಧ್ಯಕ್ಷ ಮಾಕ್ಸಿಮ್‌ ಡಿ’ ಸಿಲ್ವ ಅಧ್ಯಕ್ಷತೆ ವಹಿಸಿದ್ದರು. 

ಉಡುಪಿ ಘಟಕದ ಪ್ರತಿನಿಧಿ ಎಸ್‌. ಎಸ್‌.ಶೇಟ್‌, ಸುರೇಂದ್ರ ಶೆಟ್ಟಿ ಕೊಕ್ಕರ್ಣೆ, ಯು.ವಾಸು, ಪಿ.ಕೆ. ಯಶೋಧರ್‌ ಉಪಸ್ಥಿತರಿದ್ದರು. ಜೆರಾಲ್ಡ್‌ ಟವರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಜನಪ್ರತಿನಿಧಿಗಳಿಗೆ ಅನಗತ್ಯ ಸಮ್ಮಾನ ಸಲ್ಲದು
ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯು ಮಾಡಲಿದ್ದ ಸಮ್ಮಾನವನ್ನು ಸ್ವೀಕರಿಸಲು ನಿರಾಕರಿಸಿದ ಶ್ರೀನಿವಾಸ ಪೂಜಾರಿ ಅವರು, ಹೋದ ಕಾರ್ಯಕ್ರಮಗಳೆಲ್ಲ ಜನಪ್ರತಿನಿಧಿಗಳಿಗೆ ಸಮ್ಮಾನ ಮಾಡಿಯೇ ಅವರನ್ನು ಹಾಳು ಮಾಡಿದ್ದೀರಿ. ಅವರಿಗೆ ಸಮ್ಮಾನ ಮಾಡುವ ಬದಲು ಅವರಿಗೆ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಸಿ. ಅವರ ಕರ್ತವ್ಯವನ್ನು ನೆನಪಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next