Advertisement

ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಕಾರ್ಯ ತೃಪ್ತಿಕರವಾಗಿಲ್ಲ: ಸದಲಗಿ

01:44 PM Jun 17, 2017 | Team Udayavani |

ದಾವಣಗೆರೆ: ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ಆರಂಭಗೊಂಡ ಮಧ್ಯಸ್ಥಿಕೆ ಕೇಂದ್ರಗಳು ಹಲವೆಡೆ ಪರಿಣಾಮಕಾರಿ ಕೆಲಸ ಮಾಡುತ್ತಿದ್ದು, ದಾವಣಗೆರೆ ಮಧ್ಯಸ್ಥಿಕೆ ಕೇಂದ್ರದ ಕಾರ್ಯ ತೃಪ್ತಿದಾಯಕವಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎ.ಎಸ್‌. ಸದಲಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಿಂದ ತರಬೇತಿ ಪಡೆದ ಮಧ್ಯಸ್ಥಿಕೆದಾರರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದ ಅವರು, ದಾವಣಗೆರೆಯ ಮಧ್ಯಸ್ಥಿಕೆ ಕೇಂದ್ರ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿಲ್ಲ.

10 ವರ್ಷಗಳ ಹಿಂದೆ ನ್ಯಾಯಾಲಗಳ ಮೇಲಿನ ಒತ್ತಡ ಆರಂಭಗೊಂಡ ಮಧ್ಯಸ್ಥಿಕೆ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು. ದಾವಣಗೆರೆ ಕೇಂದ್ರಕ್ಕೆ ತಿಂಗಳಿಗೆ 25ರಿಂದ 30 ಕೌಟುಂಬಿಕ, ಸಿವಿಲ್‌ ಪ್ರಕರಣಗಳನ್ನು ಕಳುಹಿಸಲಾಗುತ್ತಿದೆ. ಆದರೆ, ಬಹುತೇಕ ಪ್ರಕರಣಗಳ ಇತ್ಯರ್ಥ ಆಗುತ್ತಿಲ್ಲ.

ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿ ತನ್ನ ಕರ್ತವ್ಯ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದರು. ನೈಜತೆ, ವಾಸ್ತವಾಂಶದ ಕೊರತೆ, ಕಾನೂನು ಕುರಿತ ಮಾಹಿತಿ ಕೊರತೆ, ಅಜ್ಞಾನ, ನಕಾರಾತ್ಮಕ ಧೋರಣೆಯಿಂದ ಬಹುತೇಕರು ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುತ್ತಾರೆ. 

ಮಧ್ಯಸ್ಥಿಕೆದಾರರು ಕಕ್ಷಿದಾರರ ಮನಸ್ಥಿತಿ ಅರಿತು ಇತ್ಯರ್ಥಕ್ಕೆ ಮುಂದಾದರೆ ಸುಲಭವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಬಹುದಾಗಿದೆ ಎಂದು ಅವರು ಹೇಳಿದರು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಸಂಯೋಜಕ ಹಾಗೂ ತರಬೇತಿ ಮುಖ್ಯಸ್ಥ ಪ್ರಸಾದ್‌ ಸುಬ್ಬಣ್ಣ ಮಾತನಾಡಿ, ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಪ್ರಕರಣಗಳು ಶೀಘ್ರ ಇತ್ಯರ್ಥ ಆಗುವುದರಿಂದ ವಕೀಲರಿಗೂ, ಕಕ್ಷಿದಾರರಿಗೆ ಕೇಂದ್ರಗಳ ಮೇಲೆ ವಿಶ್ವಾಸ ಮೂಡಿದೆ.

Advertisement

ಇದೇ ಕಾರಣಕ್ಕೆ ಸ್ವತಃ ವಕೀಲರು, ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸುವಂತೆ ಕೋರುತ್ತಿದ್ದಾರೆ. ಈ ಹಂತದಲ್ಲಿ ಮಧ್ಯಸ್ಥಿಕೆದಾರರು ಪರಿಣಾಮಕಾರಿಯಾಗಿ ಕೆಲಸಮಾಡಿ ಕೇಂದ್ರದ ಕುರಿತು ಹೆಚ್ಚಿನ ಭರವಸೆ ಹುಟ್ಟಿಸುವಂತೆ ಕೆಲಸಮಾಡಬೇಕು ಎಂದರು. ಮಧ್ಯಸ್ಥಿಕೆದಾರ, ವಕೀಲ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ನೀಡಲಾಗುವ ಮಹತ್ವವನ್ನು ಜಿಲ್ಲಾ ಕೇಂದ್ರಗಳಿಗೂ ಕೊಡಬೇಕು.

ಈ ಕುರಿತು ಆರೋಗ್ಯಕರ ಚರ್ಚೆಗಳಾಗಬೇಕು. ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳನ್ನು ಕ್ರಿಯಾತ್ಮಕವಾಗಿ ಪುನರುಜೀjವನಗೊಳಿಸಬೇಕಿದೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ಧಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಶೀಲಾ ಕೃಷ್ಣ, ಶಾಂತ ಚೆಲ್ಲಪ್ಪ, ವಕೀಲ ಅಶ್ವಿ‌ಜ್‌ ಇತರರು ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next