Advertisement

ಪತ್ರಿಕಾ ವಿತರಕರ ಕಾರ್ಯ ಬಹು ಮುಖ್ಯ

05:54 PM Sep 08, 2022 | Team Udayavani |

ಕಲಾದಗಿ: ವರದಿಗಾರರು ಸುದ್ದಿ ಬರೆದು ಕಳುಹಿಸಿದರೆ ಪತ್ರಿಕಾ ಸಂಸ್ಥೆಗಳು ವರದಿ ಪ್ರಕಟಿಸಿ ಪ್ರಸಾರ ಮಾಡುತ್ತವೆ. ವಿದೇಶ, ದೇಶ, ರಾಜ್ಯ, ಜಿಲ್ಲೆಯ ಸುದ್ದಿಗಳು ಪ್ರತಿ ಮನೆ-ಮನೆಗೆ ಓದುಗರನ್ನು ತಲುಪಬೇಕಾದರೆ ಪತ್ರಿಕಾ ವಿತರಕರ ಕಾರ್ಯ ಬಹು ಮುಖ್ಯ ಎಂದು ಮಾಜಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

Advertisement

ಕಲಾದಗಿ ಕಾರ್ಯನಿರತ ಪತ್ರಿಕಾ ಬಳಗದಿಂದ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅನೇಕ ಜನರ ದಿನಚರಿ ಆರಂಭವಾಗುವುದು ಪತ್ರಿಕೆ ಓದುವುದರಿಂದಲೇ. ಪತ್ರಿಕೆಗಳು ನಂಬಿಗೆ, ವಿಶ್ವಾಸಾರ್ಹ ಮಾಧ್ಯಮ. ಪತ್ರಿಕಾ ವಿತರಕರಿಗೆ ಗ್ರಾಪಂ ಮಟ್ಟದಲ್ಲಿ ನಿವೇಶನ ಒದಗಿಸಲು ಪತ್ರಕರ್ತರು ಶ್ರಮಿಸಬೇಕು. ಸರ್ಕಾರದಿಂದ ವಿತರಕರಿಗೆ ಸಹಾಯ ಸೌಲಭ್ಯ ಒದಗಿಸಲು ಸಂಬಂಧಿಸಿದವರಿಗೆ ಒತ್ತಾಯಿಸುವೆ ಎಂದರು.

ಬೆಂಗಳೂರು ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್‌ ಅಂಗಡಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಪತ್ರಿಕಾ ವಿತರಕರ ಒಕ್ಕೂಟ ಸಂಘವಿದೆ. ಜಿಲ್ಲಾ ಮಟ್ಟದಲ್ಲೂ ಪತ್ರಿಕಾ ವಿತರಕ ಸಂಘ ಆಗಬೇಕು. ಅದಕ್ಕಾಗಿ ಜಿಲ್ಲೆಯಲ್ಲಿನ ಎಲ್ಲ ಪತ್ರಿಕೆ ವಿತರಕರೊಂದಿಗೆ ಸಮಾಲೋಚಿಸಿ ಸಂಘ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು.

ಬಾಗಲಕೋಟೆ ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಆನಂದ ದಲಭಂಜನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿತರಕರ ಬೇಡಿಕೆ ಈಡೇರಿಸಿಕೊಳ್ಳಲು ತಮ್ಮದೇ ಸಂಘ ಸ್ಥಾಪಿಸಿಕೊಳ್ಳಬೇಕು. ಆ ಮೂಲಕ ಸರ್ಕಾರದಿಂದ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು ಎಂದರು.

Advertisement

ಸಿ.ಎಲ್‌. ಹೂಗಾರ, ಪಿಎಸೈ ಆರ್‌.ಎಂ. ಸಂಕನಾಳ, ಬಶೆಟ್ಟಿ ಅಂಗಡಿ, ಬಿ.ಎ.ಬಾಗವಾನ, ಶಂಕರ ನಿಂಬರಗಿ, ಮಲ್ಲಪ್ಪ ಜಮಖಂಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕೆ ವಿತರಕ ಬಸಪ್ಪ ಪಾಣಿಶೆಟ್ಟಿ, ನೂರಹಮ್ಮದ್‌ ನದಾಫ್‌, ರಾಜು ಜೋಶಿ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದ.ರಾ.ಪುರೋಹಿತ ಪ್ರಾಸ್ತಾವಿಕ ಮಾತನಾಡಿದರು, ಚಂದ್ರಶೇಖರ ಹಡಪದ ನಿರೂಪಿಸಿದರು. ಮೆಹಬೂಬ ನದಾಫ್‌ ಸ್ವಾಗತಿಸಿದರು. ಸಿಕಂದರ ಬಾವಾಖಾನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next