Advertisement

ಭಾರಿ ಮಳೆಗೆ ಕುಸಿದ ಶಾಲೆಯ ಅಡಿಪಾಯ… ಕೊಠಡಿಯೊಳಗೆ ನೀರು ನುಗ್ಗಿ ದಾಖಲೆಗಳು ನೀರುಪಾಲು

08:57 AM Aug 20, 2024 | Team Udayavani |

ಕುರುಗೋಡು: ರಾತ್ರಿ ಸುರಿದ ಭಾರಿ ಮಳೆಗೆ ಕುರುಗೋಡಿನ ಹರಿಕೃಪ ಕಾಲೋನಿಯಲ್ಲಿ ಸರ್ಕಾರಿ ಶಾಲೆ ಅಡಿಪಾಯ ಕುಸಿದು ಬಿದ್ದು ಪರಿಣಾಮ ಶಾಲಾ ಕೊಠಡಿಯ ನೆಲಹಾಸು ಬಂಡೆಗಳು ಕುಸಿದು ಕೊಠಡಿಯ ಒಳ ಇರುವ ಕಚೇರಿ ದಾಖಲೆಗಳು ಸೇರಿ ಅನೇಕ ಪರಿಕರಗಳು ಮಳೆ ನೀರು ಪಾಲಾಗಿವೆ.

Advertisement

2010 ನಲ್ಲಿ ಪ್ರಾರಂಭ ಗೊಂಡ ಶಾಲೆಯಲ್ಲಿ 1 ರಿಂದ 5 ತರಗತಿಗಳು ನಡೆಯುತ್ತಿವೆ.

ಶಾಲೆಯಲ್ಲಿ ಒಟ್ಟು 105 ಅಲೆಮಾರಿ ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆ ಕುಸಿಯಲು ಕಾರಣ:
ಗುಡ್ಡದ ಪಕ್ಕಲ್ಲಿರುವ ಶಾಲೆ ಇದಾಗಿದೆ. ಶಾಲೆಯ ಏರುಮತ್ತದಲ್ಲಿ ಖಾಲಿ ನಿವೇಶನದ ಲೇಔಟ್ ಇದೆ. ಲೇಔಟ್ ನ ಚರಂಡಿಗಳು ಹೊರಹೋಗಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ರಾತ್ರಿ ಸುರಿದ ಮಹಾ ಮಳೆಗೆ ಮಳೆ ನೀರಿನ ಒತ್ತಡಕ್ಕೆ ತಡೆಗೋಡೆಗಳು ಕುಸಿದು ಮಳೆನೀರೆಲ್ಲ ಸಂಪೂರ್ಣ ಶಾಲೆಯ ಆವರಣಕೆ ನುಗ್ಗಿವೆ. ಇದರ ಪರಿಣಾಮ ಶಾಲೆಯ ಕಟ್ಟಡ ಮಳೆನೀರು ಒತ್ತಡ ತಡೆಯದೆ ಶಾಲೆಯ ಅಡಿಯದಲ್ಲಿ ರಂಧ್ರ ಕೊರೆದು ಒಳಭಾಗದಲ್ಲಿ ಸುರಂಗ ಸೃಷ್ಟಿಸಿ ಶಾಲೆಗೆ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next