Advertisement

Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್‌ ಕಂಬಗಳಿಗೆ ಹಾನಿ

01:42 AM Sep 12, 2024 | Team Udayavani |

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಜನತಾ ಕಾಲನಿ ಪರಿಸರದಲ್ಲಿ ಬುಧವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ 4 ಮನೆಗಳ ಛಾವಣಿಯು ಹಾನಿಗೀಡಾಗಿ 2 ವಿದ್ಯುತ್‌ ಕಂಬಗಳು ಮುರಿದಿದೆ.

Advertisement

ನೆಲ್ಯಾಡಿಯ ಸಂತ ಜಾರ್ಜ್‌ ಪದವಿ ಪೂರ್ವ ಕಾಲೇಜಿನ ಬಳಿ ಇರುವ ಕಾಲನಿಯ ನಿವಾಸಿಗರಾದ ಐತ್ತಪ್ಪ, ಇಸುಬು, ಬಾಬು ಆಚಾರಿ, ಲೋಕೇಶ್‌ ಅವರ ಮನೆಯ ಮೇಲ್ಛಾವಣಿಯು ಗಾಳಿಯ ವೇಗಕ್ಕೆ ಸಿಲುಕಿ ಹಾನಿಗೀಡಾಗಿದ್ದು, ಸಮೀಪದಲ್ಲಿದ್ದ ಎರಡು ವಿದ್ಯುತ್‌ ಕಂಬಗಳು ಮುರಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್‌ ಅಧ್ಯಕ್ಷ, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next