Advertisement

Kampli: ತಾಲ್ಲೂಕಿನಲ್ಲಿ ದಾಖಲೆಯ ಮಳೆ… ಜಮೀನುಗಳು ಜಲಾವೃತ, ಹಲವೆಡೆ ರಸ್ತೆ ಸಂಪರ್ಕ ಕಡಿತ

11:13 AM Aug 20, 2024 | Team Udayavani |

ಕಂಪ್ಲಿ: ತಾಲ್ಲೂಕಿನ ಕಂಪ್ಲಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ತಡೆ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದರೆ, ಎರೆಡು ರಾಜ್ಯ ಹೆದ್ದಾರಿಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೆ, ಜಮೀನಯಗಳು ಜಲಾವೃತಗೊಂಡಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಹುತೇಜ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಕೆಲವು ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ನಷ್ಟ ಸಂಭವಿಸಿದೆ.

Advertisement

ಕಂಪ್ಲಿ ತಾಲ್ಲೂಕಿನಲ್ಲಿ ತಡೆ ರಾತ್ರಿ ದಾಖಲೆಯ 8.14.ಸೆಂ.ಮೀ.ನಷ್ಟು ಮಳೆಯಾಗಿದೆ. ದೇವಸಮುದ್ರದಲ್ಲಿ ಮಾರೆಮ್ಮನ ಹಳ್ಳ ತುಂಬಿ ಹರಿಯುತ್ತಿದ್ದರೆ, ಉಡುವಿನ ಹಳ್ಳವು ಭರ್ತಿಯಾಗಿದ್ದು, ಜಮೀನುಗಳು ಜಲಾವೃತಗೊಂಡಿವೆ. ರಾಜ್ಯ ಹೆದ್ದಾರಿ 29ರ ದೇವಲಾಪುರದ ಮಾರೆಮ್ಮ ದೇವಸ್ಥಾನದ ಹತ್ತಿರ ರಸ್ತೆಯನ್ನು ಕೊರೆದುಕೊಂಡು ಬೃಹತ್ ಕಿಂಡಿ ಏರ್ಪಟ್ಟಿದ್ದು ರಸ್ತೆ ಅಪಘಾತಕ್ಕೆ ಬಾಯ್ತೆರೆದಿದ್ದು, ಸದ್ಯ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, ಪೊಲೀಸ್ ಕಾವಲು ಹಾಕಲಾಗಿದೆ.

ಇನ್ನು ರಾಜ್ಯ ಹೆದ್ದಾರಿ 49 ರ ರಾಮಸಾಗರ ಹತ್ತಿರದ ಗ್ರಾಮದ ಮುಂದೆ ರಾಮಲಿಂಗೇಶ್ವರ ಕೆರೆಯ ನೀರು ಮತ್ತು ಮಳೆಯ ನೀರು ಸೇರಿ ರಾಜ್ಯ ಹೆದ್ದಾರಿ ಮೇಲೆ ಸುಮಾರು ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಗ್ರಾಮದ ಮುಂದಿನ ಉಡುಸಲಮ್ಮ ದೇವಾಲು, ಅಕ್ಕಪಕ್ಕದ ಜಮೀನುಗಳು, ನಾಟಿ ಮಾಡಿದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ಸಣಾಪುರ ಗ್ರಾಮದ ಇಂದಿರಾನಗರದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಆಹಾರ ಪದಾರ್ಥಗಳು ಸೇರಿದಂತೆ ಎಲ್ಲಾ ಸಾಮಾನುಗಳು ನೀರು ಪಾಲಾಗಿವೆ.

Advertisement

ದೇವಲಾಪುರದ ರಾಜನ ಮಟ್ಟಿಯಲ್ಲಿ ಚರಂಡಿ ನೀರು 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದೆ.

ತಾಲ್ಲೂಕಿನಲ್ಲಿ ಮೆಟ್ರಿ- ಚಿನ್ನಾಪುರ, ಜವುಕು ಜೀರಿನೂರು, ಸಕ್ಕರೆ ಕಾರ್ಖಾನೆ ಜವುಕು ಗ್ರಾಮಗಳ ಸಂಪರ್ಕ ರಸ್ತೆಗಳು ಜಲಾವೃತಗೊಂಡಿದ್ದು, ದೇವಸಮುದ್ರ, ರಾಮಸಾಗರ, ದೇವಲಾಪುರ, ಜವುಕು, ಜೀರಿಗನೂರು, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿಗಳಲ್ಲಿ ಸುಮಾರು 2009ರ ನಂತರ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ದಾಖಲೆಯ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next