ಗುರುದಾಸ್‌ಪುರ: ಸಿಖ್ಬರು ಪಾಕಿಸ್ತಾನದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳಲು ಅನುಕೂಲ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ನಿರ್ಮಾಣಕ್ಕೆ ಸೋಮವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪಂಜಾಬ್ ಮುಖ್ಯ ಮಂತ್ರಿ ಅಮರಿಂದರ್ ಸಿಂಗ್ ಶಂಕುಸ್ಥಾಪನೆ ಮಾಡಿದ್ದಾರೆ. ನ. 22 ರಂದು ಕೇಂದ್ರ ಸಂಪುಟ ಸಭೆಯಲ್ಲಿ ಈ ಕಾರಿಡಾರ್ ನಿರ್ಮಾಣ ನಿರ್ಧಾರ ಕೈಗೊಳ್ಳಲಾಗಿತ್ತು. ಗುರುದಾಸ್‌ಪುರದ ದೇರಾ ಬಾಬಾ ನಾನಕ್‌ನಿಂದ ಅಂತಾರಾಷ್ಟ್ರೀಯ ಗಡಿವರೆಗೆ ಕಾರಿಡಾರ್ ನಿರ್ಮಿಸಲಾಗುತ್ತದೆ.
ಪಾಕ್‌ನ ಪಂಜಾಬ್ ಪ್ರಾಂತ್ಯದ ಶಾಕಾರ್‌ಗಢದಲ್ಲಿ ಕರ್ತಾ ರ್ಪುರ ಇದೆ. ಸಿಖ್ ಧರ್ಮವನ್ನು ಸಂಸ್ಥಾಪನೆ ಮಾಡಿದ ಗುರು ನಾನಕರು ಇಲ್ಲಿ 18 ವರ್ಷ ವಾಸಿಸಿದ್ದರು. ಅಂತಾ ರಾಷ್ಟ್ರೀಯ ಗಡಿಯಿಂದ ಕೇವಲ 3 ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಈ ವರ್ಷ ಗುರು ನಾನಕರ 550ನೇ ಜನ್ಮೋತ್ಸವವಾಗಿದ್ದರಿಂದ, ಸಿಖ್ಬರಿಗೆ ಅತ್ಯಂತ ಪವಿತ್ರವಾದದ್ದಾಗಿದೆ. 4 ತಿಂಗಳಲ್ಲಿ ಕಾರಿಡಾರ್ ನಿರ್ಮಾಣ ಮುಗಿಸ ಲಾಗುತ್ತದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶಂಕು ಸ್ಥಾಪನೆ ಕಾರ್ಯಕ್ರಮ ದಲ್ಲಿ ಕೇಂದ್ರ ಸಚಿವೆ ಹರಸಿಮ್ರತ್ ಕೌರ್ ಬಾದಲ್, ಹರದೀಪ್ ಸಿಂಗ್‌ಪುರಿ ಹಾಗೂ ವಿಜಯ್ ಸಂಪ್ಲಾ ಹಾಜರಿದ್ದರು.
ಭಾರತ ಅತಿದೊಡ್ಡ ಸೇನೆ ಹೊಂದಿದೆ: ಭಾರತ ಅತಿದೊಡ್ಡ ಸೇನೆಯನ್ನು ಹೊಂದಿದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು ಎಂದು ಪಂಜಾಬ್ ಸಿಎಂ ಅಮರಿಂದರ್ ಎಚ್ಚರಿಕೆ ನೀಡಿ ದ್ದಾರೆ. ನಾನೂ ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ನನಗಿಂತ ಸೇವೆಯಲ್ಲಿ ಕಿರಿಯರು. ಗಡಿಯಲ್ಲಿ ಯೋಧರನ್ನು ಸಾಯಿಸುವಂತೆ ನಿಮ್ಮ ಸೇನೆಯು ಬೋಧಿಸುತ್ತದೆಯೇ? ನಮ್ಮ ಯೋಧರನ್ನು ಸ್ನೆ„ಪರ್ ಬಳಸಿ ಕೊಲೆ ಮಾಡುತ್ತಿದ್ದೀರಿ. ಇದು ಮೂರ್ಖ ಕೃತ್ಯ ಎಂದು ಸಿಂಗ್ ಟೀಕಿಸಿದ್ದಾರೆ.
ಈ ಮಧ್ಯೆ ಪಾಕ್‌ನಲ್ಲಿ ಕರ್ತಾರ್ಪುರ ಕಾರಿಡಾರ್ ಅನಾವರಣಗೊಳಿಸುವ ದಿನದ ಕಾರ್ಯಕ್ರಮದಲ್ಲಿ ಸಚಿವ ನವಜೋತ್ ಸಿಂಗ್ ಸಿಧು ಭಾಗವಹಿಸಲು ನಿರ್ಧರಿಸಿರುವುದು ಅವರು ಚಿಂತನೆಯ ಶೈಲಿಯನ್ನು ಸೂಚಿಸುತ್ತದೆ ಎಂದು ಅಮರಿಂದರ್ ಹೇಳಿದ್ದಾರೆ. ಆದರೆ ಭಾರತೀಯ ಸೈನಿಕರು ಮತ್ತು ನಾಗರಿಕರನ್ನು ಪಾಕಿಸ್ತಾನ ಹತ್ಯೆಗೈಯುತ್ತಿರುವ ಸನ್ನಿವೇಶದಲ್ಲಿ ನಾನು ಈ ರೀತಿ ಯೋಚನೆ ಮಾಡಲು ಸಾಧ್ಯ ವಿಲ್ಲ ಎಂದೂ ಅವರು ಹೇಳಿದ್ದಾರೆ. ಬುಧವಾರ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲು ಸಿಧು ನಿರ್ಧರಿಸಿದ್ದಾರೆ.
ಭಾರತ-ಪಾಕ್ ಸಂಬಂಧಕ್ಕೆ ಹೊಸ ಅಧ್ಯಾಯ: ಕರ್ತಾರ್ಪುರ ಕಾರಿಡಾರ್ ನಿರ್ಮಾಣವು ಉಭಯ ದೇಶಗಳ ಸಂಬಂಧ ದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.