Advertisement

ಗ್ರಾಮೀಣ ಬಂಟರ ಸಂಘ ಸಭಾಭವನ ಶಂಕುಸ್ಥಾಪನೆಗೆ ವೇದಿಕೆ ಸಿದ್ಧ

11:42 AM Dec 07, 2017 | |

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘವು 1999ರಲ್ಲಿ  ಸ್ಥಾಪಿತಗೊಂಡು ಹಲವು ವರ್ಷಗಳ ಬಳಿಕ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗಿದೆ. 

Advertisement

 ಸಂಘದ ಪರಿಮಿತಿಯಲ್ಲಿ ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಚಿಟಾ³ಡಿ-ಕುಕ್ಕಿಕಟ್ಟೆ-ಮಂಚಿ, ಉಡುಪಿ- ಬೈಲೂರು, ಕೊರಂಗ್ರಪಾಡಿ- ಮಾರ್ಪಳ್ಳಿ, ಅಲೆವೂರು- ಕೆಮೂ¤ರು, ಕಲ್ಮಂಜೆ- ಕರ್ವಾಲು-ಮರ್ಣೆ, ಮಣಿಪುರ- ದೆಂದೂರು-ಕುಂತಳನಗರ, ಕಟ್ಟಿಂಗೇರಿ- ಪಡುಬೆಳ್ಳೆ, ಎಡೆ¾àರು-ನಿಂಜೂರು-ಪಳ್ಳಿಯ ಪ್ರದೇಶಗಳು ಸುಮಾರು 1000 ಕ್ಕಿಂತಲೂ ಮಿಕ್ಕಿ ಸಕ್ರಿಯ ಸದಸ್ಯರನ್ನು ಒಳಗೊಂಡಿದೆ. ಸಂಘಟನೆ, ಸಹಕಾರ ಮತ್ತು ಸಾಮರಸ್ಯದೊಂದಿಗೆ ಆರೋಗ್ಯ, ಪರಿಸರ, ಯುವಕರ, ರೈತರ, ಮಹಿಳೆಯರ ಸಬಲೀಕರಣ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಬಡ ವಿದ್ಯಾರ್ಥಿಗಳಿಗೆ ನೆರವು, ರಕ್ತದಾನ ಶಿಬಿರ, ವೈದ್ಯಕೀಯ ಚಿಕಿತ್ಸೆಗೆ ನೆರವು, ಮಂಗಳ ಕಾರ್ಯಕ್ಕೆ ನೆರವು, ಬಡವರ ಮನೆ ಕಟ್ಟಲು ನೆರವು 
ಹಾಗೂ ಇನ್ನು ಅನೇಕ ಜನಪರ ಯೋಜನೆಗಳನ್ನು ನಡೆಸುತ್ತಿದೆ. 

ಗ್ರಾಮಾಂತರ ಪ್ರದೇಶ‌ದಲ್ಲಿ ಸಂಘಟನೆ ಯನ್ನು ಇನ್ನು ಬಲಿಷ್ಠವಾಗಿ ಬೆಳೆಸಲು ಒಂದು ಸಭಾಭವನವನ್ನು ನಿರ್ಮಾಣ ಮಾಡಬೇಕೆಂಬ ಹಂಬಲ ಇತ್ತು. ಈ ಕನಸು ನನಸು ಮಾಡಲು ಅಲೆವೂರಿನ ವಿ4 ಡೆವಲಪರ್ನವರು ಮಣಿಪುರ ಗ್ರಾಮದ ಕುಂತಳನಗರದಲ್ಲಿ ಜಾಗವನ್ನು  ದಾನ ಮಾಡಿದ್ದಾರೆ.  ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲು “ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾಭವನ ನಿರ್ಮಾಣ ಮತ್ತು ಅಭಿವೃದ್ಧಿ’ ಸಮಿತಿ ರಚಿಸಿದ್ದು ಕಾರ್ಯೋನ್ಮುಖವಾಗಿದೆ. ಬಂಟರ ಸಂಘದ ಅಧ್ಯಕ್ಷರಾಗಿ ಸಕಾರಾಮ ಶೆಟ್ಟಿ, ಸಭಾಭವನ ನಿರ್ಮಾಣ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಅಶೋಕ ಕುಮಾರ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. 3.5 ಕೋ.ರೂ. ವೆಚ್ಚದ ಯೋಜನೆ ಇದಾಗಿದೆ. 

ಮಣಿಪುರ ಗ್ರಾಮದ ಕುಂತಳ ನಗರದಲ್ಲಿ  ಡಿ.10 ರ ಬೆಳಗ್ಗೆ ಶಂಕು ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ.  ಸಚಿವ  ಪ್ರಮೋದ್‌ ಮಧ್ವರಾಜ್‌, ಕಾಪು ಶಾಸಕ ವಿನಯ ಕುಮಾರ್‌ ಸೊರಕೆ, ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮತ್ತಿತರರು ಭಾಗವಹಿಸುವರು. ಜನಪ್ರತಿನಿಧಿಗಳ ಸಹಕಾರದಿಂದ ಮುಖ್ಯಮಂತ್ರಿಯವರು 1 ಕೋ.ರೂ. ಅನುದಾನ ಕೊಡಲು ಒಪ್ಪಿದ್ದಾರೆ.

ಸಭಾಂಗಣ ನಿರ್ಮಾಣ ಮಾಡುವ ಮುಖ್ಯ ಉದ್ದೇಶ 
ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಪಟ್ಟು ಜಾತಿ-ಮತ ಭೇದ ಇಲ್ಲದೆ ಅತೀ ಬಡವರಿಗೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು.

Advertisement

ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯೋಗ ಆಧಾರಿತ ಶಿಬಿರ ಏರ್ಪಡಿಸುವುದು.

 ಉದ್ಯಮ ಶೀಲತಾ ಪ್ರೇರಣೆ- ತರಬೇತಿ ಶಿಬಿರ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಸ್ವ-ಉದ್ಯೋಗ ಆಧಾರಿತ ಶಿಬಿರಗಳನ್ನು ಉಚಿತವಾಗಿ ಏರ್ಪಡಿಸುವುದು.

 ವೃತ್ತಿ ಅಧಾರಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳು .

ರೈತರ ಶ್ರೇಯೋಭಿವೃದ್ದಿಗೆ ಆಧುನಿಕ ಕೃಷಿ ಪದ್ದತಿಗಳ ಬಳಕೆ ಬಗ್ಗೆ ಮಾಹಿತಿ ಹಾಗೂ ತರಬೇತಿ, ಯಂತ್ರೋಪಕರಣಗಳ ಬಳಕೆಗೆ ಪ್ರೇರಣೆ, ಸಹಾಯ, ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮಗಳು.

Advertisement

Udayavani is now on Telegram. Click here to join our channel and stay updated with the latest news.

Next