Advertisement

ದಟ್ಟಣೆ ತಗ್ಗಿಸಲು ಪರಿಹಾರ ಸೂತ್ರ

11:52 AM Mar 26, 2017 | Team Udayavani |

ಬೆಂಗಳೂರು: ನಗರದಲ್ಲಿ ಪ್ರತಿ ನಿತ್ಯ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಧಿಯುತ್ತಿದ್ದು, ವಾಹನ ದಟ್ಟಣೆ ಉಂಟಾಗಿ ಜನ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಪಾರ್ಕಿಂಗ್‌ ನೀತಿ ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

Advertisement

ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಸುಧಾರಿತ ಹೈ-ಟೆಕ್‌ ಪಾರ್ಕಿಂಗ್‌ ಸೌಲಭ್ಯ, ಖಾಸಗಿಯವರು ಬಹುಮಹಡಿ ಪಾರ್ಕಿಂಕ್‌ ಕಟ್ಟಡ ನಿರ್ಮಿಸಲು ಮುಂದಾದರೆ ವಿಶೇಷ ವಿನಾಯ್ತಿ ನೀಡುವ ಭರವಸೆ ನೀಡಲಾಗಿದೆ. ಹಾಗೆಯೇ ಪಾದಾಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ನಿಷೇಧಿಸುವ ಜತೆಗೆ ಪಾರ್ಕಿಂಧಿಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದೆ. 

ಸುಮಾರು 690 ಕೋಟಿ ರೂ.ವೆಚ್ಚದಲ್ಲಿ 80 ಕಿ.ಮೀ ಉದ್ದದ ಆಯ್ದ 43 ಪ್ರಮುಖ ರಸ್ತೆಗಳನ್ನು ಶ್ರೇಷ್ಠ ದರ್ಜೆ ಮಟ್ಟದಲ್ಲಿ ಅಭಿವೃದ್ಧಿಧಿಪಡಿಸಲಾಗುವುದು ಹಾಗೂ ಪಾದಚಾರಿ ಸೌಲಭ್ಯಗಳನ್ನು ಮೇಲ್ದರ್ಜೆಧಿಗೇರಿಸಧಿಲಾಗುಧಿವುದು. ಬೆಂಗಳೂರಿನ ಕೇಂದ್ರ ವಾಣಿಜ್ಯ ವಲಧಿಯದಲ್ಲಿ 250 ಕೋಟಿ ರೂ.ವೆಚ್ಚದಲ್ಲಿ 3ನೇ ಹಂತದ ಟೆಂಡರ್‌ಶ್ಯೂರ್‌ ಮಾದರಿಯ 25 ಕಿ.ಮೀ.ಉದ್ದದ 25 ಅಂತರ್‌ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿವುದಾಗಿ ಪ್ರಕಟಿಸಲಾಗಿದೆ.  

ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ 12 ಕಾರಿಡಾರ್‌ಗಳನ್ನು ಅಭಿವೃದ್ಧಿಧಿಪಡಿಸಲು ಮತ್ತು ನಿರ್ವಹಣೆ ಮಾಡಲು 150 ಕೋಟಿ ರೂ. ಮೀಸಲಿರಿಸಲಾಗಿದೆ. ಪಾದ­ಚಾರಿಗಳ ಸುರಕ್ಷತೆ ದೃಷ್ಟಿಯಿಂದ 200 ಕಿ.ಮೀ. ಉದ್ದದ ಆಯ್ದ ರಸ್ತೆಗಳ ಪಾದಚಾರಿ ಮಾರ್ಗದ ಅಭಿವೃದ್ಧಿಗೆ 200 ಕೋಟಿ ರೂ. ಕಾಯ್ದಿರಿಧಿಸಲಾಗಿದೆ. ತಡೆರಹಿತ ಸಂಚಾರಕ್ಕಾಗಿ ಆಯ್ದ 9 ಜಂಕ್ಷನ್‌ಗಳಲ್ಲಿ ಗ್ರೇಡ್‌ ಸೆಪರೇಟರ್‌ ನಿರ್ಮಿಧಿಸಲು 421 ಕೋಟಿ ರೂ. ಹಾಗೂ ರೈಲ್ವೆ ಮೇಲ್ಸೇತುವೆ/ ಕೆಳ ಸೇತುವೆ ನಿರ್ಮಾಣಕ್ಕಾಗಿ 150 ಕೋಟಿ ಒದಗಿಸಿದೆ. 

ರಸ್ತೆ ಉಬ್ಬುಗಳು, ಲೇನ್‌ ಮಾರ್ಕಿಂಗ್‌, ಮಾರ್ಗಸೂಚಿ ಫ‌ಲಕ, ಜಂಕ್ಷನ್‌ ಅಭಿವೃದ್ಧಿ ಸೇರಿದಂತೆ ಸಂಚಾರ ಎಂಜಿನಿಯರಿಂಗ್‌ ಘಟಕದಡಿ ಕೈಗೊಳ್ಳುವ ಕಾಮಗಾರಿಗಳಿಗೆ 200 ಕೋಟಿ ರೂ. ಅನುದಾನ ಕಾಯ್ದಿರಿಸುವ ಜತೆಗೆ ಪಾದಚಾರಿಗಳ ಸುಗಮ ಓಡಾಟಕ್ಕಾಗಿ ವಿವಿಧೆಡೆ ಸ್ಕೈವಾಕ್‌ ನಿರ್ಮಿಸುವುದಾಗಿ ಆಯಧಿವ್ಯಯದಲ್ಲಿ ಪ್ರಕಟಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next