Advertisement

ಸಾಕು ಪ್ರಾಣಿ ಮಾರಾಟ ಅಂಗಡಿಗೆ ಅರಣ್ಯ ಇಲಾಖೆ ದಾಳಿ

12:46 PM Jan 13, 2022 | Team Udayavani |

ಕಲಬುರಗಿ: ಸಾಕು ಪ್ರಾಣಿಗಳ ಮಾರಾಟ ಅಂಗಡಿಯಲ್ಲಿ ವನ್ಯ ಜೀವಿಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಹಲವು ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ.

Advertisement

ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಅಂಗಡಿ ಮೇಲೆ ದಾಳಿ ನಡೆಸಿ, ಇಲ್ಲಿನ ಹಾಗರಗಾ ರಸ್ತೆಯ ಇತಿಯಾತ್‌ ಕಾಲೋನಿಯ ನಿವಾಸಿ ಹಾಜಿಖಾನ್‌ ಎಂಬಾತನನ್ನು ಬಂಧಿಸಿದ್ದಾರೆ.

ಅರಣ್ಯ ಇಲಾಖೆ ಅನುಮತಿ ಇಲ್ಲದೇ ಅಕ್ರಮವಾಗಿ ಎರಡು ನಕ್ಷತ್ರ ಆಮೆಗಳು ನಾಲ್ಕು ಆಮೆಗಳು ಮತ್ತು ವಿವಿಧ ಪ್ರಬೇಧ ಗಿಳಿಗಳು ಮತ್ತು ಕೌಜುಗ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಹುಣಚಿರಾಯ (ಕೇಶವ) ಮೊಟಗಿ ನೀಡಿದ ದೂರಿನ ಮೇಲೆ ಈ ದಾಳಿ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next