Advertisement

ಮಕ್ಕಳ ಮೇಲೆ ಜೇನ್ನೊಣಗಳ ಹಿಂಡು ದಾಳಿ

12:25 PM Dec 10, 2017 | Team Udayavani |

ಉಡುಪಿ: ಶಿರ್ವದಲ್ಲಿ ಶನಿವಾರ ಮಧ್ಯಾಹ್ನ ಶಾಲಾ ಮಕ್ಕಳ ಮೇಲೆ ಜೇನ್ನೊಣಗಳ ಹಿಂಡು ದಾಳಿ ನಡೆಸಿದ ಘಟನೆ ಸಂಭವಿಸಿದೆ. ಜೇನ್ನೊಣಗಳ ದಾಳಿಯಿಂದ ಕಾಪು ಸಮೀಪದ ಚಂದ್ರನಗರದ ಕ್ರೆಸೆಂಟ್‌ ಇಂಟರ್‌ನ್ಯಾಶನಲ್‌ ಶಾಲೆಯ ಐವರು ವಿದ್ಯಾರ್ಥಿಗಳ ಸಹಿತ ಪೋಷಕರೊಬ್ಬರು ಗಾಯಗೊಂಡು ಅಸ್ವಸ್ಥರಾಗಿದ್ದಾರೆ.

Advertisement

ವಿದ್ಯಾರ್ಥಿಗಳಾದ ನದೀಮ್‌, ಅಮೀನಾ, ಅಜೀಂ ಮತ್ತು ಆದಿಲ್‌, ವಿದ್ಯಾರ್ಥಿನಿ ಜುಲ್ಫಾ, ಪೋಷಕಿ ಸಾಯಿರಾ ಅವರಿಗೆ ಉಡುಪಿಯ ಆದರ್ಶ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕರೆದೊಯ್ಯಲಾಗಿದೆ. ಚಂದ್ರನಗರದ ಅಬ್ದುಲ್‌ ರೆಹಮಾನ್‌ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸಹಕರಿಸಿದ್ದರು. 

ಘಟನೆ ಹಿನ್ನೆಲೆ: ಕ್ರೆಸೆಂಟ್‌ ಶಾಲೆಯ ವಿದ್ಯಾರ್ಥಿಗಳನ್ನು ಅವರವರ ಮನೆಗೆ ಬಿಟ್ಟು ಬರಲು ಶನಿವಾರ ಮಧ್ಯಾಹ್ನ ಶಾಲೆಯ ಬಸ್ಸಿನಲ್ಲಿ ಕರೆದೊಯ್ಯಲಾಗಿತ್ತು. ಶಿರ್ವದ ನಝರತ್‌ ನಗರದಲ್ಲಿ ಮಕ್ಕಳ ಬರುವಿಕೆಗೆ ಪೋಷಕರು ಕಾಯುತ್ತಿದ್ದರು. ಮಕ್ಕಳಿದ್ದ ಬಸ್‌ ನಝರತ್‌ನಗರಕ್ಕೆ ತಲುಪಿದ್ದು, ಈ ವೇಳೆ ಮಕ್ಕಳು ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಜೇನ್ನೊಣಗಳ ಹಿಂಡುದಾಳಿ ನಡೆಸಿದೆ. ಅಪಾಯವನ್ನರಿತ ಬಸ್ಸಿನ ಚಾಲಕ ಮಕ್ಕಳನ್ನು ಇಳಿಸಿದ ಕೂಡಲೇ ಬಸ್ಸನ್ನು ಚಲಾಯಿಸಿದ್ದಾರೆ. ಅವರಿಗೆ ಹಾಗೂ ಬಸ್ಸಿನಲ್ಲಿದ್ದ ಇನ್ನೂ ಹಲವು ಮಕ್ಕಳಿಗೂ ಜೇನ್ನೊಣ ಕಚ್ಚಿದೆ ಎಂದು ತಿಳಿದುಬಂದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅವಘಡ ತಪ್ಪಿದೆ. ಬಸ್ಸಿನಲ್ಲಿ ಸುಮಾರು 25-30 ಮಕ್ಕಳಿದ್ದರು ಎಂದು ಅಲ್ಲಿದ್ದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next