ಬಸ್ರೂರು: ಬಳ್ಕೂರು ಹಾಲು ಉತ್ಪಾದಕರ ಸ. ಸಂಘದ ಉದ್ಘಾಟನೆ ಗುರುವಾರ ಜರಗಿತು. ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿ.,ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಅವರು ಉದ್ಘಾಟಿಸಿ ಮಾತನಾಡಿ, ಸುಮಾರು 350 ಲೀ. ಹಾಲು ಈಗಾಗಲೇ ಈ ಸಂಘದಲ್ಲಿ ಸಂಗ್ರಹವಾಗುತ್ತಿದೆ. ಈಗಾಗಲೇ ಹಾಲು ಉತ್ಪಾದಕರಿಗೆ ಉತ್ತಮ ಬೆಲೆಯನ್ನು ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ಮತ್ತು ಪೂರೈಕೆಯಿಂದ ಸಂಘ ಅಭಿವೃದ್ಧಿಯಾಗುವುದರೊಂದಿಗೆ ಗ್ರಾಮೀಣ ಪ್ರದೇಶದ ಹೈನುಗಾರರು ಆರ್ಥಿಕ ಸ್ವಾವಲಂಬಿಗಳಾಗುತ್ತಾರೆ. ಬಳ್ಕೂರಿನ ಹೈನುಗಾರರು ಉತ್ತಮ ಸಾಂಘಿಕ ಯತ್ನದಿಂದ ಸ್ಥಾಪಿಸಿದ ಈ ಹಾಲು ಉತ್ಪಾದಕರ ಸಹಕಾರಿ ಸಂಘ ಮುಂದಿನ ದಿನಗಳಲ್ಲಿ ಲಾಭದಾಯಕವಾಗಿ ಬೆಳೆದು ಈ ಪರಿಸರದ ಹೈನುಗಾರರ ಬದುಕು ಸಂತೃಪ್ತಿಯಿಂದ ಕೂಡಿರಲಿ ಎಂದರು.
ಬಳ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಎಸ್. ಬಳ್ಕೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಉತ್ಪಾದಕರ ಈ ಸಂಘವನ್ನು ಲಾಭದಾಯಕವಾಗಿ ನಡೆಸಲು ಉತ್ತಮ ಗುಣಮಟ್ಟದ ಹಾಲಿನ ಅಗತ್ಯವಿದ್ದು ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಬಸ್ರೂರು ತಾ.ಪಂ. ಸದಸ್ಯ ರಾಮ್‌ಕಿಶನ್ ಹೆಗ್ಡೆ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ಅಶೋಕ್‌ಕುಮಾರ್ ಶೆಟ್ಟಿ, ಟಿ.ಸೂರ್ಯ ಶೆಟ್ಟಿ, ಬಸ್ರೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ್ ಶೆಟ್ಟಿಗಾರ್, ಕಂದಾವರ ಹಾಲು ಉತ್ಪಾದಕರ ಸ. ಸಂಘದ ಅಧ್ಯಕ್ಷ ರತ್ನಾಕರ, ಕಾವ್ರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ ಅಮ್ಮನಬೆಟ್ಟು, ಸೌಕೂರು ಮಹಿಳಾ ಹಾಲು ಉತ್ಪಾದಕರ ಸ. ಸಂಘದ ಅಧ್ಯಕ್ಷೆ ಸುಮಾವತಿ ಶೆಡ್ತಿ, ಬಸ್ರೂರು ವ್ಯ.ಸೇ. ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ಬಳ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ರತ್ನಾಕರ ಗಾಣಿಗ, ಉಪ ವ್ಯವಸ್ಥಾಪಕ ಮನೋಹರ ಕೆ., ಸಹಾಯಕ ವ್ಯವಸ್ಥಾಪಕ ಶಿವಪ್ಪ, ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ನಾಗೇಶ್ ಎಸ್. ಸ್ವಾಗತಿಸಿ, ದ.ಕ. ಹಾಲು ಒಕ್ಕೂಟದ ಮಂಗಳೂರಿನ ವಿಸ್ತರಣಾಧಿಕಾರಿ ರಾಜಾರಾಮ್ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಯೋಗೀಶ್ ಗಾಣಿಗ ವಂದಿಸಿದರು.