Advertisement

ಮಧ್ಯರಾತ್ರಿವರೆಗೂ ಹಾರಾಡಿದ ರಾಷ್ಟ್ರಧ್ವಜ

04:13 PM Jan 28, 2021 | Team Udayavani |

ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಎದುರು ಜ. 26ರಂದು ಬೆಳಗ್ಗೆ ಅವರೋಹಣ ಮಾಡಿದ್ದ ರಾಷ್ಟ್ರಧ್ವಜವನ್ನು ಅಂದೇ ಮಧ್ಯರಾತ್ರಿ 11 ಗಂಟೆ ಸುಮಾರಿಗೆ ಗ್ರಾಮದ ಯುವಕರೇ ಇಳಿಸಿ, ಧ್ವಜವನ್ನು ಶಾಖಾ ವ್ಯವಸ್ಥಾಪಕರ ಮನೆಗೆ ತಲುಪಿಸಿದ ಘಟನೆ ನಡೆದಿದ್ದು ಧ್ವಜಸಂಹಿತೆ ಪಾಲಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಶಾಖಾ ವ್ಯವಸ್ಥಾಪಕ ಮಧುಸೂಧನ್‌ ರೆಡ್ಡಿ ವಿರುದ್ಧ ಕ್ರಮಕ್ಕೆ ಗ್ರಾಮದ ಆರೆಸ್ಸೆಸ್‌, ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Advertisement

ಬೆಳಗ್ಗೆ ಮಧುಸೂಧನ್‌ ಅವರೇ ಧ್ವಜಾರೋಹಣ ನೆರವೇರಿಸಿದ್ದರು. ಸಂಜೆ ಸೂರ್ಯ ಮುಳುಗುವುದರೊಳಗೆ ಧ್ವಜವನ್ನು ಅವರೋಹಣ ಮಾಡಬೇ ಕಿತ್ತು. ಆದರೆ ಮಧುಸೂಧನ್‌ ಸೇರಿ ಯಾವೊಬ್ಬ ಬ್ಯಾಂಕ್‌ ಸಿಬ್ಬಂದಿಯೂ ಧ್ವಜ ಅವರೋಹಣ ಮಾಡಿರಲಿಲ್ಲ. ಹೀಗಾಗಿ ರಾತ್ರಿಯಾದರೂ ಕತ್ತಲಲ್ಲೇ ರಾಷ್ಟ್ರಧ್ವಜ ಧ್ವಜಕಂಬದಲ್ಲೇ ಹಾರಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮದ ಕೆಲ ಯುವಕರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಶಾಖಾ ವ್ಯವಸ್ಥಾಪಕ ಜವಾಬಾœರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಡಿಯೋ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಗ್ರಾಮದ ದೇಶಭಕ್ತ ಯುವಕರು ಧ್ವಜಸ್ತಂಭದ ಬಳಿ ಬಂದು ಮಧ್ಯರಾತ್ರಿ 11 ಗಂಟೆ ಆಗಿದ್ದರೂ ಧ್ವಜವನ್ನು ಗೌರವಯುತವಾಗಿ ಇಳಿಸಿ, ಅದನ್ನು ಬ್ಯಾಂಕ್‌ ಎದುರಿಗೇ ಇರುವ ಶಾಖಾ ವ್ಯವಸ್ಥಾಪಕರ ಮನೆಗೆ ತಲುಪಿಸಿದ್ದರು.

ಬುಧವಾರ ಬೆಳಗ್ಗೆ ಇದು ಎಲ್ಲ ಕಡೆ ಹಬ್ಬಿ ವೈರಲ್‌ ಆಗಿ ಜಿಲ್ಲಾ  ಧಿಕಾರಿವರೆಗೂ ದೂರು ಹೋಗಿತ್ತು. ಈ ವಿಷಯ ಕುರಿತು ಗ್ರಾಮದ ಬಿಜೆಪಿ ಧುರೀಣರೊಬ್ಬರು ಬ್ಯಾಂಕ್‌ನ ವಿಜಯಪುರ ರಿಜನಲ್‌ ಮ್ಯಾನೇಜರ್‌ ಹೋಳ್ಕರ್‌ ಅವರ ಗಮನಕ್ಕೆ ತಂದಾಗ ಈ ವಿಷಯ ದೊಡ್ಡದು ಮಾಡಬೇಡಿ. ಧ್ವಜ ಇಳಿಸದಿರುವುದೇನೂ ದೊಡ್ಡ ಅಪರಾಧವಲ್ಲ. ಪಾರ್ಲಿಮೆಂಟ್‌ ನಲ್ಲಿ ದಿನದ 24 ಗಂಟೆಯೂ ರಾಷ್ಟ್ರಧ್ವಜ ಹಾರುತ್ತದಲ್ಲ ಎಂದು ವಿತಂಡವಾದ ಮಂಡಿಸಿದ್ದರು. ಇದರಿಂದ ಕೆರಳಿದ ಬಿಜೆಪಿ, ಆರೆಸ್ಸೆಸ್‌ ಮುಖಂಡರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು.

ಶಾಖಾ ವ್ಯವಸ್ಥಾಪಕ ಮಧುಸೂಧನ್‌ ಅವರು ಗ್ರಾಹಕರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ. ತಾನು ಕಾನೂನು ಪ್ರಕಾರ ನಡೆದುಕೊಳ್ಳುತ್ತೇನೆ ಎನ್ನುವ ವರು ರಾಷ್ಟ್ರಧ್ವಜದ ವಿಷಯದಲ್ಲೇಕೆ ಕಾನೂನು ಪ್ರಕಾರ ನಡೆದುಕೊಳ್ಳಲಿಲ್ಲ. ಅವರೊಬ್ಬ ಬೇಜವಾಬ್ದಾರಿ ಅಧಿಕಾರಿಯಾಗಿದ್ದು ಅವರನ್ನು ಅಮಾನತು ಮಾಡಬೇಕು ಇಲ್ಲವೇ ಬೇರೆ ಕಡೆ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಘಟನೆ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಖಾ ವ್ಯವಸ್ಥಾಪಕ ಮಧುಸೂಧನ್‌, ನನಗೆ ಆರೋಗ್ಯ ಸರಿ ಇರಲಿಲ್ಲ. ಮಾತ್ರೆ ಸೇವಿಸಿ ಮಲಗಿದ್ದೆ. ಬೇರೊಬ್ಬರಿಗೆ ಧ್ವಜ ಇಳಿಸಲು ಹೇಳಿದ್ದೆ.

Advertisement

ಅವರು ಮರೆತಿದ್ದಾರೆ. ಹೀಗಾಗಿ ಗೊಂದಲ ಆಗಿದೆ. ಇನ್ನೊಮ್ಮೆ ಇಂಥ ತಪ್ಪು ಜರುಗದಂತೆ ನೋಡಿಕೊಳ್ಳುತ್ತೇನೆ ಎಂದರು. ರಿಜನಲ್‌ ಮ್ಯಾನೇಜರ್‌ ಹೋಳ್ಕರ್‌ ಅವರು ಪ್ರತಿಕ್ರಿಯಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಪ್ರತಿಕ್ರಿಯಿಸಿ ಘಟನೆ ಕುರಿತು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗೆ ಸೂಚಿಸಿ ವಿವರ ನೀಡಲು ತಿಳಿಸಲಾಗಿದೆ. ತಪ್ಪು ನಡೆದಿದ್ದರೆ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನನಗೆ ಆರೋಗ್ಯ ಸರಿ ಇರಲಿಲ್ಲ. ಮಾತ್ರೆ ಸೇವಿಸಿ ಮಲಗಿದ್ದೆ. ಬೇರೊಬ್ಬರಿಗೆ ಧ್ವಜ ಇಳಿಸಲು ಹೇಳಿದ್ದೆ. ಅವರು ಮರೆತಿದ್ದಾರೆ. ಹೀಗಾಗಿ ಗೊಂದಲ ಆಗಿದೆ. ಇನ್ನೊಮ್ಮೆ ಇಂಥ ತಪ್ಪು ಜರುಗದಂತೆ ನೋಡಿಕೊಳ್ಳುತ್ತೇನೆ

*ಮಧುಸೂಧನ್‌ ಕೆವಿಜಿಬಿ ಶಾಖಾ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next