Advertisement

ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿ ಸಿಮಿ ಮರಿಯಂ ಜಾರ್ಜ್‌

01:41 PM Aug 04, 2020 | Suhan S |

ಕಲಬುರಗಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ನೂತನ ಎಸ್‌ಪಿ ಆಗಿ ಸಿಮಿ ಮರಿಯಂ ಜಾರ್ಜ್‌ ಅವರು ನೇಮಕಗೊಂಡಿದ್ದಾರೆ. ಈ ಮೂಲಕ ಜಿಲ್ಲೆಗೆ ಮೊದಲ ಮಹಿಳಾ ಎಸ್‌ಪಿ ನೇಮಕಗೊಂಡಂತೆ ಆಗಿದೆ.

Advertisement

ಸಿಮಿ ಮರಿಯಂ ಜಾರ್ಜ್‌ ಅವರು ಸದ್ಯ ಬೆಂಗಳೂರಿನ ಕ್ರೈಂ ವಿಭಾಗದ ಎಐಜಿ ಆಗಿದ್ದರು. 2009ರಲ್ಲಿ ಡಿ.ರೂಪಾ ಪ್ರೊಬೇಷನರಿ ಎಸ್‌ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಪೂರ್ಣ ಪ್ರಮಾಣದ ಎಸ್‌ಪಿಯಾಗಿ ಸಿಮಿ ಮರಿಯಂ ಜಾರ್ಜ್‌ ನೇಮಕಗೊಂಡಿದ್ದಾರೆ. ಯಡಾ ಮಾರ್ಟಿನ್‌ ಅವರನ್ನು ಉಡುಪಿ ಜಿಲ್ಲೆಯ ಕಾರ್ಕಳ ನಕ್ಸಲ್‌ ನಿಗ್ರಹ ಪಡೆಯ ಎಸ್‌ಪಿ ಆಗಿ ನೇಮಿಸಲಾಗಿದೆ. ಇವರು 2019ರ ಫೆ.24ರಂದು ಎಸ್‌ಪಿ ಆಗಿ ನೇಮಕಗೊಂಡಿದ್ದರು. ನಂತರ 6 ತಿಂಗಳೊಳಗೆ ಅಂದರೆ ಆ.19ರಂದು ಸ್ಥಳ ತೋರಿಸದೇ ವರ್ಗಾವಣೆಗೊಳಿಸಲಾಗಿತ್ತು. ಇವರ ಜಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿನಾಯಕ ಪಾಟೀಲ್‌ ಅವರನ್ನು ಎಸ್ಪಿಯಾಗಿ ನಿಯೋಜಿಸಿ ವರ್ಗಾವಣೆಗೊಳಿಸಿತ್ತು. ಆದರೆ, ಸರ್ಕಾರದ ಆದೇಶವನ್ನು ಯಡಾ ಮಾರ್ಟಿನ್‌ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು. ಇವರ ದೂರನ್ನು ಆಲಿಸಿದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಕಲಬುರಗಿ ಎಸ್‌ಪಿ ಆಗಿ ಮುಂದುವರೆಯುವಂತೆ ಆ.30ರಂದು ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next