Advertisement
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೋಟಿ ರೂ. ವೆಚ್ಚದಲ್ಲಿ ಅರಿಶಿನ ಸಂಸ್ಕರಣ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
Related Articles
Advertisement
ರೈತರಿಗೆ ಅನುಕೂಲ: ಕಳೆದ ಸಾಲಿನಲ್ಲಿ ಎಪಿಎಂಸಿ ಯಲ್ಲಿ 72 ಸಾವಿರ ಕ್ವಿಂಟಾಲ್‌ಅರಿಶಿನ ವಹಿವಾಟು ಆಗಿತ್ತು. ಇತ್ತೀಚಿನ ದಿನಗಳಲ್ಲಿ ಶುದ್ಧಿ ಛೀಕರಿಸಿದ ಅರಿಶಿನ ದೊರೆಯದ ಕಾರಣ ವರ್ತಕರು ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರಲಿಲ್ಲ. ಅಲ್ಲದೇ ರೈತರಿಗೂ ಸ್ಪರ್ಧಾತ್ಮಕ ಬೆಲೆ ದೊರೆಯದೇ ಸಂಕಷ್ಟದಲ್ಲಿದ್ದರು. ಈ ಸಂಸ್ಕರಣ ಘಟಕ ಸ್ಥಾಪನೆಯಿಂದ ರೈತರು ಹಾಗೂ ವರ್ತಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದೊಂದು ಹೈಟೆಕ್ ಅರಿಶಿನ ಸಂಸ್ಕರಣಘಟಕವಾಗಿದ್ದು, ಒಂದೇ ಹಂತದಲ್ಲಿ ಅರಿಶಿನವನ್ನು ಕ್ಲೀನಿಂಗ್ ಹಾಗೂ ಗೆùಂಡಿಂಗ್‌ಮಾಡಿ ಪ್ಯಾಕಿಂಗ್ ಮಾಡಲಾಗುತ್ತದೆ.ಇದರಿಂದ ಅರಿಶಿನ ಹೆಚ್ಚು ಬೆಲೆಗೆ ಮಾರಾಟವಾಗಲಿದೆ. ಜತೆಗೆ ವರ್ತಕರು ಹಾಗೂ ಕಂಪನಿಗಳಿಗೂ ಗುಣಮಟ್ಟದ ಉತ್ಕೃಷ್ಟವಾದ ಅರಿಶಿನ ದೊರೆಯಲಿದೆ.
ಸಾಂಗ್ಲಿ, ಈರೋಡ್‌ನಲ್ಲಿ ಖಾಸಗಿ ಘಟಕ:ಈಗಾಗಲೇ ಇಂಥ ಘಟಕ ಮಹಾರಾಷ್ಟ್ರದ ಸಾಂಗ್ಲಿ, ತಮಿಳುನಾಡಿನ ಈರೋಡ್‌ನಲ್ಲಿ ಖಾಸಗಿ ಒಡೆತನದಲ್ಲಿ ನಡೆಯುತ್ತಿದೆ. ಈಗ ಚಾ.ನಗರ ಎಪಿಎಂಸಿಯಲ್ಲಿ ಸರ್ಕಾರದ ಒಡೆತನದಲ್ಲಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ರೈತರಿಗೆ ಅತಿ ಕಡಿಮೆ ದರದಲ್ಲಿ ಅರಿಶಿನ ಸಂಸ್ಕರಣೆ ಮಾಡಿಕೊಡಲಾಗುತ್ತದೆ.
21ಕ್ಕೆ ಘಟಕದ ಬಗ್ಗೆ ರೈತರಿಗೆ ಕಾರ್ಯಾಗಾರ: ಎಪಿಎಂಸಿ ಮತ್ತು ಚಾ.ನಗರ ತಾಲೂಕುಸೌಹಾರ್ದ ಅರಿಶಿನ ಬೆಳೆಗಾರರ ರೈತ ಉತ್ಪಾದಕರ ಸಂಘದ ಸಹಯೋಗದಲ್ಲಿ ಸೆ.21ರಂದು ಅರಿಶಿನ ಬೆಳೆಗಾರರ ಕಾರ್ಯಾಗಾರ ಆಯೋಜಿಸಲಾಗಿದ್ದು, ರೈತರಿಗೆ ಬೆಳೆ ವಿಧಾನ, ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣ ಘಟಕದ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಅರಿಶಿನ ಸಂಸ್ಕರಣ ಘಟಕ ನಿರ್ಮಾಣ ನನ್ನ ಬಹುದಿನಗಳ ಕನಸಾಗಿತ್ತು. ಸರ್ಕಾರಿ ಒಡೆತನದ ಸಂಸ್ಕರಣ ಘಟಕ ದಕ್ಷಿಣ ಭಾರತದಲ್ಲೇ ಇರಲಿಲ್ಲ. ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಘಟಕ ಸ್ಥಾಪಿಸಲು ಶ್ರಮಿಸಿದ್ದೇನೆ. ಸಂಸದ ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಇದಕ್ಕೆ ಸಹಕಾರ ನೀಡಿದ್ದಾರೆ.– ಬಿ.ಕೆ.ರವಿಕುಮಾರ್,
ಎಪಿಎಂಸಿ ಅಧ್ಯಕ್ಷ – ಬನಶಂಕರ ಆರಾಧ್ಯ