Advertisement

“ಗೋರಿ’ಯಲ್ಲಿ ಕೇಳಿಬಂತು ಮೊದಲ ಹಾಡು!

10:24 AM Feb 24, 2020 | Lakshmi GovindaRaj |

ಇತ್ತೀಚೆಗಷ್ಟೇ “ರ್‍ಯಾಂಬೋ-2′ ಚಿತ್ರದ “ಚುಟು ಚುಟು ಅಂತೈತಿ…’ ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು ದಾಖಲೆ ಬರೆದು ಸುದ್ದಿಯಾಗಿತ್ತು. ಈಗ ಇಂಥದ್ದೇ ಮತ್ತೊಂದು ಹಾಡು ಬಿಡುಗಡೆಯಾಗಿದೆ. “ಚುಟು ಚುಟು ಅಂತೈತಿ…’ ಹಾಡಿಗೆ ಧ್ವನಿಯಾದ ಗಾಯಕ ರವೀಂದ್ರ ಸೊರಗಾವಿ ಹಾಗೂ ಗೀತ ರಚನೆಕಾರ ಶಿವು ಬೇರ್ಗಿ ಈಗ “ಗೋರಿ’ ಚಿತ್ರದ “ಇದು ಬ್ಯಾರೆನೆ ಐತಿ…’ ಅನ್ನೋ ಹಾಡಿಗೆ ಮತ್ತೆ ಒಂದಾಗಿದ್ದಾರೆ.

Advertisement

ಇತ್ತೀಚೆಗೆ “ಗೋರಿ’ ಚಿತ್ರದ “ಇದು ಬ್ಯಾರೆನೆ ಐತಿ…’ ಅನ್ನೋ ವಿಡಿಯೋ ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿನು ಮನಸು ಸಂಗೀತ ಸಂಯೋಜಿಸಿರುವ ಈ ಹಾಡಿಗೆ ನಾಯಕ ನಟ ಕಿರಣ್‌, ನಟಿ ಶ್ರೇಯಾ ಅಂಜಶ್ರೀ ಮಸ್ತ್ ಸ್ಟೆಪ್ಸ್‌ ಹಾಕಿದ್ದಾರೆ. ಜಾತಿ ಧರ್ಮಕ್ಕಿಂತ ಸ್ನೇಹ, ಪ್ರೀತಿ ದೊಡ್ಡದು. ಸ್ನೇಹ-ಪ್ರೀತಿಗಿಂತ ಮಾನವೀಯತೆ ದೊಡ್ಡದು ಎಂಬ ಕಥೆ ಮತ್ತು ಸಂದೇಶವನ್ನು ಹೇಳಲಾಗುತ್ತಿರುವ “ಗೋರಿ’ ಚಿತ್ರಕ್ಕೆ ನವ ನಿರ್ದೇಶಕ ಗೋಪಾಲ ಕೃಷ್ಣ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಕನ್ನಡದ ಸುದ್ದಿ ವಾಹಿನಿಯಲ್ಲಿ ರಿಪೋರ್ಟ ಆಗಿ ಕೆಲಸ ಮಾಡುತ್ತಿದ್ದ ಕಿರಣ್‌ “ಗೋರಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಾಯಕಿಯಾಗಿ ಸ್ಮಿತಾ ಜೋಡಿಯಾಗಿದ್ದು, ಉಳಿದಂತೆ ಸಂಸ್ಕೃತಿ ಚಂದ್ರು, ಹೂಗಾರ್‌ ದಾಸ್‌, ಅಮಿತ್‌, ಶ್ರೇಯಾ ಅಂಜಶ್ರೀ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ತನ್ನ ಹಾಡುಗಳ ಮೂಲಕ ಒಂದಷ್ಟು ಸುದ್ದಿಯಾಗುತ್ತಿರುವ “ಗೋರಿ’ ಚಿತ್ರ ಸದ್ಯ ಸೆನ್ಸಾರ್‌ ಅಂಗಳದಲ್ಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಚಿತ್ರ ಇದೇ ಮಾರ್ಚ್‌ ಕೊನೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next