Advertisement

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ ಮೊದಲ ಕಂತು 2,000 ರೂ. ಪಾವತಿ

11:56 AM Apr 09, 2020 | Sriram |

ಉದಯವಾಣಿ ವಿಶೇಷ-ಉಡುಪಿ: ಕೋವಿಡ್ 19 ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ದೇಶದ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರವು ಕಿಸಾನ್‌ ಸಮ್ಮಾನ್‌ ಯೋಜನೆಯ ಎಪ್ರಿಲ್‌-ಜುಲೈ ತಿಂಗಳ ಮೊದಲ ಕಂತಿನ 2,000 ರೂ.ಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಿದೆ. ರಾಜ್ಯದ 48.11 ಲಕ್ಷ ರೈತರ ಖಾತೆಗಳಿಗೆ ಒಟ್ಟ 962.29ಕೋ.ರೂ. ಪಾವತಿಯಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 5,06,181 ರೈತರನ್ನು ನೊಂದಾಯಿಸಿಕೊಳ್ಳುವ ಮೂಲಕ ಬೆಳಗಾವಿ ಜಿಲ್ಲೆ (101.23 ಕೋ.ರೂ. ಪಾವತಿ) ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಉಡುಪಿ (1,34,244 ರೈತರು – 26.84 ಕೋ.ರೂ), ದಕ್ಷಿಣ ಕನ್ನಡ (1,34,143 ರೈತರು – 26.82 ಕೋ.ರೂ), ಮತ್ತು ಕೊಡಗು (43,575 ರೈತರು – 8.71 ಕೋ.ರೂ.) ಜಿಲ್ಲೆಗಳು ಕ್ರಮವಾಗಿ 17, 18 ಹಾಗೂ 28ನೇ ಸ್ಥಾನದಲ್ಲಿವೆ.

ಸ್ಥಿತಿಗತಿ ಸ್ವಯಂ ಪರಿಶೀಲನೆ
ಪಿಎಂ ಕಿಸಾನ್‌ ಯೋಜನೆಯಲ್ಲಿ ನೋಂದಾಯಿತ ರೈತರು ಅರ್ಜಿಯ ಸ್ಥಿತಿ ಗತಿಯನ್ನು fruಜಿಠಿsಟಞk.kಚrnಚಠಿಚkಚ.ಜಟv.ಜಿn ಅಂತರ್ಜಾಲ ತಾಣದಲ್ಲಿ ತಮ್ಮ ಅಧಾರ್‌ ಸಂಖ್ಯೆ ಆಥವಾ ಪಿಎಂಕೆಐಡಿ ನಮೂದಿಸಿ ಸ್ವಯಂ ಪರಿಶೀಲಿಸಿಕೊಳ್ಳ ಬಹುದು. ಅರ್ಜಿ ಸ್ವೀಕೃತವಾಗಿದ್ದರೆ ಅಧಾರ್‌ ಸಂಖ್ಯೆ ಜೋಡಣೆಯಾಗಿ
ರುವ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next