Advertisement
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕಾಕರಣ ಪ್ರಮುಖ ಅಸ್ತ್ರವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಲಸಿಕೆ ಪೂರಕವಾಗಿದೆ. ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ, ಕಲಘಟಗಿ ತಾಲೂಕು ಮುಕ್ಕಲ್, ಅಣ್ಣಿಗೇರಿ ತಾಲೂಕು ಶಲವಡಿ ಹಾಗೂ ಧಾರವಾಡ ತಾಲೂಕಿನ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯಲ್ಲಿ ಶೇ.100 ಮೊದಲ ಡೋಸ್ ಲಸಿಕೆ ನೀಡಿವೆ. ಜಿಲ್ಲೆಯಾದ್ಯಂತ ಒಟ್ಟು 14,44,000 ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
Related Articles
Advertisement
ಲಸಿಕಾಕರಣದ ಯುವ ಉತ್ಸಾಹಿ ತಂಡವು ಲಸಿಕೆಯ ಮಾಹಿತಿ ನೀಡಿ, ಕೆಲವರಲ್ಲಿದ್ದ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ಹೆಚ್ಚು ಒತ್ತು ನೀಡಲಾಯಿತು. ಸ್ಥಳೀಯ ಗ್ರಾಪಂ ಮತ್ತು ಆರೋಗ್ಯ ಇಲಾಖೆ ಧ್ವನಿ ಸಂದೇಶಗಳನ್ನು ಮುದ್ರಿಸಿ ಪ್ರಚಾರ ಕೈಗೊಂಡ ಪರಿಣಾಮ ಈ ಕಾರ್ಯ ಸಾಧ್ಯವಾಗಿದೆ. ಬಹುತೇಕ ಹಳ್ಳಿಗಳಲ್ಲಿ ದುಡಿಯುವ ವರ್ಗ ಸಂಜೆ ಸಿಗುತ್ತಿದ್ದರಿಂದ ರಾತ್ರಿ 8:00-9:00 ಗಂಟೆವರೆಗೆ ಲಸಿಕೆ ನೀಡಲಾಗಿದೆ ಎಂದು ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ರವಿ ಸೋಮಣ್ಣವರ ಹೇಳಿದ್ದಾರೆ.
ಧಾರವಾಡ ತಾಲೂಕು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 27,672 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 27,691 ಜನರಿಗೆ ಮೊದಲ ಡೋಸ್ ಲಸಿಕೆ ನೀಡಿ ಶೇ. 100ಕ್ಕಿಂತ ಅಧಿಕ ಸಾಧನೆ ಮಾಡಲಾಗಿದೆ. ಈಗಾಗಲೇ 17120 ಜನರಿಗೆ ಎರಡನೇ ಡೋಸ್ ಲಸಿಕೆ ಕೂಡ ನೀಡಲಾಗಿದೆ ಎಂದು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ರಾಜಶೇಖರ ಪತ್ತಾರ ಹೇಳಿದ್ದಾರೆ.
ಅಣ್ಣಿಗೇರಿ ತಾಲೂಕು ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 14 ಹಳ್ಳಿಗಳಿವೆ. 21,854 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದೆ. ಡಿ.7ರವರೆಗೆ 21,907 ಮೊದಲ ಡೋಸ್ ಲಸಿಕೆಗಳನ್ನು ನೀಡಿ ಶೇ.100ಕ್ಕೂ ಅಧಿಕ ಗುರಿ ಸಾಧಿಸಲಾಗಿದೆ. 11,213 ಜನರಿಗೆ ಎರಡನೇ ಡೋಸ್ ಲಸಿಕೆಗಳನ್ನು ನೀಡಿ ಶೇ.52 ಸಾಧನೆ ಮಾಡಲಾಗಿದೆ. 30 ಲಸಿಕಾ ತಂಡಗಳನ್ನು ರಚಿಸಿ ಪ್ರತಿ ಮನೆಗಳಿಗೂ ತೆರಳಿ ಸಮೀಕ್ಷೆ ಮಾಡಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ದೇಶಪಾಂಡೆ ಫೌಂಡೇಷನ್ ಬಹಳಷ್ಟು ಸಹಕಾರ ನೀಡಿವೆ ಎಂದು ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಶೋಕ ಅಗರವಾಲ ಹೇಳಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಲಸಿಕಾಕರಣ ಮಹತ್ವದ್ದಾಗಿದ್ದು, ಜಿಲ್ಲೆಯ ಎಲ್ಲ ಜನತೆ ಲಸಿಕೆ ಹಾಕಿಸಿಕೊಳ್ಳಬೇಕು. ಪರಿಚಿತರಿಗೂ ತಿಳಿ ಹೇಳಿ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮನವಿ ಮಾಡಿದ್ದಾರೆ.