Advertisement
ಇದಕ್ಕಾಗಿ ರೈತರು ಮಾಡಬೇಕಾದ್ದಿಷ್ಟೇ- ನಿಮ್ಮ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್‌ಗೆ ಹೋಗಿ “ಫಾರ್ಮ್ರೈಸ್’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಜಮೀನಿನಲ್ಲಿ ನಿಂತು ಆ ಆ್ಯಪ್‌ನಲ್ಲಿರುವ ಜಿಪಿಎಸ್ ಗುಂಡಿಯನ್ನು ಒತ್ತಿದರೆ ಸಾಕು. ಏಕಕಾಲದಲ್ಲಿ 200 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸುಮಾರು 54 ಬೆಳೆಗಳ ಧಾರಣೆ ಪಟ್ಟಿ ದೊರೆಯುತ್ತದೆ.
Related Articles
Advertisement
ಹತ್ತಿ, ಮೆಕ್ಕೆಜೋಳ ರೈತರೇ ಹೆಚ್ಚು: ಹವಾಮಾನ ಮುನ್ಸೂಚನೆಗಾಗಿ ಸ್ಕೈಮೇಟ್ ಜತೆ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಮೇ ತಿಂಗಳಿಂದ ಇದು ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಬಹುತೇಕ ನಿಖರ ಮಾಹಿತಿ ಲಭ್ಯವಾಗುತ್ತಿದೆ.
ರಾಜ್ಯದಲ್ಲಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಗಾರರು ಹಾಗೂ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗಾರರು ಹವಾಮಾನ ಮುನ್ಸೂಚನೆಯ ಹೆಚ್ಚು ಉಪಯೋಗ ಪಡೆಯುತ್ತಿದ್ದಾರೆ. ಹತ್ತಾರು ಮಾರುಕಟ್ಟೆಗಳ ದೂರ ಮತ್ತು ಅಲ್ಲಿನ ಧಾರಣೆ ಲಭ್ಯವಾಗುವುದರಿಂದ ಬೆಳೆಯನ್ನು ಎಲ್ಲಿ ಕೊಂಡೊಯ್ದರೆ ತಮಗೆ ಲಾಭ ಆಗುತ್ತದೆ ಎಂಬುದನ್ನು ರೈತರು ಸುಲಭವಾಗಿ ನಿರ್ಧರಿಸಬಹುದು. ಮಾರುಕಟ್ಟೆ ದೂರ ಗೊತ್ತಾಗುವುದರಿಂದ ಸಾಗಣೆ ವೆಚ್ಚವನ್ನೂ ಲೆಕ್ಕಹಾಕಬಹುದು.
ಏನು ಉಪಯೋಗ?: ಆಯಾ ಪ್ರದೇಶಗಳಲ್ಲಿನ ವಿವಿಧ ಬೆಳೆಗಳ ಬಿತ್ತನೆಯಿಂದ ಹಿಡಿದು ಪ್ರತಿ ಹಂತದ ಮಾಹಿತಿ ಸಿಗುವುದರಿಂದ ಬೆಳೆ ಸಂರಕ್ಷಣೆಗೂ ಅನುಕೂಲ ಆಗಲಿದೆ. ಇದಲ್ಲದೆ, ಸಂಬಂಧಿತ ಕೃಷಿ ವಿಷಯದ ಬಗ್ಗೆ ಪರಸ್ಪರ ಸಂಪರ್ಕ ಸಾಧಿಸಲು ರೈತರಿಗೆ ಸಂವಹನಾತ್ಮಕ ವೇದಿಕೆ ಇದರಲ್ಲಿದೆ. ಆಯ್ದ ಕೃಷಿ ಮತ್ತು ಗ್ರಾಮೀಣ ಸಂಬಂಧಿ ಸರ್ಕಾರಿ ನೀತಿಗಳು, ಇತ್ತೀಚಿನ ಸುದ್ದಿಗಳು, ಕಾರ್ಯಕ್ರಮಗಳ ವಿವರವನ್ನು ಕೂಡ ಆ್ಯಪಅ ಮೂಲಕ ಪಡೆಯಬಹುದು ಎಂದು ತಿಳಿಸಿದರು.
ಪ್ರಸ್ತುತ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ರಾಜ್ಯದಲ್ಲಿ ಇದೆ. ಆದರೆ, ಅದು ಆಯ್ದ ಮಾರುಕಟ್ಟೆಗಳಿಗೆ ಸೀಮಿತವಾಗಿದ್ದು, ಅದರ ಲಾಭ ರೈತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಈಗ ಬಹುತೇಕ ರೈತರು ಸ್ಮಾರ್ಟ್‌ಫೋನ್ ಹೊಂದಿರುವುದರಿಂದ ಈ ಆ್ಯಪ್‌ನ ಲಾಭ ಪಡೆಯಬಹುದು. ಸದ್ಯ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ಮಾತ್ರ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯ ಇದೆ ಎಂದರು.
ಡೌನ್‌ಲೋಡ್ ಹೀಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಫಾರ್ಮ್ರೈಸ್ (FARMRISE) ಎಂದು ಟೈಪ್ ಮಾಡಿ. ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿ. ಅಂದ ಹಾಗೆ ಇದು ಸಂಪೂರ್ಣ ಉಚಿತ ಆ್ಯಪ್. ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ ಇದು ಉಚಿತವಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಶುಲ್ಕ ವಿಧಿಸುವ ಸಾಧ್ಯತೆಯೂ ಇದೆ. ಆ್ಯಪ್‌ನಲ್ಲಿ ಇವೆಲ್ಲಾ ಮಾಹಿತಿ ಲಭ್ಯ
-200 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರಮುಖ ಮಾರುಕಟ್ಟೆಗಳ ಮಾಹಿತಿ.
-ಮಾರುಕಟ್ಟೆಗಳಲ್ಲಿನ 54 ಪ್ರಮುಖ ಬೆಳೆಗಳ ಧಾರಣೆ ಪಟ್ಟಿ.
-ಹತ್ತು ದಿನಗಳ ಹವಾಮಾನ ಮುನ್ಸೂಚನೆ.
-ಬಿತ್ತನೆ, ಬಿತ್ತನೆ ನಂತರದ ಪ್ರತಿ ಹಂತದ ಮಾಹಿತಿ.
-ಆಯಾ ಪ್ರದೇಶದಲ್ಲಿರುವ ಬೆಳೆಗಳು.
-ಬೆಳೆಗೆ ರೋಗಬಾಧೆ ಬರುವ ಮುನ್ಸೂಚನೆಗಳು.
-ರೋಗ ನಿಯಂತ್ರಣಕ್ಕೆ ಯಾವ ಔಷಧ ಸಿಂಪಡಿಸಬೇಕು.
-ಕೃಷಿ ಕುರಿತು ಪರಸ್ಪರ ಚರ್ಚಿಸಲು ಸಂವಹನಾತ್ಮಕ ವೇದಿಕೆ.
-ಆಯ್ದ ಕೃಷಿ ಮತ್ತು ಗ್ರಾಮೀಣ ಸಂಬಂಧಿ ಸರ್ಕಾರಿ ನೀತಿಗಳು.
-ಕೃಷಿಗೆ ಸಂಬಂಧಿಸಿದ ಇತ್ತೀಚಿನ ಸುದ್ದಿಗಳು, ಕಾರ್ಯಕ್ರಮಗಳ ವಿವರ. * ವಿಜಯಕುಮಾರ್ ಚಂದರಗಿ