Advertisement
ಅನಿವಾರ್ಯವಾಗಿಯಾದರೂ ಡೇ ಕೇರ್‌ಗೆ ಸೇರಿಸಬೇಕಾದ ಅನಿವಾರ್ಯತೆಗೆ ಅವರು ಸಿಕ್ಕಿಬೀಳುವುದು ಹೀಗೆ. ಇರಲಿ ಅಂಥಾ ಒಂದು ಡೇಕೇರ್ ಒಂದನ್ನು ಒಮ್ಮೆ ಸಮೀಕ್ಷೆಗೆ ಗುರಿಪಡಿಸಲಾಯಿತು. ಅಲ್ಲಿ ಮುಕ್ಕಾಲು ಪಾಲು ಹೆತ್ತವರು ಡೇಕೇರ್‌ನಿಂದ ಮಕ್ಕಳನ್ನು ಕರೆದೊಯ್ಯುವಾಗ ತಡವಾಗಿ ಬರುತ್ತಿದ್ದರು. ಕೆಲವರಷ್ಟೇ ಸರಿಯಾದ ಸಮಯಕ್ಕೆ ಬಂದು ತಮ್ಮ ಮಗುವನ್ನು ಕರೆದೊಯ್ಯುತ್ತಿದ್ದರು. ಇದನ್ನು ಸರಿಪಡಿಸುವುದು ಹೇಗೆ ಎಂದು ತಜ್ಞರೆಲ್ಲ ಸಮಾಲೋಚನೆ ನಡೆಸಿದರು. ಅದರಂತೆ ತಡವಾಗಿ ಬರುವ ಹೆತ್ತವರಿಗೆ ಪ್ರತಿ ದಿನವೂ ಇಂತಿಷ್ಟು ದಂಡ ಕಟ್ಟಬೇಕೆಂದು ಸೂಚಿಸಲಾಯಿತು. ನಂತರ ಅಚ್ಚರಿಯ ವಿದ್ಯಮಾನ ಜರುಗಿತ್ತು. ದಂಡ ಕಟ್ಟುವ ಭಯದಿಂದ ಹೆತ್ತವರು ಬೇಗ ಬರುತ್ತಾರೆಂದುಕೊಂಡರೆ ಫಲಿತಾಂಶ ಉಲ್ಟಾ ಆಗಿತ್ತು. ತಡವಾಗಿ ಮಕ್ಕಳನ್ನು ಕರೆದೊಯ್ಯಲು ಬರುವವವರ ಸಂಖ್ಯೆ ಹೆಚ್ಚಿತು. ಹಿಂದೆ, ಬೇಗ ಬರುತ್ತಿದ್ದವರು ಕೂಡಾ ತಡವಾಗಿ ಬರಲು ಶುರುಮಾಡಿದರು. ಅದಕ್ಕೆ ಕಾರಣವನ್ನು ಮನಃಶಾಸ್ತ್ರಜ್ಞರು ಉತ್ತರಿಸುವುದು ಹೀಗೆ. ಹಿಂದೆ ತಡವಾಗಿ ಬರುತ್ತಿದ್ದ ಹೆತ್ತವರಲ್ಲಿ ಅಪರಾಧಿ ಪ್ರಜ್ಞೆ ಇರುತ್ತಿತ್ತು. ಅದನ್ನು ಶುಲ್ಕ ಪಾವತಿ ನುಂಗಿಹಾಕಿತ್ತು. ತಡವಾಗಿ ಬಂದರೂ ಶುಲ್ಕ ಪಾವತಿಸಿದ್ದರಿಂದ ಅಪರಾಧಿ ಮನೋಭಾವ ಇರುತ್ತಿರಲಿಲ್ಲ. Advertisement
ದಂಡ ಕಟ್ಟಿ ಹಗುರಾಗುತ್ತಿದ್ದರು
08:47 PM Oct 20, 2019 | Sriram |
Advertisement
Udayavani is now on Telegram. Click here to join our channel and stay updated with the latest news.