Advertisement

ಫೈನಾನ್ಸ್‌ ವ್ಯವಸ್ಥೆ ಖಂಡನೀಯ

05:43 PM Jun 13, 2021 | Team Udayavani |

ಬೆಂಗಳೂರು: ಖಾಸಗಿ ಶಾಲೆಗಳು ಪಾಲಕರಿಂದಶುಲ್ಕ ವಸೂಲಿಗೆ ಫೈನಾನ್ಸ್‌ ಸಂಸ್ಥೆಗಳ ಜತೆ ಶಾಮೀಲಾಗಿವುದು ಖಂಡನೀಯ ಎಂದು ಪ್ರಾಥಮಿಕಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದಸಚಿವರು, ಶುಲ್ಕ ವಸೂಲಿ ಮಾಡುವಲ್ಲಿಖಾಸಗಿ ಶಾಲೆಗಳು ಖಾಸಗಿ ಫೈನಾನ್ಸ್‌ಗಳ ಜತೆ ಶಾಮೀಲಾಗಿವೆ. ಇದನ್ನುತಾತ್ವಿಕವಾಗಿ ಯಾರೂ ಒಪ್ಪಿಕೊಳ್ಳದವಿಚಾರವಾಗಿದೆ. ಶಾಲೆಗಳೇ ಪಾಲಕರಿಗೆ ಖಾಸಗಿ ಫೈನಾನ್ಸ್ ನವರಿಂದ ಸಾಲ ಕೊಡಿಸುತ್ತಿರುವ ವಿಷಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲುಪಿದೆ. ಸಂಬಂಧಪಟ್ಟವರಿಗೆ ನೋಟಿಸ್‌ಕೊಡುವುದಾಗಿ ಅವರು ತಿಳಿಸಿದ್ದಾರೆ.

ಕೊರೊನಾಸಂಕಷ್ಟ ಹಿನ್ನೆಲೆಯಲ್ಲಿ ಪಾಲಕರು ಆರ್ಥಿಕವಾಗಿತೊಂದರೆಯಲ್ಲಿದ್ದಾರೆ. ಇದೀಗ ಫೈನ್ಯಾನ್ಸ್‌ ಕಂಪನಿಮೂಲಕ ಅವರಿಗೆ ಮತ್ತೆ ತೊಂದರೆ ಕೊಡುವುದುಸರಿಯಲ್ಲ ಎಂದರು.ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಮಾಧಾನ: ಶಿಕ್ಷಣಸಚಿವರು ಹೇಳಿಕೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳುಅಸಮಾಧಾನ ಹೊರ ಹಾಕಿವೆ. ಕರ್ನಾಟಕಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ…) ದಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ಪ್ರತಿಕ್ರಿಯಿಸಿ, ಸಚಿವ ಸುರೇಶ್‌ಕುಮಾರ್‌ ದ್ವಂದ ನೀತಿ ಅನುಸರಿಸುತ್ತಿದ್ದಾರೆ.

ಜಾಣಕಿವುಡರಾಗಿ ಇವತ್ತು ಯಾವುದೇಆದೇಶ ಹೊರಡಿಸುತ್ತಿಲ್ಲ. ಮೂರುವರ್ಷಗಳಿಂದ ಪಾಲಕರು ಶುಲ್ಕಕಟ್ಟುತ್ತಿಲ್ಲ. ಶುಲ್ಕ ಕಟ್ಟುವುದರ ಬಗ್ಗೆಕೇಳುವುದನ್ನು ಟಾರ್ಚರ್‌ ಎಂದರೆ, ಶಿಕ್ಷಣ ಸಂಸ್ಥೆಉಳಿದು, ಅವುಗಳನ್ನು ನಡೆಸುವುದು ಹೇಗೆ ?ಎಂದು ಪ್ರಶ್ನಿಸಿದ್ದಾರೆ.ಕಳೆದ ವರ್ಷದ ಶುಲ್ಕವು ಕಳೆದ ವರ್ಷಕ್ಕೆ ಮಾತ್ರಸೀಮಿತವಾಗಿದೆ. ನಾವು ಯಾರೂ ಶಾಲೆಯಶುಲ್ಕವನ್ನು 2 ವರ್ಷಗಳಿಂದ ಏರಿಸಿಲ್ಲ. ಈ ವರ್ಷಎಲ್ಲದರ ಬೆಲೆ ಏರಿಕೆಯಾಗಿದೆ. ಹಾಗಾಗಿ ಕನಿಷ್ಠಶುಲ್ಕವನ್ನು ಕಟ್ಟಿ ದಾಖಲಾಗಬೇಕು. ಹಳೆ ಬಾಕಿಹಣವನ್ನೂ ಕಟ್ಟಿಲ್ಲ ಎಂದರೆ ಶಿಕ್ಷಣ ಕೊಡುವುದು ಹೇಗೆ ಎಂಬುದು ನಮಗೂ ಪ್ರಶ್ನೆಯಾಗಿದೆ. ಹಾಗಾಗಿ ದ್ವಂದ್ವ ಹೇಳಿಕೆ ಕೊಡುವುದನ್ನು ನಿಲ್ಲಿಸಿಸ್ಪಷ್ಟೀಕರಣ ಕೊಡಿ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next