Advertisement

ಮಾರ್ಚ್‌ 9ರಂದು ಚಿತ್ರ ಪ್ರದರ್ಶನ ರದ್ದು

11:11 AM Mar 08, 2018 | Team Udayavani |

ಯುಎಫ್ಓ ಮತ್ತು ಕ್ಯೂಬ್‌ ವಿಧಿಸುತ್ತಿರುವ ದರಕ್ಕೆ ಸಂಬಂಧಿಸಿದಂತೆ, ಮಾತುಕತೆ ಸಫ‌ಲವಾಗದ ಹಿನ್ನೆಲೆಯಲ್ಲಿ ಮಾರ್ಚ್‌ 9ರಂದು ಯಾವ ಕನ್ನಡ ಚಿತ್ರ ಸಹ ಬಿಡುಗಡೆಯಾಗುವುದಿಲ್ಲ ಎಂಬ ವಿಷಯ ಗೊತ್ತೇ ಇದೆ. ಹೊಸ ವಿಷಯವೇನೆಂದರೆ, ಅಂದು ಚಿತ್ರದ ಪ್ರದರ್ಶನ ಸಹ ಇರುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸ್ಪಷ್ಟಪಡಿಸಿದ್ದಾರೆ.

Advertisement

ಈಗಾಗಲೇ ಯುಎಫ್ಓ ಮತ್ತು ಕ್ಯೂಬ್‌ ವಿಧಿಸಿರುವ ದರದಲ್ಲಿ ಶೇ.25 ರಷ್ಟು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ, ನಡೆಸಿದ್ದ ಸಭೆಗಳೆಲ್ಲವೂ ವಿಫ‌ಲವಾಗಿದ್ದರಿಂದ ಮಂಡಳಿಯು ಮಾರ್ಚ್‌ 9ರಿಂದ ಯಾವುದೇ ಹೊಸ ಚಿತ್ರಗಳನ್ನು ಬಿಡುಗಡೆ ಮಾಡದಿರುಲು ತೀರ್ಮಾನಿಸಿತ್ತು. ಈಗ ಮಾರ್ಚ್‌ 9ರ ಒಂದು ದಿನ ಮಾತ್ರ ಯಾವುದೇ ಕನ್ನಡ ಚಿತ್ರಗಳು ಪ್ರದರ್ಶನವಾಗುವುದಿಲ್ಲ.

ಈಗಾಗಲೇ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಸಿನಿಮಾಗಳು ಕೂಡ ಆ ಒಂದು ದಿನ ಮಾತ್ರ ಪ್ರದರ್ಶನ ರದ್ದು ಮಾಡಲಿವೆ. ಮಾರ್ಚ್‌ 10ರಿಂದ ಎಂದಿನಂತೆ ಚಿತ್ರಮಂದಿರದಲ್ಲಿರುವ ಚಿತ್ರಗಳು ಪ್ರದರ್ಶನ ಕಾಣಲಿವೆ. ಆದರೆ, ಹೊಸ ಚಿತ್ರಗಳು ಬಿಡುಗಡೆಯಾಗುವುದಿಲ್ಲ. “ಇದು ರಾಜ್ಯದ ಎಲ್ಲಾ ಮಲ್ಲಿಪ್ಲೆಕ್ಸ್‌ ಮತ್ತು ಚಿತ್ರಮಂದಿರಗಳಲ್ಲಿರುವ ಚಿತ್ರಗಳಿಗೂ ಅನ್ವಯವಾಗಲಿದೆ.

ಬೇರೆ ಭಾಷೆಯ ಚಿತ್ರಗಳಿಗೆ ಇದು ಅನ್ವಯಿಸುವುದಿಲ್ಲ. ಕನ್ನಡ ಚಿತ್ರಗಳು ಎಲ್ಲೆಲ್ಲಿ ಪ್ರದರ್ಶನಗೊಳ್ಳುತ್ತಿವೆಯೋ, ಅಲ್ಲಿ ಮಾತ್ರ ಶುಕ್ರವಾರ ಪ್ರದರ್ಶನ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿರುವ ಸಾ.ರಾ. ಗೋವಿಂದು, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕ ಸದಸ್ಯರು ಒಂದು ದಿನ ಮಂಡಳಿಯ ಮನವಿಗೆ ಸ್ಪಂದಿಸುವಂತೆ ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next