Advertisement
ನನ್ನ ತಾಯಿಗೆ ಹಾಗೂ ಸಹೋದರ ರವೀಂದ್ರ ಕಾಮತ್ ಹೆಸರಿಗೆ ತಂದೆಯವರು ವಿಲ್ ಮಾಡಿದ್ದರು. 2002 ರಿಂದ 2006 ರವರೆಗೆ ಅವರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ.
Related Articles
Advertisement
ಆದರೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ವಕೀಲರ ಮುಖಾಂತರ 2023ರ ಜೂನ್ 5 ರಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಆದರೆ 2023ರ ಆಗಸ್ಟ್ 22 ರಂದು ರಾತ್ರಿ 9.30 ರ ಸುಮಾರಿಗೆ ಚಿತ್ರಮಂದಿರದ ಕಟ್ಟಡದ ಮುಂಭಾಗದ ಛಾವಣಿಯು ಕುಸಿದು ಹಲವಾರು ಅನಾಹುತಗಳು ಸಂಭವಿಸಿವೆ. ಸಕಾಲದಲ್ಲಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ, ಚಿತ್ರಮಂದಿರದ ನಿರ್ವಹಣೆಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿದ್ದಲ್ಲಿ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ನಮ್ಮ ಭಾವನೆ ಎಂದರು.
ಸಹೋದರರ ಮದ್ಯೆ ಇದ್ದ ಸಮಸ್ಯೆಯೇ ಚಿತ್ರಮಂದಿರಕ್ಕೆ ಮುಳುವಾಯ್ತಾ?
ಸಹೋದರರಿಬ್ಬರ ಹೆಸರಿನಲ್ಲಿ ಚಿತ್ರಮಂದಿರದ ಲೈಸೆನ್ಸ್ ಇದ್ದು ಸಹೋದರರ ಮುನಿಸುಗಳೇ ಚಿತ್ರಮಂದಿರದಲ್ಲಿನ ಸಮಸ್ಯೆಗೆ ಕಾರಣವಾಯ್ತಾ? ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಬರದಂತೆ ಸಹೋದರ ರವೀಂದ್ರ ಕಾಮತ್ ತಡೆದಿದ್ದಾರೆ ಎಂಬ ಅನುಮಾನವನ್ನು ಗಣೇಶ್ ಕಾಮತ್ ವ್ಯಕ್ತಪಡಿಸಿದರು.
ಚಿತ್ರಮಂದಿರಕ್ಕೆ ತಾನೊಬ್ಬನೇ ಮಾಲೀಕನಾಗಬೇಕು ಎಂಬ ಆಸೆಯಿಂದ ಲೈಸೆನ್ಸ್ ರಿನೀವಲ್ ಮಾಡಲು ರವೀಂದ್ರ ಕಾಮತ್ ಬಿಟ್ಟಿಲ್ಲಾ ಎಂಬ ಅನುಮಾನ ವ್ಯಕ್ತಪಡಿಸಿದರು.
ಕೋರ್ಟ್ ನಲ್ಲಿ ಚಿತ್ರಮಂದಿರ ಲಾಸ್ ನಲ್ಲಿ ನೆಡೆಯುತ್ತಿದೆ ಎಂದು ಈಗಾಗಲೇ ರವೀಂದ್ರ ಕಾಮತ್ ಹೇಳಿದ್ದಾರೆ. ಪುನಃ ಅದನ್ನು ಕಟ್ಟಲು 35 ಲಕ್ಷ ಹಣ ಬೇಕು. ಈ ಎಲ್ಲಾ ಕಾರಣಕ್ಕೆ ಅದೆಲ್ಲವೂ ಕಷ್ಟವಾಗಲಿದೆ. ಹಾಗಾಗಿ ನಮಗೆ ಚಿತ್ರಮಂದಿರ ನಡೆಸಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಚಿತ್ರಮಂದಿರ ಪ್ರದರ್ಶನವಾಗುವುದಾದರೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವುದೇ ರೀತಿಯಲ್ಲಿ ಅನಾಹುತ ಜರುಗದಂತೆ ಹಾಗೂ ಲೈಸೆನ್ಸ್ ನವೀಕರಣಗೊಳ್ಳದೇ ಚಿತ್ರಪ್ರದರ್ಶನ ಮುಂದುವರೆಯದಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.