Advertisement
ಸುಚಿತ್ರಾ ಥಿಯೇಟರ್‌ನ ಆಧುನೀಕರಣ ಕಾಮಗಾರಿ ಆರಂಭವಾಗಿದ್ದು, ಇನ್ನೂ ಸುಮಾರು 2 ತಿಂಗಳು ಮುಂದುವರಿಯುವ ಸಾಧ್ಯತೆ ಇದೆ. ಪ್ರಭಾತ್ ಥಿಯೇಟರ್‌ನ ಕಾಮಗಾರಿ ಶೀಘ್ರದಲ್ಲಿ ನಡೆಯಲಿದೆ. ಈಗ ಎರಡೂ ಥಿಯೇಟರ್‌ನಲ್ಲಿ ಸಿನೆಮಾ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.
ಕೆ.ಎಸ್.ರಾವ್ ರಸ್ತೆಯಲ್ಲಿ ಚಿತ್ರಮಂದಿರಕ್ಕಾಗಿ ಕಟ್ಟಡ ನಿರ್ಮಿಸಲು ಆರಂಭಿಸಿ ಹಲವು ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿದ್ದ ಕಟ್ಟಡ ಪ್ರದೇಶವನ್ನು ಬಿ.ಕೆ.ವಾಸುದೇವ ರಾವ್ ಅವರು ಸ್ವಾಧೀನಪಡಿಸಿಕೊಂಡು 1958ರಲ್ಲಿ ‘ಪ್ರಭಾತ್’ ಹೆಸರಿನ ಚಿತ್ರಮಂದಿರ ಸ್ಥಾಪಿಸಿದರು. ಬಾಲಿವುಡ್ ನಟ ದೇವಾನಂದರ ‘ಕಾಲಾಪಾನಿ’ ಹಿಂದಿ ಚಿತ್ರದ ಪ್ರಥಮ ಪ್ರದರ್ಶನದ ಮೂಲಕ ಚಿತ್ರಮಂದಿರ ಆರಂಭವಾಗಿತ್ತು. ಆಗ ಎರಡಾಣೆ ಪ್ರವೇಶದರವಾಗಿತ್ತು. ಈ ಟಾಕೀಸಿನಲ್ಲಿ ಹೆಚ್ಚಾಗಿ ಇಂಗ್ಲಿಷ್ ಹಾಗೂ ತಮಿಳು ಭಾಷೆಯ ಸಿನೆಮಾಗಳು ಪ್ರದರ್ಶನವಾಗುತ್ತಿದ್ದವು.
Related Articles
ಬಿ.ಕೆ.ವಾಸುದೇವ ರಾವ್ ಕೆಲವು ವರ್ಷಗಳ ಅನಂತರ ತುಂಬೆ ಸುಬ್ಬರಾವ್, ನೋಡು ರಾಮಕೃಷ್ಣ ಭಟ್ ಕದ್ರಿ, ವಾಸುದೇವ ರಾವ್ ಬೆಂಗಳೂರು ಅವರನ್ನು ಪಾಲುದಾರರಾಗಿಸಿಕೊಂಡರು. ಬಳಿಕ ವಾಸುದೇವ ರಾವ್ ಸುಮಾರು 12 ವರ್ಷಗಳ ಕಾಲ ನಡೆಸಿಕೊಂಡು ಬಂದ ಪ್ರಭಾತ್ ಚಿತ್ರಮಂದಿರದ ಇಡೀ ಆವರಣದ ಪ್ರದೇಶವನ್ನು ಬೆಂಗಳೂರಿನ ಲಕ್ಷ್ಮೀನಾರಾಯಣ ಎಂಟರ್‌ಪ್ರೈಸಸ್‌ನ ಸ್ವಾಧೀನಕ್ಕೆ ಒಪ್ಪಿಸಿಕೊಟ್ಟರು. ಎಲ್ಲ ಭಾಷೆಯ ಚಲನಚಿತ್ರ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರದಲ್ಲಿ ‘ಆನಂದ’ ಹೆಸರಿನ ಶಿವರಾಜ್ ಕುಮಾರ್ ಅವರ ಪ್ರಥಮ ಕನ್ನಡ ಚಿತ್ರ 100 ದಿನಗಳ ಪ್ರದರ್ಶನ ಕಂಡಿತ್ತು. ತುಳುವಿನಲ್ಲಿ ಕೆಲವು ಸಿನೆಮಾಗಳು ಇಲ್ಲಿ ಪ್ರದರ್ಶನಗೊಂಡಿದೆ. ಮಂಗಳೂರಿನಲ್ಲಿ ಮ್ಯಾಟಿನಿ ಶೋ ಹಾಗೂ ಮಾರ್ನಿಂಗ್ ಶೋಗಳನ್ನು ಆರಂಭಿಸಿದ ಪ್ರಥಮ ಚಿತ್ರಮಂದಿರ ಎಂಬ ಹೆಗ್ಗಳಿಕೆ ಇದಕ್ಕಿದೆ ಎಂಬುದು ತಮ್ಮ ಲಕ್ಷ್ಮಣರ ಅಭಿಪ್ರಾಯ.
Advertisement
ಸುಚಿತ್ರದ ‘ಚಿತ್ರ’ ನೋಟ..!ಪ್ರಭಾತ್ ಚಿತ್ರಮಂದಿರದ ವಿಶಾಲವಾದ ಆವರಣವನ್ನು 1970ರಲ್ಲಿ ಬೆಂಗಳೂರಿನ ಡಿ.ಎನ್.ಗೋಪಾಲಕೃಷ್ಣ ಅವರು ಸ್ವಾಧೀನಪಡಿಸಿಕೊಂಡರು. ಅವರು ತಮ್ಮ ಲಕ್ಷ್ಮೀನಾರಾಯಣ ಎಂಟರ್‌ಪ್ರೈಸಸ್ ಸಂಸ್ಥೆಯ ಹೆಸರಿನಲ್ಲಿ ಇಲ್ಲಿ ‘ಸುಚಿತ್ರಾ’ ಹೆಸರಿನ ಇನ್ನೊಂದು ಚಿತ್ರಮಂದಿರವನ್ನು ಸ್ಥಾಪಿಸಿದರು. 1976ನೇ ಮೇ ತಿಂಗಳಿನಲ್ಲಿ ಡಾ| ರಾಜ್‌ಕುಮಾರ್‌ರ ‘ಬಹಾದ್ದೂರ್ ಗಂಡು’ ಕನ್ನಡ ಚಿತ್ರದ ಮೂಲಕ ಪ್ರದರ್ಶನ ಆರಂಭಿಸಿದರು. ಇಲ್ಲಿ ಅತಿ ಹೆಚ್ಚು ವಾರ ಪ್ರದರ್ಶನವಾದ ಸಿನೆಮಾವೆಂದರೆ ಕನ್ನಡದ ‘ಶಂಕರ್ ಗುರು’. ಸುಮಾರು 907 ಪ್ರೇಕ್ಷಕರ ಆಸನದ ಸ್ಥಳಾವಕಾಶವಿರುವ ಇಲ್ಲಿ ನಂಜುಂಡಿ ಕಲ್ಯಾಣ, ಮಿಲನ ಸಹಿತ ಕನ್ನಡ, ಹಿಂದಿ, ತಮಿಳು, ತುಳು ಸಿನೆಮಾಗಳು ಪ್ರದರ್ಶನ ವಾಗಿವೆ. ವಿಷ್ಣವರ್ಧನ್, ಅಂಬರೀಶ್, ಶ್ರೀನಾಥ್, ಪುಟ್ಟಣ್ಣ ಕಣಗಾಲ್, ಲಕ್ಷ್ಮೀ ಸಹಿತ ಖ್ಯಾತ ನಟ-ನಟಿಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಸುಚಿತ್ರಾ ಚಿತ್ರಮಂದಿರದ ನವೀಕರಣದ ಕೆಲಸವನ್ನು ಜೂನ್‌ನಿಂದ ಆರಂಭಿಸಲಾಗಿದ್ದು, ಅಂದಿನಿಂದಲೇ ಚಿತ್ರ ಪ್ರದರ್ಶನ ಸ್ಥಗಿತವಾಗಿದೆ. ಹೆಚ್ಚಾ ಕಡಿಮೆ ಜನವರಿವರೆಗೆ ಕೆಲಸ ನಡೆಯಲಿದೆ. ಬಳಿಕ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಪ್ರಸ್ತುತ ಇರುವ ಪ್ರೊಜೆಕ್ಟ್ ಬದಲಾಯಿಸಿ 4 ಕೆ ಮಾದರಿಯ ಸುಧಾರಿತ ಹಾಗೂ ಅತ್ಯಾಧುನಿಕ ಶೈಲಿಯ ಪ್ರೊಜೆಕ್ಟ್ ಅನ್ನು ಇಲ್ಲಿ ಅಳವಡಿಸಲಾಗುತ್ತದೆ. ಸುಧಾರಿತ ಸೀಟಿನ ವ್ಯವಸ್ಥೆಯೂ ಇಲ್ಲಿರಲಿದೆ. ಸಿಂಗಾರಗೊಳುವ ಥಿಯೇಟರ್‌ಗಳು
ಮಲ್ಟಿಪ್ಲೆಕ್ಸ್‌ಗಳ ಜಮಾನ ಮಂಗಳೂರಿಗೆ ಕಾಲಿಟ್ಟ ಕೂಡಲೇ ಸಿಂಗಲ್ ಥಿಯೇಟರ್ ಕಥೆ ಮುಗಿದೇ ಹೋಯಿತು ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಆದರೆ ಹಾಗಾಗಲಿಲ್ಲ. ಮಲ್ಟಿಪ್ಲೆಕ್ಸ್‌ಗಳ ಮಧ್ಯೆಯೂ ಸಿಂಗಲ್ ಥಿಯೇಟರ್‌ಗಳು ತಮ್ಮ ತಾಕತ್ತು ತೋರಿಸಿದವು. ಹೊಸ ಹೊಸ ಸಿನೆಮಾಗಳ ಮೂಲಕ ಥಿಯೇಟರ್‌ನತ್ತ ಪ್ರೇಕ್ಷಕರನ್ನು ಕರೆತರುವ ಪ್ರಯತ್ನ ನಡೆಯಿತು. ಜತೆಗೆ ಥಿಯೇಟರ್‌ಗಳು ಕೂಡ ಒಂದಷ್ಟು ಬದಲಾವಣೆಯ ಗಾಳಿಯೊಂದಿಗೆ ಹೊಸತನಗಳ ಹುಡುಕಾಟ ನಡೆಸುವ ಮೂಲಕ ಮನೆ ಮಾತಾಗುವ ಪ್ರಯತ್ನ ನಡೆಯುತ್ತಿದೆ. ಇದೇ ಆಶಯದೊಂದಿಗೆ ಮಂಗಳೂರಿನ ಸುಚಿತ್ರಾ ಹಾಗೂ ಪ್ರಭಾತ್ ಥಿಯೇಟರ್ ಈಗ ನವಸಿಂಗಾರಕ್ಕೆಸಿದ್ಧವಾಗಿದೆ. ಪ್ರಸ್ತುತ ಜ್ಯೋತಿ ಸಿನೆಮಾ ಮಂದಿರ ಹೊಸ ಲುಕ್‌ನೊಂದಿಗೆ ಕಾಣಿಸಿಕೊಳ್ಳುತ್ತಿದೆ. ಉಳಿದಂತೆ ಈಗ ಇರುವ ಸಿಂಗಲ್ ಥಿಯೇಟರ್‌ಗಳು ಇನ್ನಷ್ಟು ಹೈಫೈ ಆಗಬೇಕಾದ ಅಗತ್ಯವಿದೆ. ಸಿನೆಮಾಗಳ ಮೂಲಕ ಥಿಯೇಟರ್‌ಗಳತ್ತ ಜನರನ್ನು ಆಕರ್ಷಿಸುವ ಈ ಸಂದರ್ಭದಲ್ಲಿ, ಥಿಯೇಟರ್‌ಗಳು ಕೂಡ ಅದೇ ರೀತಿಯಲ್ಲಿ ಬದಲಾವಣೆ ಆಗಬೇಕಿದೆ. ಮಲ್ಟಿಪ್ಲೆಕ್ಸ್‌ಗೆ ಹೋಗುವ ಜನರನ್ನು ಹಿಡಿದಿಟ್ಟು ಸಿಂಗಲ್ ಥಿಯೇಟರ್‌ಗೆ ಕರೆತರುವ ಪ್ರಯತ್ನ ನಡೆಸಬೇಕಾಗಿದೆ. ದಿನೇಶ್ ಇರಾ