ಕಳೆದ ಕೆಲವು ವರ್ಷಗಳಿಂದೀಚೆಗೆ ಜನಪ್ರಿಯವಾಗುತ್ತಿರುವ ಒಟಿಟಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಕನ್ನಡ ಸಿನಿಮಾಗಳನ್ನು ನಿರಾಕರಿಸುತ್ತಿರುವ ಬಗೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಮೂಲಕ ತಂತ್ರಜ್ಞಾನ ವೇದಿಕೆಗಳ ತಾರತಮ್ಯ ಧೋರಣೆಗೆ ಮತ್ತೂಮ್ಮೆ ಕನ್ನಡಿ ಹಿಡಿದಿದ್ದಾರೆ. ಗೋವಾದ ಪಣಜಿಯಲ್ಲಿ ನಡೆದ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ದಿನ ದಲ್ಲಿ ಪಾಲ್ಗೊಂಡಿದ್ದ ರಿಷಬ್ ಶೆಟ್ಟಿ ಮಾತನಾಡಿ, ಒಟಿಟಿ ವೇದಿಕೆಗಳು ಅನುಸರಿಸುತ್ತಿರುವ ಇಬ್ಬಗೆಯ ನೀತಿಯ ಕುರಿತಂತೆ ಚಿತ್ರ ಜಗತ್ತಿನ ಗಮನ ಸೆಳೆದುದು ಒಂದಿಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಹುತೇಕ ಒಟಿಟಿ ಪ್ಲಾಟ್‌ಫಾರ್ಮ್ ಗಳು ಟೆಕ್ ದಿಗ್ಗಜ ಕಂಪನಿ ಗಳ ಹಿಡಿತ ದಲ್ಲಿರುವು ದ ರಿಂದ ಇವುಗಳಿಗೆ ಹಣಗಳಿಕೆ ಯೊಂದೇ ಪ್ರಧಾನವಾಗಿದೆ. ಇದ ಕ್ಕಾಗಿ ಚಂದಾದಾರರ ಕೊರತೆ, ಮಾರುಕಟ್ಟೆ ಇಲ್ಲ ಎಂಬ ನೆಪಗಳನ್ನು ಮುಂದೊಡ್ಡಿ ಕನ್ನಡ ಸಹಿತ ಇತರ ಕೆಲವೊಂದು ಭಾಷೆಯ ಸಿನಿಮಾ ಗಳನ್ನು ಖರೀದಿಸಲು ಒಟಿಟಿ ವೇದಿಕೆಗಳು ಮುಂದಾಗುತ್ತಿಲ್ಲ. ಥಿಯೇಟರ್‌ಗಳಲ್ಲಿ ಕಡಿಮೆ ಮಾನ್ಯತೆ ಪಡೆದಿರುವ ಸಿನಿಮಾ ಗಳತ್ತ ಒಟಿಟಿ ವೇದಿಕೆಗಳು ತಲೆ ಹಾಕುತ್ತಿಲ್ಲ. ಸಿನಿಮಾ ಮಾಲ್‌ಗಳು, ಒಟಿಟಿ ಬಂದ ಬಳಿಕ ಸಣ್ಣ ಪುಟ್ಟ ಥಿಯೇಟರ್‌ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ಸಣ್ಣ ಬಜೆಟ್‌ನ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇಂತಹ ಸಿನೆಮಾಗಳ ನಿರ್ಮಾಪಕರು ಇವು ಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಆಸಕ್ತಿ ತೋರಿದರೂ ಯಾವೊಂದೂ ಒಟಿಟಿ ವೇದಿಕೆಗಳು ಈ ಚಿತ್ರಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಯಾವು ದೋ ಒಂದು ಚಲನಚಿತ್ರ ಖರೀದಿಸಿ ನಷ್ಟ ಅನುಭವಿಸಿದೆವು ಎಂಬ ಕಾರಣ ಮುಂದೊಡ್ಡಿ ಒಟಿಟಿ ಪ್ಲಾಟ್‌ಫಾರ್ಮ್ ಗಳು ಕಡಿಮೆ ಬಜೆಟ್‌ನ ಸಿನಿಮಾಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನೆಮಾಗಳು ಪ್ರೇಕ್ಷಕರ ಮನಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಸ್ಥಾಪಿಸಿವೆ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಒಟಿಟಿ ವೇದಿಕೆಗಳು ಕನ್ನಡ ಸಿನಿಮಾ ಗಳನ್ನು ನಿರಾಕರಿಸುತ್ತಿರುವುದು ತೀರಾ ವಿಪರ್ಯಾಸ. ಸದ್ಯ ಕೆಲವು ನಿರ್ಮಾ ಪಕರು ಒಟಿಟಿಗೆಂದೇ ಚಿತ್ರಗಳನ್ನು ನಿರ್ಮಿಸಲು ಆಸಕ್ತಿ ತೋರತೊಡಗಿದ್ದಾರೆ. ಆದರೆ ಒಟಿಟಿ ವೇದಿಕೆಗಳು ಮಾತ್ರ ಕುಂಟು ನೆಪಗಳನ್ನು ಮುಂದೊಡ್ಡಿ ಅವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದು ಚಿತ್ರರಂಗಕ್ಕೆ ಬಲುದೊಡ್ಡ ಹಿನ್ನಡೆಯೇ ಸರಿ.
ರಿಷಬ್ ಶೆಟ್ಟಿ ಅವರು ಇಫಿ ಚಿತ್ರೋತ್ಸವ ತಾಣದಿಂದಲೇ ಒಟಿಟಿಯ ತಾರತಮ್ಯ ಧೋರಣೆಯ ಬಗೆಗೆ ಸಿನಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಗಮನ ಸೆಳೆದದ್ದೇ ಅಲ್ಲದೆ ಇತ್ತ ತತ್‌ಕ್ಷಣ ಗಮನಹರಿಸಿ ಎಲ್ಲ ಭಾಷೆಗಳ ಚಿತ್ರಗಳಿಗೂ ಒಟಿಟಿ ವೇದಿಕೆಗಳಲ್ಲಿ ಮತ್ತು ಚಲನ ಚಿತ್ರೋತ್ಸವಗಳಲ್ಲಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹ ಮುಂದಿ ಟ್ಟಿರುವುದು ಉತ್ತಮ ಬೆಳವಣಿಗೆ. ಇತ್ತ ಚಿತ್ರರಂಗ ಮಾತ್ರವಲ್ಲದೆ ಕೇಂದ್ರ ಸರಕಾರ ಕೂಡ ತುರ್ತು ಗಮನಹರಿಸಿ ಕೇವಲ ಕನ್ನಡ ಸಹಿತ ಎಲ್ಲ ಭಾಷೆಗಳ ಚಲನ ಚಿತ್ರಗಳಿಗೂ ಒಟಿಟಿ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ಚಿತ್ರದ ಪ್ರದರ್ಶನಕ್ಕೂ ಮುನ್ನ ಅದರ ಹಣೆಬರಹ ಬರೆಯುವ ಒಟಿಟಿ ವೇದಿಕೆಗಳ ದಾಷ್ಟéìಕ್ಕೆ ಕಡಿವಾಣ ಹಾಕಬೇಕಿದೆ.