Advertisement

ಬಿರುಬಿಸಿಲಲ್ಲಿ ನೀರಿಗಾಗಿ ಪರದಾಟ

03:05 PM Apr 06, 2018 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಬೇಸಿಗೆ ಬಿರು ಬಿಸಿಲು ಹೆಚ್ಚಾಗ ತೊಡಗುತ್ತಿರುವುದರಿಂದ ಅನೇಕ ಗ್ರಾಮಗಳಲ್ಲಿ ಕುಡಿಯುವ
ನೀರಿನ ಸಮಸ್ಯೆ ಉಂಟಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ರುಮ್ಮನಗೂಡ, ಸಾಸರಗಾಂವ, ವಜೀರಗಾಂವ, ತಾಡಪಳ್ಳಿ, ಮೋಘಾ, ಪಸ್ತಪುರ, ಹೂವಿನಬಾವಿ, ರುಸ್ತಂಪುರ ಹಾಗೂ ಸುತ್ತಲಿನ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಜನರು ಹಾಗೂ ಜನ ಜಾನುವಾರುಗಳು ಕುಡಿಯುವ ನೀರಿನ ತೊಂದರೆ ಅನುಭವಿಸಬೇಕಾಗಿದೆ.

ಬಹುಗ್ರಾಮ ಯೋಜನೆ ಅಡಿಯಲ್ಲಿ 5ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಪೈಪ್‌ಗ್ಳ ಕಾಮಗಾರಿ ಕಳಪೆಮಟ್ಟದಿಂದ ನಡೆದಿದ್ದು, ಅಲ್ಲಲ್ಲಿ ಪೈಪ್‌ಗ್ಳು ಒಡೆದು ಹೋಗಿ ನೀರು ಸೋರಿಕೆ ಆಗುತ್ತಿರುವುದರಿಂದ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸಬೇಕಾಗಿದೆ.

ತಾಲೂಕಿನ ಪಸ್ತಪುರ ಗ್ರಾಪಂ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚಿನ ಸಮಸ್ಯೆ ತಲೆದೋರಿದೆ. ಬೋರವೆಲ್‌ಗ‌ಳು ಕೆಟ್ಟು ಹೋಗಿವೆ, ಬಾವಿಗಳಲ್ಲಿ ನೀರು ಮಲೀನಗೊಂಡಿವೆ. ಅಲ್ಲಲ್ಲಿ ಪೈಪ್‌ಗಳು ಒಡೆದು ಹೋಗಿರುವುದರಿಂದ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. 

ಹೀಗಾಗಿ ರುಮ್ಮನಗೂಡ ತಾಂಡಾ, ಮೋಘಾ ತಾಂಡಾ, ವಜೀರಗಾಂವ, ಹೂವಿನಬಾವಿ ತಾಂಡಾದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಜನರು ಇರುವ ಒಂದೆರಡು ಬೋರವೆಲ್‌ಗ‌ಳಲ್ಲಿನ ನೀರಿಗಾಗಿ ಹಗಲು-ರಾತ್ರಿ ತಾಸುಗಟ್ಟಲೇ ಕಾಯಬೇಕಾಗಿದೆ.

Advertisement

ರುಮ್ಮನಗೂಡ ತಾಂಡಾಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ದೂರದಲ್ಲಿ ಇರುವ ಹಳೇ ಬಾವಿಗೆ 2ಕಿಮೀ ದೂರ ನಡೆದುಕೊಂಡು ಎತ್ತಿನ ಬಂಡಿಯಲ್ಲಿ ನೀರು ತರಬೇಕಾಗಿದೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ತಾಪ ದಿನ ದಿನಕ್ಕೆ ಹೆಚ್ಚುತ್ತಿದ್ದು ಬಿಸಿಲಿನ ಪ್ರಖರತೆಯಿಂದ ಜನರು ರಸ್ತೆ ಮೇಲೆ ತಿರುಗಾಡುವುದು ಕಷ್ಟವಾಗಿದೆ.

ಚಿಂಚೋಳಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಪಿಡಿಒ ಕಾರ್ಯದರ್ಶಿಗಳು ಪಂಪ್‌ ಆಪರೇಟರ್‌ ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next