Advertisement

ಇನ್ನು ಶುರುವಾಗಲಿದೆ ಒಕ್ಕಲಿಗ ಮೀಸಲು ಹೋರಾಟ: ಬೆಳಗಾವಿಯಲ್ಲಿ ಬೇಡಿಕೆ ಮಂಡಿಸಿದ ಇಬ್ಬರು ಸಚಿವರು

02:29 PM Dec 22, 2022 | Team Udayavani |

ಬೆಳಗಾವಿ: ಪಂಚಮಸಾಲಿ ಮೀಸಲು ಹೋರಾಟದ ಮಧ್ಯೆಯೇ ಒಕ್ಕಲಿಗ ಮೀಸಲು ಹೋರಾಟವೂ ಸರ್ಕಾರಕ್ಕೆ ತಲೆ ಬಿಸಿ ಸೃಷ್ಟಿಸುವ ಸಾಧ್ಯತೆ ಇದೆ.

Advertisement

ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪವಾಗಿದೆ. ಸಂಪುಟದ ಇಬ್ಬರು ಪ್ರಬಲ ಸಚಿವರು ಒಕ್ಕಲಿಗ ಮೀಸಲು ವಿಚಾರದ ಬಗ್ಗೆ ಬೆಳಗಾವಿಯಲ್ಲೇ ಪ್ರಸ್ತಾಪಿಸಿದ್ದಾರೆ.

ಒಕ್ಕಲಿಗ ಮೀಸಲಾತಿ ವಿಚಾರ ಸಂಬಂಧ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಒಕ್ಕಲಿಗ ಸಮುದಾಯ ನನಗೆ ಮಾಹಿತಿ ಕೊಟ್ಟಿದೆ. ಸಮುದಾಯಕ್ಕೆ ನ್ಯಾಯ ಕೊಡಿಸಿ ಎಂದು ಮನವಿ‌ ಕೊಟ್ಟಿದ್ದರು. ನಾನು ಸಿಎಂ ಜೊತೆ ಮಾತನಾಡಿದ್ದೇನೆ. ನಮ್ಮ‌ ಸ್ವಾಮೀಜಿ ದೂರವಾಣಿ ಕರೆ ಮಾಡ್ತಿದ್ದಾರೆ. ಒಬಿಸಿ ಆಯೋಗಕ್ಕೆ ಮೀಸಲಾತಿ ಕರಡು ಕಳಿಸಿ ಎಂದಿದ್ದಾರೆ. ‌ಜಯಪ್ರಕಾಶ್ ಹೆಗ್ಡೆಯವರಿಗೆ ಸಿಎಂ ಪತ್ರ ಬರೆದಿದ್ದಾರೆ ಎಂದರು.

ಇದನ್ನೂ ಓದಿ:ಲಂಕಾ ವಿರುದ್ಧದ ಟಿ20 ಸರಣಿಗೂ ರೋಹಿತ್ ಡೌಟ್: ಪಾಂಡ್ಯಾಗೆ ಸಿಗುತ್ತಾ ನಾಯಕತ್ವ?

10% ರಲ್ಲಿ 4% ಗ್ರಾಮೀಣ ಪ್ರದೇಶ ಒಕ್ಕಲಿಗರಿಗೆ ಮೀಸಲು ಇದೆ. ನಗರ ಪ್ರದೇಶದ ಒಕ್ಕಲಿಗರಿಗೆ ಇಲ್ಲ. ಇವತ್ತು ನಾನು ಸಭೆಯನ್ನ ಮಾಡುತ್ತೇನೆ. ನಮ್ಮ ಸಮುದಾಯದ ನಾಯಕರ ಜೊತೆ ನಡೆಸುತ್ತೇನೆ ಎಂದರು.

Advertisement

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಸಮುದಾಯ ಕೃಷಿಯನ್ನೇ ನಂಬಿಕೊಂಡಿದೆ. ನ್ಯಾಯಯುತ ಬೇಡಿಕೆಯನ್ನ ಇಟ್ಟಿದೆ. ನಿರ್ಮಲಾನಂದ ಶ್ರೀಗಳು ಹೋರಾಟ ಹಮ್ಮಿಕೊಂಡಿದ್ದಾರೆ. ಅಶೋಕ್ ಅಧ್ಯಕ್ಷತೆಯಲ್ಲಿ ಸಭೆ ಮಾಡುತ್ತೇವೆ. ನ್ಯಾಯಯುತ ಬೇಡಿಕೆಗಳ ಬಗ್ಗೆ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next