Advertisement
ಜತೆಗೆ, ಜ.19ರಂದು ಬೋಧ್‌ಗಯಾದ ಕಾಲಚಕ್ರದಲ್ಲಿ ಮೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಇಟ್ಟಿದ್ದು ಬೆಂಗಳೂರಿನಲ್ಲಿ ಸೆರೆಸಿಕ್ಕ ಮತ್ತೂಬ್ಬ ಆರೋಪಿ ಆದಿಲ್ ಶೇಖ್ ಎಂಬುದು ಬಹಿರಂಗಗೊಂಡಿದೆ. ಪ್ರಕರಣದ ಇತರೆ ಆರೋಪಿಗಳಾದ ಪೈಗಂಬರ್ ಶೇಖ್, ಅಹಮದ್ ಅಲಿ, ನೂರ್ ಅಸ್ಲಾಂ ವಿರುದ್ಧ ಪಾಟ್ನಾ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖೀಸಿದ್ದಾರೆ.
Related Articles
Advertisement
ರಾಜ್ಯದ ಉಗ್ರ ಸೆಲ್‌ಗಳ ಬಗ್ಗೆ ಶೋಧ ಮುಂದುವರಿಕೆ: ಆಗಸ್ಟ್ 7ರಂದು ರಾಮನಗರದಲ್ಲಿ ಉಗ್ರ ಕೌಸರ್ ಹಾಗೂ ದಂಡು ರೈಲು ನಿಲ್ದಾಣದಲ್ಲಿ ಆದಿಲ್ ಶೇಖ್ ಸೆರೆಸಿಕ್ಕಿದ್ದು ರಾಜ್ಯ ಉಗ್ರರ ಅಡಗುತಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜತೆಗೆ ತಲೆಮರೆಸಿಕೊಂಡಿರುವ ಜೆಎಂಬಿ ಉಗ್ರ ಆರಿಫ್ ಹುಸೇನ್ ಕೂಡ ರಾಜ್ಯದಲ್ಲಿಯೇ ಆಶ್ರಯ ಪಡೆದುಕೊಂಡಿದ್ದಾನೆಯೇ ಎಂಬ ಶಂಕೆ ರಾಜ್ಯ ಗುಪ್ತಚರದಳ ಹಾಗೂ ಪೊಲೀಸ್ ಇಲಾಖೆಯನ್ನು ಕಾಡುತ್ತಿದೆ.
ಈ ನಿಟ್ಟಿನಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಗುಪ್ತಚರ ದಳ ಮತ್ತಷ್ಟು ಚುರುಕುಗೊಂಡಿದ್ದು, ರಾಮನಗರ, ತುಮಕೂರು, ಮಂಗಳೂರು ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಮಾಹಿತಿ ಕಲೆ ಹಾಕುತ್ತಿದೆ. ಮತ್ತೂಂದೆಡೆ ರಾಜ್ಯ ಉಗ್ರರ ಅಡುಗುತಾಣ ವಿಚಾರ ಸೆ.28ರಂದು ನಡೆದ ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳ ಸಭೆಯಲ್ಲೂ ಪ್ರಸ್ತಾಪವಾಗಿದೆ.
ವಿಶೇಷ ಎಂದರೆ ಡಿಜಿಪಿ ನೀಲಮಣಿ ರಾಜು, ಜೆಎಂಬಿ ಉಗ್ರರಾದ ಕೌಸರ್ ಹಾಗೂ ಆದಿಲ್‌ಶೇಖ್ ಬಂಧನ ವಿಚಾರ ಪ್ರಸ್ತಾಪಿಸಿ, ರಾಜ್ಯದಲ್ಲಿ ಉಗ್ರರು ಇನ್ನೂ ಅಡಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನೆರೆರಾಜ್ಯಗಳು ಪರಸ್ಪರ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.